ಸಿನಿವಾಣಿ

ಮೂರು ಕಥೆಗಳ ಟೊಮೆಟೋ, ಒಂದಕ್ಕೊಂದು ಬೆಸುಗೆ

ಬೆಂಗಳೂರು: ‘ಬೆಂಕಿಪಟ್ಣ’ ಚಿತ್ರದಲ್ಲಿ ಹೀರೋ ಆಗಿದ್ದ ಪ್ರತಾಪ್ ನಾರಾಯಣ್, ಈಗ ‘ದಿ ಕಲರ್ ಆಫ್ ಟೊಮೆಟೋ’ಎಂಬ ಚಿತ್ರದಲ್ಲಿ ಮತ್ತೊಮ್ಮೆ ನಾಯಕರಾಗಿ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪೋಸ್ಟರ್​ನ್ನು ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಎಸ್. ನಾರಾಯಣ್ ನಿರ್ದೇಶನದ ‘5ಡಿ’ ಚಿತ್ರವನ್ನು ನಿರ್ವಿುಸುತ್ತಿರುವ ಸ್ವಾತಿ ಕುಮಾರ್, ಈ ಚಿತ್ರಕ್ಕೂ ನಿರ್ವಪಕರು. ‘ರಾಜಧಾನಿ’, ‘ಭಾರತ್ ಸ್ಟೋರ್ಸ್’, ‘ಸಂತೆಯಲ್ಲಿ ನಿಂತ ಕಬೀರ’ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದ ತಾಯಿ ಲೋಕೇಶ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಈ ಚಿತ್ರದ ಕುರಿತು ಮಾತನಾಡುವ ತಾಯಿ ಲೋಕೇಶ್, ‘ಕೋಲಾರದಲ್ಲಿ ಬೆಳೆಯುವ ಟೊಮೆಟೊ ವಿಶ್ವದ ನಾನಾ ಭಾಗಕ್ಕೆ ಸಾಗಾಟವಾಗುತ್ತದೆ. ಇದು ಮಾದರಿ ಸ್ಥಳವೂ ಹೌದು. ಇಲ್ಲಿನ ಸೊಗಡಿನ ಕಥೆಯ ಜೊತೆಗೆ 7 ಊರುಗಳ ಸುತ್ತ ಇರುವ ಸಂಸ್ಕೃತಿ ಬದುಕನ್ನು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದೇವೆ. ಈ ಚಿತ್ರದಲ್ಲಿ 3 ಕಥೆಗಳು ಸಾಗಲಿದ್ದು, ಎಲ್ಲವೂ ಒಂದಕ್ಕೊಂದು ಬೆಸೆದು ಕೊಂಡಂತೆ ಇರುತ್ತದೆ’ ಎನ್ನುತ್ತಾರೆ.