ಡಾ. ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್, ಹಿರಣ್ಯಕಶಿಪು ಮತ್ತು ಪ್ರಹ್ಲಾದನಾಗಿ ಅಭಿನಯಿಸಿದ್ದು ಗೊತ್ತೇ ಇದೆ. ಆದರೆ, 1983ರಲ್ಲಿ ‘ಭಕ್ತ ಪ್ರಹ್ಲಾದ’ ಚಿತ್ರ ಬಿಡುಗಡೆಯಾಗುವುದಕ್ಕೆ ಮುನ್ನವೇ, ಪ್ರಹ್ಲಾದನ ಕುರಿತು ಎರಡು ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾದ ವಿಷಯಗಳು ಗೊತ್ತಿರಲಿಕ್ಕಿಲ್ಲ. ಪ್ರಹ್ಲಾದನ ಕುರಿತಾಗಿ ಕನ್ನಡದಲ್ಲಿ ಬಂದ ಮೊದಲ ಚಿತ್ರವೆಂದರೆ, ಅದು 1942ರಲ್ಲಿ ಬಿಡುಗಡೆಯಾದ ‘ಪ್ರಹ್ಲಾದ’.
ಈ ಚಿತ್ರದಲ್ಲಿ ಎಂ.ವಿ. ರಾಜಮ್ಮ, ಕೆ.ವಿ. ಅಚ್ಯುತರಾವ್, ಎ.ಎನ್. ಶೇಷಾಚಾರ್, ಕುಮಾರಿ ಚಂದ್ರಮ್ಮ ಮುಂತಾದವರು ನಟಿಸಿದ್ದರು. ನಂತರ 1958ರಲ್ಲಿ ‘ಭಕ್ತ ಪ್ರಹ್ಲಾದ’ ಎಂಬ ಇನ್ನೊಂದು ಚಿತ್ರ ಕನ್ನಡದಲ್ಲಿ ನಿರ್ವಣವಾಯಿತು. ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸಂಸ್ಥೆಯಡಿ ನಿರ್ವಣವಾದ ಈ ಚಿತ್ರದಲ್ಲಿ ಸುಬ್ಬಯ್ಯ ನಾಯ್ಡು ಹಿರಣ್ಯಕಶುಪುವಿನ ಪಾತ್ರ ಮಾಡಿದರೆ, ಪ್ರಹ್ಲಾದನಾಗಿ ಲೋಕೇಶ್ ನಟಿಸಿದ್ದರು.
ಇದು ಲೋಕೇಶ್ ಅಭಿನಯಿಸಿದ ಮೊದಲ ಚಿತ್ರವಾಗಿತ್ತು. ಉದಯಕುಮಾರ್, ನರಸಿಂಹರಾಜು ಮುಂತಾದವರು ನಟಿಸಿದ ಈ ಚಿತ್ರದಲ್ಲಿ 20 ಹಾಡುಗಳಿದ್ದುದು ವಿಶೇಷ. ಇದಾಗಿ, 25 ವರ್ಷಗಳ ನಂತರ ಪುನೀತ್ ಅಭಿನಯದ ‘ಭಕ್ತ ಪ್ರಹ್ಲಾದ’ ಚಿತ್ರ ಬಿಡುಗಡೆಯಾಗಿ, ತೆಲುಗಿಗೂ ಡಬ್ ಆಯಿತು.