ಈ ವಾರ ಇಬ್ಬರು ಎಲಿಮಿನೇಟ್​! ತಾಂಡವ್​ ರಾಮ್​ ದೊಡ್ಮನೆಗೆ ವಾಪಾಸ್​? ಹೊಸ ವೈಲ್ಡ್​ಕಾರ್ಡ್​ ಎಂಟ್ರಿಗಳು  
ಸಿನಿವಾಣಿ

ಈ ವಾರ ಇಬ್ಬರು ಎಲಿಮಿನೇಟ್​! ತಾಂಡವ್​ ರಾಮ್​ ದೊಡ್ಮನೆಗೆ ವಾಪಾಸ್​ ಬೆನ್ನಲ್ಲೇ ಹೊಸ ವೈಲ್ಡ್​ಕಾರ್ಡ್​ ಎಂಟ್ರಿಗಳು? | BBK13

ಈ ವಾರ ಮೊದಲೇ ಹೇಳಿದಂತೆ ಮಿಡ್​ ವೀಕ್​ ಎಲಿಮಿನೇಷನ್​ ವಾರದ ಮಧ್ಯೆ ಇರಲಿದೆ ಎಂಬುದು ಮನೆಯ ಸದಸ್ಯರಿಗೆ ಮುಂಚೆಯೇ ಗೊತ್ತಿತ್ತು. ಆದರೆ, ಟಾಸ್ಕ್​ಗಳಲ್ಲಿ ಗೆದ್ದ ಧನುಷ್​, ಆಸಿಯಾ, ಕಾವ್ಯ ಮತ್ತು ಕಿರಣ್​ ಶಾಸ್ತ್ರಿಗೆ ತಮ್ಮನ್ನು ಬಿಟ್ಟು ಉಳಿದವರನ್ನು ನೇರವಾಗಿ ನಾಮಿನೇಟ್​ ಮಾಡಬೇಕು ಎಂದು ಬಿಗ್ ಬಾಸ್​ ತಿಳಿಸಿದ್ದರು.

BBK13: ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಕನ್ನಡ ಸೀಸನ್ 13ರ ಘಟಾನುಘಟಿ ಸ್ಪರ್ಧಿಗಳ ಪೈಕಿ ಈ ವಾರ ತಾಂಡವ್​ ರಾಮ್​ ಮಿಡ್​ವೀಕ್​ ಎಲಿಮಿನೇಷನ್​ನಲ್ಲಿ ಮನೆಯಿಂದ ಹೊರಬಂದಿರುವುದು ಬಿಗ್ ಬಾಸ್​ ವೀಕ್ಷಕರಿಗೆ ಗೊತ್ತೇ ಇದೆ. ಈ ಮಧ್ಯೆ, ತಾಂಡವ್ ದೊಡ್ಮನೆಗೆ ವಾಪಾಸ್​ ಆಗಲಿದ್ದು, ಹೊಸ ವೈಲ್ಡ್​ಕಾರ್ಡ್​ ಎಂಟ್ರಿಗಳ ಸಾಧ್ಯತೆಗಳು ಜೋರಾಗಿವೆ.

ಈ ವಾರ ಮೊದಲೇ ಹೇಳಿದಂತೆ ಮಿಡ್​ ವೀಕ್​ ಎಲಿಮಿನೇಷನ್​ ವಾರದ ಮಧ್ಯೆ ಇರಲಿದೆ ಎಂಬುದು ಮನೆಯ ಸದಸ್ಯರಿಗೆ ಮುಂಚೆಯೇ ಗೊತ್ತಿತ್ತು. ಆದರೆ, ಟಾಸ್ಕ್​ಗಳಲ್ಲಿ ಗೆದ್ದ ಧನುಷ್​, ಆಸಿಯಾ, ಕಾವ್ಯ ಮತ್ತು ಕಿರಣ್​ ಶಾಸ್ತ್ರಿಗೆ ತಮ್ಮನ್ನು ಬಿಟ್ಟು ಉಳಿದವರನ್ನು ನೇರವಾಗಿ ನಾಮಿನೇಟ್​ ಮಾಡಬೇಕು ಎಂದು ಬಿಗ್ ಬಾಸ್​ ತಿಳಿಸಿದ್ದರು. ಅಂತೆಯೇ, ಸೌಂದರ್ಯ, ತಾಂಡವ್​, ಲಿಖಿತ್​ ಮತ್ತು ಜಗ್ಗ ಅವರ ಪೈಕಿ ತಾಂಡವ್​ ಎಲಿಮಿನೇಟೆಡ್​ ಎಂದು ಕೆಂಪು ಬಣ್ಣದ ಕಾರ್ಡ್​ನಲ್ಲಿ ಬರೆದಿದ್ದು ನೋಡಿ ಇಡೀ ಮನೆ ಮಂದಿ ಕೆಲ ನಿಮಿಷ ಗಪ್​ಚುಪ್​ ಆದರು.

ಈಗಾಗಲೇ ಮನೆಯಿಂದ ತಾಂಡವ್ ಹೊರಬಂದಿದ್ದಾರೆ ಎಂದೇ ಹೇಳಲಾಗಿದ್ದರೂ ವೀಕ್ಷಕರಿಗೆ ಮಾತ್ರ ಅವರು ಎಲಿಮಿನೇಟ್​ ಆಗಿಲ್ಲ ಎಂಬುದೇ ಭರವಸೆ. ಮತ್ತೊಂದೆಡೆ, ಮೂರನೇ ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ತಾಂಡವ್​ ಅವರನ್ನು ಹೊರತುಪಡಿಸಿ ಇನ್ನೂ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ ಎಂಬ ಸುದ್ದಿಗಳು ಇದೀಗ ಹೊರಬಿದ್ದಿವೆ. ಈ ಪೈಕಿ, ಅವಿನಾಶ್ ಮತ್ತು ವೈಷ್ಣವಿ ಹೆಸರುಗಳು ಕೇಳಿಬಂದಿದ್ದು, ಇದು ಎಷ್ಟು ನಿಜ ಎಂಬುದನ್ನು ವಾರಾಂತ್ಯದ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.

ಮತ್ತೊಂದೆಡೆ, ಭಾನುವಾರದ ಸಂಚಿಕೆಯಲ್ಲಿ ಮನೆಯೊಳಗೆ ತಾಂಡವ್ ರೀ-ಎಂಟ್ರಿ ಕೊಟ್ಟರೆ, ಅವರೊಟ್ಟಿಗೆ ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಕೂಡ ದೊಡ್ಮನೆ ಪ್ರವೇಶಿಸಲಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ. ಈ ಬಾರಿ ಹೊಸ ಸ್ಪರ್ಧಿಗಳ ಪಟ್ಟಿಯಲ್ಲಿ ಮೂವರು ಅಥವಾ ಎಷ್ಟು ಮಂದಿ ಬರುತ್ತಾರೆ? ಯಾವ ಸೆಲೆಬ್ರಿಟಿಗಳು ಈಗ ಮನೆಯೊಳಗಿರುವ ಸದಸ್ಯರಿಗೆ ಬಿಗ್ ಶಾಕ್ ನೀಡುತ್ತಾರೆ ಎಂಬುದನ್ನೂ ಕಾದು ತಿಳಿಯಬೇಕಿದೆ. ಈ ವೀಕೆಂಡ್​ನ ಸಂಚಿಕೆಗಳಲ್ಲಿ ಸಾಕಷ್ಟು ಟ್ವಿಸ್ಟ್​ಗಳು, ಎಕ್ಸಿಟ್​ ಮತ್ತು ಹೊಸ ಎಂಟ್ರಿಗಳು ಸದ್ಯ ಬಿಗ್ ಬಾಸ್​ ವೀಕ್ಷಕರಲ್ಲಿ ಭಾರಿ ಕುತೂಹಲ ಕೆರಳಿಸಿದೆ.