ಬೆಂಗಳೂರು: ಈ ವರ್ಷ ವಿಧಾನಸಭೆ ಚುನಾವಣೆಯ ಬಿಸಿ, ಐಪಿಎಲ್ ಕ್ರಿಕೆಟ್ ಬಿಜಿ ಸೇರಿ ಹಲವು ಏರು ಪೇರುಗಳ ನಡುವೆಯೂ ಕನ್ನಡ ಚಿತ್ರಗಳು ಪ್ರತಿ ವಾರ ಸರಾಸರಿ ನಾಲ್ಕು ಸಿನಿಮಾಗಳಂತೆ ಬಿಡುಗಡೆಯಾಗಿವೆ. ಇಂದು ಕೂಡ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿವೆ. ಹೀಗೆ ಭರ್ಜರಿ ಬೌಂಡರಿ ಬಾರಿಸುವ ಮೂಲಕ ಸ್ಯಾಂಡಲ್‌ವುಡ್ 37ನೇ ವಾರದಲ್ಲಿ 150 ಸಿನಿಮಾಗಳ ಗಡಿ ಮುಟ್ಟಿದೆ.
ತತ್ಸಮ ತದ್ಭವ:
ಮೇಘನಾ ರಾಜ್ ಸರ್ಜಾ ಹಾಗೂ ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ‘ತತ್ಸಮ ತದ್ಭವ’. ವಿಶಾಲ್ ಆತ್ರೇಯ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿರುವ ಚಿತ್ರವಿದು. ಒಂದು ಕೊಲೆಯ ಸುತ್ತ ಸಾಗುವ ಕಥೆಯಲ್ಲಿ ಕೊಲೆಗಾರನನ್ನು ಹುಡುಕುವ ಇನ್ವೆಸ್ಟಿಗೇಷನ್ ಕಥಾಹಂದರ ಹೊಂದಿರುವ, ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಚಿತ್ರ. ಮೇಘನಾ ರಾಜ್ ಬ್ರೇಕ್‌ನ ಬಳಿಕ ಮತ್ತೆ ಬೆಳ್ಳಿತೆರೆಗೆ ವಾಪಸ್ಸಾಗಿರುವುದು, ಕುತೂಹಲ ಮೂಡಿಸಿದೆ.
13:
‘ಪಲ್ಲಕ್ಕಿ’ ಖ್ಯಾತಿಯ ನರೇಂದ್ರ ಬಾಬು ನಿರ್ದೇಶನದ ಭಾವೈಕ್ಯತೆ ಕುರಿತಾದ ಸಿನಿಮಾ ‘13’. ಮೋಹನ್ - ಸಾಯಿರಾ ಭಾನು ಇಬ್ಬರೂ ಗಂಡ - ಹೆಂಡತಿ. ಒಂದು ಘಟನೆ ಅವರ ಜೀವನವನ್ನು ಹೇಗೆ ಬದಲಿಸುತ್ತದೆ? ಎಂಬುದರ ಸುತ್ತ ಕಥೆ ಸಾಗುತ್ತದೆ. ಮೋಹನ್ ಆಗಿ ರಾಘಣ್ಣ, ಸಾಯಿರಾ ಭಾನು ಪಾತ್ರದಲ್ಲಿ ಶೃತಿ ನಟಿಸಿದ್ದಾರೆ.
ಇನ್ನೆರಡು ಸಿನಿಮಾಗಳು:
ಗಿರಿಧರ್ ಎಚ್.ಟಿ ನಿರ್ದೇಶನದ ವಿನೋದ್ ಶೇಷಾದ್ರಿ, ಕೋಮಲ ಬನವಾಸಿ ಅಭಿನಯಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಪರಿಮಳ ಡಿಸೋಜ’ ಹಾಗೂ ಅಥರ್ವ್ ವಿಜಯ್, ರಮೋಲಾ ಶಿವಮೊಗ್ಗ ನಟಿಸಿರುವ ರಾಜೀವ್ ಕಿರಣ್ ವನೇಲಿ ಆ್ಯಕ್ಷನ್-ಕಟ್ ಹೇಳಿರುವ ಮಿಸ್ಟರಿ ಸಿನಿಮಾ ‘ಟೇಲ್ಸ್ ಆ್ ಮಹಾನಗರ’ ಕೂಡ ಇಂದು ತೆರೆಕಾಣುತ್ತಿವೆ.