ಈ ವಾರ 'ಬಿಗ್' ಮನೆಯಿಂದ ಹೊರಬಿದ್ದ ಮೊದಲ ಕಾಮ್​ನ್​ಮ್ಯಾನ್​ ಸ್ಪರ್ಧಿ ಇವರೇ... | BBK13  
ಸಿನಿವಾಣಿ

ಈ ವಾರ 'ಬಿಗ್' ಮನೆಯಿಂದ ಹೊರಬಿದ್ದ ಮೊದಲ ಕಾಮ​ನ್​ಮ್ಯಾನ್​ ಸ್ಪರ್ಧಿ ಇವರೇ... | BBK13

ಬಿಗ್​ಬಾಸ್​ ವೀಕ್ಷಕರನ್ನು ಮಾತ್ರವಲ್ಲದೇ ಸ್ವತಃ ನಿರೂಪಕ ಕಿಚ್ಚ ಸುದೀಪ್​ ಅವರಿಗೂ ಬೇಸರ ತಂದಿದೆ. ಮತ್ತೊಂದೆಡೆ, ಮನೆಗೆ ವಾಪಾಸ್​ ಬಂದ ತಾಂಡವ್​ ರಾಮ್​ ಕ್ಯಾಪ್ಟನ್​ ಆಗಿ ಆಯ್ಕೆ ಆದರೂ ಮನೆಯ ಸದಸ್ಯರ ನಡುವಿನ ಜಗಳ ಮನಸ್ತಾಪ ಎಂದಿನಂತೆ ಜೋರಾಗಿಯೇ ಸಾಗಿದೆ.

BBK13: ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಕನ್ನಡ ಸೀಸನ್ 13ರ ನಾಲ್ಕನೇ ವಾರದಲ್ಲಿ ಎಂಟ್ರಿಕೊಟ್ಟ ಮೂವರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಆರಂಭದಲ್ಲಿ ಕಿಚ್ಚು ಹಚ್ಚಿದಂತೆ ಕಂಡರೂ ನಂತರದ ದಿನಗಳಲ್ಲಿ ಠುಸ್​ ಆಗಿದ್ದು ಸದ್ಯ ಬಿಗ್​ಬಾಸ್​ ವೀಕ್ಷಕರನ್ನು ಮಾತ್ರವಲ್ಲದೇ ಸ್ವತಃ ನಿರೂಪಕ ಕಿಚ್ಚ ಸುದೀಪ್​ ಅವರಿಗೂ ಬೇಸರ ತಂದಿದೆ. ಮತ್ತೊಂದೆಡೆ, ಮನೆಗೆ ವಾಪಾಸ್​ ಬಂದ ತಾಂಡವ್​ ರಾಮ್​ ಕ್ಯಾಪ್ಟನ್​ ಆಗಿ ಆಯ್ಕೆ ಆದರೂ ಮನೆಯ ಸದಸ್ಯರ ನಡುವಿನ ಜಗಳ ಮನಸ್ತಾಪ ಎಂದಿನಂತೆ ಜೋರಾಗಿಯೇ ಸಾಗಿದೆ.

ಕಳೆದ ವಾರ ಟ್ವಿಸ್ಟ್​, ಡಬಲ್​ ಎಕ್ಸಿಟ್​ ಬಳಿಕ ಹೊಸದಾಗಿ ವೈಲ್ಡ್​ ಕಾರ್ಡ್​ ಪಟ್ಟಿಯಲ್ಲಿ ಮನೆ ಪ್ರವೇಶಿಸಿದ ಗಾನವಿ ಗೌಡ, ಸೋನಿಕಾ ಮತ್ತು ಪ್ರಶಾಂತ್​, ಮನೆ ಮಂದಿಗೆಲ್ಲ ತಮ್ಮ ಖಡಕ್​ ಮತ್ತು ಖಾರದ ಮಾತಿನಿಂದಲೇ ಕೌಂಟರ್​ಗಳನ್ನು ಕೊಟ್ಟಿದ್ದೇ ಆದರೂ ಅಷ್ಟಾಗಿ ಸದ್ದು ಮಾಡಲಿಲ್ಲ. ಇದು ಒಂದೆಡೆಯಾದರೆ, ಈ ವಾರ ಮಂಜು ಮತ್ತು ಲಿಖಿತ್ ಉಸ್ತುವಾರಿಗಳಾಗಿ ತೆಗೆದುಕೊಂಡ ನಿರ್ಧಾರಗಳು ಮತ್ತು ಆಟದ ವೈಖರಿಗೆ ವಾರದ ಪಂಚಾಯಿತಿಯಲ್ಲಿ ಕಿಚ್ಚನಿಂದ ಖಡಕ್​ ಕ್ಲಾಸ್​ ಕೂಡ ಸಿಕ್ಕಾಗಿದೆ. ಇನ್ನು, ಭಾನುವಾರ ಸಂಚಿಕೆಯಲ್ಲಿ ಯಾರಪ್ಪ ಈ ವಾರ ಎಲಿಮಿನೇಟ್​ ಆಗಿದ್ದು ಎಂಬ ವಿಷಯಕ್ಕೆ ಅದಾಗಲೇ ಉತ್ತರ ಸಿಕ್ಕಂತಾಗಿದೆ.

ಮಂಜು, ಲಿಖಿತ್, ಕಿರಣ್​​ ಶಾಸ್ತ್ರಿ, ಧನುಷ್​, ಯಶಸ್​ ಮತ್ತು ಸಂಗೀತಾ ಭಟ್​ ಸೇರಿ ಒಟ್ಟು ಆರು ಮಂದಿ ಈ ವಾರ ನಾಮಿನೇಟ್​ ಆಗಿ ಹಾಟ್​ ಸೀಟ್​ನಲ್ಲಿ ಕುಳಿತಿದ್ದಾರೆ. ಇವರ ಪೈಕಿ ಒಬ್ಬರು ನಾಲ್ಕನೇ ವಾರದ ಕೊನೆಯಲ್ಲಿ ದೊಡ್ಮೆನೆಗೆ ಗುಡ್​ಬೈ ಹೇಳುವುದು ಖಚಿತವಾಗಿದೆ. ಅಂತೆಯೇ, ಯಾರು ಹೋಗಬಹುದು ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿದ್ದೇ ತಡ ಬಿಗ್​ಬಾಸ್​ ವೀಕ್ಷಕರು ಲಿಖಿತ್ ಅಥವಾ ಕಿರಣ್ ಇರಬಹುದು​ ಎಂದು ಊಹಿಸಿದ್ದರು. ಸಿನಿ ಮೂಲಗಳ ಪ್ರಕಾರ, ಲಿಖಿತ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಎಂದು ತಿಳಿಸಲಾಗಿದೆ. ಆದರೆ, ಇದೆಷ್ಟು ನಿಜ ಎಂಬುದನ್ನು ಸಂಚಿಕೆಯ ಕೊನೆಯವರೆಗೂ ಕಾದು ನೋಡಬೇಕಿದೆ.