ದೇಶದ ಅತ್ಯಂತ ಕೊಳಕು ರೈಲ್ವೆ ಸ್ಟೇಷನ್​ ಯಾವುದು ಗೊತ್ತಿದ್ಯಾ? ಇಲ್ಲಿದೆ ನೋಡಿ ನಿಮ್ಮ ಹುಬ್ಬೇರಿಸುವ ವರದಿ | Dirtiest Railway Station

ಇನ್ನೂ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ದೂರನ್ನು ತಲುಪಿಸುತ್ತಾರೆ. ಇದೆಲ್ಲದರ ನಡುವೆ, ಭಾರತದ ಅಗ್ರ ಐದು ಕೊಳಕು ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಯಾವ ರಾಜ್ಯದ ರೈಲ್ವೆ ನಿಲ್ದಾಣಗಳಿವೆ ಎಂಬುದನ್ನು ಇಲ್ಲಿ ಗಮನಿಸೋಣ ಬನ್ನಿ.
Dirtiest Railway Station
ದೇಶದ ಅತ್ಯಂತ ಕೊಳಕು ರೈಲ್ವೆ ಸ್ಟೇಷನ್​ ಯಾವುದು ಗೊತ್ತಿದ್ಯಾ? ಇಲ್ಲಿದೆ ನೋಡಿ ನಿಮ್ಮ ಹುಬ್ಬೇರಿಸುವ ವರದಿ | Dirtiest Railway Station
Published on: 

ನವದೆಹಲಿ: ಬಸ್​ ಮತ್ತು ವಿಮಾನಕ್ಕಿಂತ ಬಹಳ ಅಗ್ಗದ ಬೆಲೆಯಲ್ಲಿ ಸಾವಿರಾರೂ ಕಿ.ಮೀ ದೂರದ ಊರುಗಳಿಗೆ ಸುಲಭವಾಗಿ ಪ್ರಯಾಣಿಸಲು ರೈಲುಗಳನ್ನೇ ಹೆಚ್ಚಾಗಿ ಆಯ್ಕೆ ಮಾಡುವ ಜನರು, ಸುರಕ್ಷಿತ ಹಾಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ತಮ್ಮಿಷ್ಟದ ಸ್ಥಳಗಳಿಗೆ ಹೋಗುವುದು ಬಹುತೇಕರಿಗೆ ಗೊತ್ತಿರುವ ಸಂಗತಿ. ಈ ಮಧ್ಯೆ, ರೈಲುಗಳಲ್ಲಿನ ಸ್ವಚ್ಛತೆ ಬಗ್ಗೆ ಆಗಾಗ್ಗೆ ಪ್ರಶ್ನಿಸುವ ಕೆಲವರು, ದೇಶದ ತೀರ ಕೊಳಕು ರೈಲ್ವೆ ನಿಲ್ದಾಣದ ಬಗ್ಗೆಯೂ ತಿಳಿದರೆ ಉತ್ತಮ.

ಭಾರತದಲ್ಲಿ ಒಟ್ಟು 7349 ರೈಲು ನಿಲ್ದಾಣಗಳಿವೆ. ಪ್ರತಿದಿನ ಸುಮಾರು ಎರಡೂವರೆ ಕೋಟಿ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪ್ರತಿದಿನ ಮೆಮೋ, ಎಕ್ಸ್​ಪ್ರೆಸ್ ರೈಲುಗಳು​ ಮತ್ತು ವಂದೇ ಭಾರತ್​ ರೈಲುಗಳಲ್ಲಿ ಹೆಚ್ಚಾಗಿ ಪ್ರಯಾಣಿಸುವ ಲಕ್ಷಾಂತರ ಮಂದಿ, ತಮ್ಮ ಕಣ್ಣಿಗೆ ಬೀಳುವ ಒಂದಷ್ಟು ಸಮಸ್ಯೆಗಳನ್ನು ನೇರವಾಗಿ ರೈಲ್ವೆ ಇಲಾಖೆಗೆ ತಿಳಿಸಿದರೆ, ಇನ್ನೂ ಹಲವರು ಸಾಮಾಜಿಕ ಜಾಲತಾಣಗಳ ಮೂಲಕ ದೂರನ್ನು ತಲುಪಿಸುತ್ತಾರೆ. ಇದೆಲ್ಲದರ ನಡುವೆ, ಭಾರತದ ಅಗ್ರ ಐದು ಕೊಳಕು ರೈಲು ನಿಲ್ದಾಣಗಳ ಪಟ್ಟಿಯಲ್ಲಿ ಯಾವ ರಾಜ್ಯದ ರೈಲ್ವೆ ನಿಲ್ದಾಣಗಳಿವೆ ಎಂಬುದನ್ನು ಇಲ್ಲಿ ಗಮನಿಸೋಣ ಬನ್ನಿ.

Also Read
ರಾಜಮೌಳಿ, ಪ್ರಿನ್ಸ್​ ಚಿತ್ರಕ್ಕೆ ಹಾಲಿವುಡ್​ ನಟಿ ಎಂಟ್ರಿ! ಬಹುನಿರೀಕ್ಷಿತ ಬಿಗ್ ಬಜೆಟ್​ 'ವಾರಣಾಸಿ'ಯ ಈ ಬೆಡಗಿ ಯಾರು? | Varanasi Movie
Dirtiest Railway Station

2019ರಲ್ಲಿ ರೈಲ್ವೆ ಸಚಿವಾಲಯ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ) ಅಡಿಯಲ್ಲಿ ಪ್ರಕಟಿಸಿದ ವರದಿ ಇದಾಗಿದ್ದು, 1.2 ಮಿಲಿಯನ್ ಪ್ರಯಾಣಿಕರ ಪ್ರತಿಕ್ರಿಯೆಯನ್ನು ಆಧರಿಸಿ ದೇಶಾದ್ಯಂತ ರೈಲು ನಿಲ್ದಾಣಗಳ ಸ್ವಚ್ಛತೆಯನ್ನು ಮುಖ್ಯ ಅಂಶವಾಗಿ ಪರಿಗಣಿಸಿದ ಬಳಿಕವೇ ಶ್ರೇಣಿಯ ಮೂಲಕ ಪಟ್ಟಿಯಲ್ಲಿ ಸ್ಥಾನ ಕೊಡಲಾಗಿದೆ. ಈ ಸಮೀಕ್ಷೆಯ ಬಳಿಕ ಹೊಸದಾಗಿ ಯಾವುದೂ ನಡೆದಿಲ್ಲ ಮತ್ತು ವರದಿಯಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ.

ಅಗ್ರ 5 ಕೊಳಕು ರೈಲು ನಿಲ್ದಾಣ

1. ಪೆರುಂಗಲತ್ತೂರ್ ರೈಲು ನಿಲ್ದಾಣ (ತಮಿಳುನಾಡು)

2. ಗಿಂಡಿ ರೈಲು ನಿಲ್ದಾಣ (ತಮಿಳುನಾಡು)

3. ಸದರ್ ಬಜಾರ್ ರೈಲು ನಿಲ್ದಾಣ (ನವದೆಹಲಿ)

4. ವೆಲಚೇರಿ ರೈಲು ನಿಲ್ದಾಣ (ತಮಿಳುನಾಡು)

5. ಗುಡುವಂಚೇರಿ ರೈಲು ನಿಲ್ದಾಣ (ತಮಿಳುನಾಡು).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net