ಸಿನಿವಾಣಿ

ಹಾಗಾದರೆ ವದಂತಿಗಳು ನಿಜ... ಕೊನೆಗೂ ಮದುವೆಗೆ ರೆಡಿಯಾದ ಸೌತ್​ ಬ್ಯೂಟಿ ತ್ರಿಷಾ! ವರನ್ಯಾರು ಗೊತ್ತೇ? Trisha

Trisha : ಬಹುಭಾಷ ನಟಿ ತ್ರಿಷಾ ಅವರವನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್​ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್​, ಸೂರ್ಯ, ವಿಕ್ರಮ್, ಪ್ರಭಾಸ್​, ಚಿರಂಜೀವಿ, ಅಜಿತ್​, ಸಿಂಬು ಸೇರಿದಂತೆ ಸ್ಟಾರ್​ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್​ ರಾಜ್​ಕುಮಾರ್​ ಅಭಿನಯದ ಪವರ್​ಸ್ಟಾರ್​ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

ತ್ರಿಷಾ ಭಾರತದ ಚಿತ್ರರಂಗದ ಸಾರ್ವಕಾಲಿಕ ರಾಣಿ. ಹೆಚ್ಚು ಗಾಸಿಪ್‌ಗಳಲ್ಲಿ ಕಾಣಿಸಿಕೊಳ್ಳದ ನಟಿ. ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿರುವ ತ್ರಿಷಾ, 40 ವರ್ಷ ವಯಸ್ಸಾದರೂ ಇನ್ನೂ ಬ್ಯಾಚುಲರ್​ ಆಗಿಯೇ ಉಳಿದಿದ್ದಾರೆ. ಈ ಹಿಂದೆ ನಟ ಸಿಂಬು ಮತ್ತು ರಾಣ ದಗ್ಗುಬಾಟಿ ಅವರ ಜೊತೆ ತ್ರಿಷಾ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದು ವದಂತಿಯಾಗಿಯೇ ಉಳಿಯಿತು. ಇದರ ನಡುವೆ ತ್ರಿಷಾ ಅವರು 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಇದು ಬಹಳ ಸುದ್ದಿಯಾಗಿತ್ತು. ಅಲ್ಲದೆ, ನಿಶ್ಚಿತಾರ್ಥದ ಫೋಟೋಗಳು ಸಹ ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಆದರೆ, ಇಬ್ಬರ ನಡುವೆ ಏನಾಯಿತೋ ಗೊತ್ತಿಲ್ಲ, ಏಕಾಏಕಿ ಇಬ್ಬರೂ ಬೇರ್ಪಟ್ಟರು! ಮದುವೆಯೂ ನಿಂತುಹೋಯಿತು.

ಅನೇಕ ದಿನಗಳಿಂದ ತ್ರಿಷಾ ಮದುವೆ ಕುರಿತು ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇದೆ. ತ್ರಿಷಾ ಮದುವೆ ಆಗ್ತಾರಾ ಅನ್ನೋ ಪ್ರಶ್ನೆ ಸಹ ಕಾಡುತ್ತಿದೆ. ಇದರ ಮಧ್ಯೆ ಇದೀಗ ತ್ರಿಷಾ ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋ ಮತ್ತೆ ಮದುವೆ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರೀತಿ ಯಾವಾಗಲೂ ಗೆಲ್ಲುತ್ತದೆ ಎಂಬ ಟೈಟಲ್​ನೊಂದಿಗೆ ತ್ರಿಷಾ ಹಂಚಿಕೊಂಡಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಫೋಟೋದಲ್ಲಿ ಹಸಿರು ರೇಷ್ಮೆ ಸೀರೆ ಮತ್ತು ಸಾಂಪ್ರದಾಯಿಕ ಆಭರಣಗಳಲ್ಲಿ ತ್ರಿಶಾ ವಧುವಿನಂತೆ ಸುಂದರವಾಗಿ ಕಾಣುತ್ತಿದ್ದಾರೆ.

ಗಮನಾರ್ಹ ಸಂಗತಿ ಏನೆಂದರೆ, ಫೋಟೋದಲ್ಲಿ ತ್ರಿಷಾ ಮಲ್ಲಿಗೆ ಹೂವು ಮುಡಿದಿದ್ದಾರೆ. ಆ ಹೂವನ್ನು ಯಾರೋ ಮುಡಿಸುತ್ತಿದ್ದಾರೆ. ಹೀಗಾಗಿ ಮದುವೆ ಚರ್ಚೆ ಗರಿಗೆದರಿದೆ. ಹೂವು ಮುಡಿಸುತ್ತಿರುವುದು ಭಾವಿ ಪತಿಯೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ, ಅದು ಯಾರೆಂಬುದು ತ್ರಿಷಾಗೆ ಮಾತ್ರ ಗೊತ್ತು. ಮುಂದಿನ ದಿನಗಳಲ್ಲಿ ಮದುವೆ ಬಗ್ಗೆ ಇನಷ್ಟು ಸ್ಪಷ್ಟತೆ ಸಿಗಬಹುದು. ಆದರೆ, ಫೋಟೋ ವೈರಲ್​ ಆಗಿದ್ದು, ಮದುವೆ ಯಾವಾಗ? ಎಂದು ನೆಟ್ಟಿಗರು ಕಾಮೆಂಟ್‌ಗಳ ಮೂಲಕ ಕೇಳುತ್ತಿದ್ದಾರೆ. ಅಲ್ಲದೆ, ವದಂತಿಗಳು ನಿಜವಾಗಿವೆ. ತ್ರಿಷಾ ಕೊನೆಗೂ ಮದುವೆಯಾಗುತ್ತಿದ್ದಾರೆ ಎಂಬ ಕಾಮೆಂಟ್​ಗಳು ಹರಿದು ಬರುತ್ತಿವೆ.

ಇನ್ನು ತ್ರಿಷಾ ಹಂಚಿಕೊಂಡಿರುವ ಫೋಟೋವನ್ನು ಮಂಜಿಮಾ ಮೋಹನ್ ಮತ್ತು ಕೀರ್ತಿ ಸುರೇಶ್ ಸೇರಿದಂತೆ ಅನೇಕ ಸಿನಿಮಾ ತಾರೆಯರು ಲೈಕ್​ ಮಾಡಿದ್ದಾರೆ. ಅಲ್ಲದೆ, ಕಾಮೆಂಟ್ ಸಹ ಮಾಡಿದ್ದಾರೆ.

ಅಂದಹಾಗೆ ತ್ರಿಷಾ ತಮ್ಮ ವೈಯಕ್ತಿಕ ಜೀವನದ ವಿವರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಇಜ್ಜಿ ಎಂಬ ನಾಯಿಮರಿಯನ್ನು ದತ್ತು ಪಡೆದ ಸುದ್ದಿಯನ್ನು ತ್ರಿಷಾ ಹಂಚಿಕೊಂಡರು. ಅವರು ಇನ್​ಸ್ಟಾಗ್ರಾಂನಲ್ಲಿ ನಾಯಿಮರಿಯ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಸಾಕು ನಾಯಿ 'ಝೋರೋ' ನಿಧನವಾದ ಸುದ್ದಿಯನ್ನು ಈ ಹಿಂದೆ ಹೇಳಿಕೊಂಡು ಬೇಸರ ಹೊರಹಾಕಿದ್ದರು. (ಏಜೆನ್ಸೀಸ್​)