ಸಿನಿವಾಣಿ

'RRR' ಚಿತ್ರಕ್ಕೆ ಜೂ.ಎನ್​ಟಿಆರ್, ರಾಮ್​ಚರಣ್ ಪಡೆದ ಸಂಭಾವನೆ ಎಷ್ಟು ಕೋಟಿ ಕೇಳಿದ್ರೆ ಶಾಕ್ ಆಗ್ತೀರಾ?

'ಬಾಹುಬಲಿ'ಯಂತಹ ಸೀಕ್ವೇಲ್ ಸಿನಿಮಾಗಳನ್ನು ನೀಡಿದ ಯಶಸ್ವಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ 'RRR'. ಈ ಸಿನಿಮಾ ರಿಲೀಸ್​ಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದರ ಜೊತೆಗೆ, ಸಿನಿಮಾದಲ್ಲಿ ನಟಿಸಿದ ನಟ, ನಟಿಯರ ಸಂಭಾವನೆಯ ಸುದ್ದಿಗಳು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿವೆ. ಹಾಗಾದರೆ, ಚಿತ್ರದಲ್ಲಿ ಯಾರು ಯಾರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಅಂತೀರಾ?
'RRR' ಚಿತ್ರದ ಪ್ರಮುಖ ಹೈಲೈಟ್ ಎಂದರೆ ಅದು ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ನಟ ರಾಮ್ ಚರಣ್ ತೇಜ್, ನಟ ಜೂ.ಎನ್​​ಟಿಆರ್. ಇವರಿಬ್ಬರು ಒಟ್ಟಿಗೆ ನಟಿಸಿರುವುದು ಅಭಿಮಾನಿಗಳಿಗೆ ಚಿತ್ರದ ಮೇಲಿರುವ ಕುತೂಹಲವನ್ನು ಹೆಚ್ಚಿಸಿದೆ. ಇಲ್ಲಿ ಮೊತ್ತೊಂದು ಹೈಲೈಟ್ ಅಂದರೆ ಈ ಇಬ್ಬರು ನಟರು 'RRR' ಸಿನಿಮಾದ ಕನ್ನಡ ಅವರತರಣಿಕೆಗೆ ಡಬ್ಬಿಂಗ್ ಮಾಡಿರುವುದು. ಜೊತೆಗೆ, ನಟರಿಬ್ಬರೂ ಚಿತ್ರಕ್ಕೆ ಸಮಾನವಾಗಿ ಸಂಭಾವನೆ ಪಡೆದಿದ್ದಾರೆ. ನಟರಾದ ಜೂ.ಎನ್​ಟಿಆರ್, ರಾಮ್​ ಚರಣ್ ಒಟ್ಟಿಗೆ ಬರೋಬ್ಬರಿ 45 ಕೋಟಿ ರೂ. ಸಂಭಾವನೆ ತೆಗೆದುಕೊಂಡಿದ್ದಾರಂತೆ. 
ಇದಿಷ್ಟೇ ಅಲ್ಲದೇ, ಚಿತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ಬರೋಬ್ಬರಿ 8 ಕೋಟಿ ರೂ. ಮತ್ತು ನಟ ಅಜಯ್ ದೇವ್​ಗನ್ 25 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು, ಯಶಸ್ವಿ ನಿರ್ದೇಶಕರಾದ ಎಸ್.ಎಸ್.ರಾಜಮೌಳಿ ಅವರಿಗೆ ಚಿತ್ರದ ಗಳಿಕೆಯಲ್ಲಿ ಶೇ.25 ರಷ್ಟು ಪಾಲು ಸಿಗಲಿದೆ. ಸದ್ಯ, ನಟರ ಮತ್ತು ನಿರ್ದೇಶಕರ ಸಂಭಾವನೆ ಮಾಹಿತಿಗಳ ಬಗ್ಗೆ ಕೇಳಿದ ಸಿನಿಪ್ರೇಕ್ಷಕರು ಹುಬ್ಬೇರಿಸಿದ್ದಾರೆ.