ಸಿನಿವಾಣಿ

ನಟಿ ನಗ್ಮಾ ಜತೆ ವಿವಾಹೇತರ ಸಂಬಂಧ ವದಂತಿ: ಕೊನೆಗೂ ಮೌನ ಮುರಿದ ನಟ ರವಿಕಿಶನ್​

ಹೈದರಾಬಾದ್​: ಕಿಚ್ಚ ಸುದೀಪ್​ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ಖಡಕ್​ ವಿಲ್ಲನ್​ ಆಗಿ ಅಭಿನಯಿಸಿದ್ದ ಭೋಜ್​ಪುರಿ ನಟ ರವಿಕಿಶನ್ ಬಿಜೆಪಿ ಸಂಸದರೂ ಹೌದು. ನಟಿ ಹಾಗೂ ಕಾಂಗ್ರೆಸ್​ ನಾಯಕಿ ನಗ್ಮಾ ಅವರೊಂದಿಗೆ ರವಿಕಿಶನ್​ಗೆ ವಿವಾಹೇತರ ಸಂಬಂಧ ಇತ್ತು ಎಂಬ ವದಂತಿ ಹಬ್ಬಿತ್ತು. ಇದೀಗ ಆ ವದಂತಿಗೆ ರವಿಕಿಶನ್​ ಅವರೇ ಸ್ವತಃ ಸ್ಪಷ್ಟನೆ ನೀಡಿದ್ದಾರೆ.

ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರಿಂದ ನಮ್ಮ ಸಂಬಂಧದ ಬಗ್ಗೆ ಹಲವು ವದಂತಿಗಳು ಸರಳವಾಗಿ ಹರಡಿಕೊಂಡಿವೆ ಎಂದು ರವಿಕಿಶನ್​ ವಿವರಿಸಿದರು.

ಯಶಸ್ವಿ ನಟನಾ ವೃತ್ತಿಜೀವನದ ನಂತರ ರಾಜಕೀಯಕ್ಕೆ ಪ್ರವೇಶಿಸಿರುವ ರವಿ ಕಿಶನ್, ಜನಪ್ರಿಯ ಕಾರ್ಯಕ್ರಮವಾದ ಆಪ್ ಕಿ ಅದಾಲತ್‌ನಲ್ಲಿ ನಗ್ಮಾ ಜೊತೆಗಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಇಬ್ಬರೂ ಒಳ್ಳೆ ಫ್ರೆಂಡ್ಸ್ ಆಗಿರುವುದರಿಂದ ಹೆಚ್ಚು ಸಿನಿಮಾ ಒಟ್ಟಿಗೆ ಮಾಡಿದ್ದೇವೆ ಎಂದು ರವಿ ಕಿಶನ್ ಹೇಳಿದ್ದಾರೆ. ಇದಲ್ಲದೆ, ನಾನು ಮದುವೆಯಾಗಿರುವುದು ಎಲ್ಲರಿಗೂ ತಿಳಿದಿತ್ತು ಎಂದು ವದಂತಿಗೆ ತೆರೆಎಳೆದರು.

ನನಗೆ ಈಗಾಗಲೇ ಮದುವೆಯಾಗಿದೆ. ನನ್ನ ಪತ್ನಿ ಪ್ರೀತಿ ಶುಕ್ಲಾ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ನಾನು ಅವಳ ಪಾದಗಳಿಗೆ ನಮಸ್ಕರಿಸುತ್ತೇನೆ. ನನ್ನ ಹೆಂಡತಿ ಮೊದಲಿನಿಂದಲೂ ನನ್ನೊಂದಿಗಿದ್ದಾಳೆ. ನನ್ನ ಬಳಿ ಹಣವಿಲ್ಲದಿದ್ದಾಗಲೂ ಅವಳು ನನ್ನೊಂದಿಗೆ ಇದ್ದಳು. ಆದರೆ ನನ್ನ ಚಿತ್ರಗಳು ಸತತವಾಗಿ ಹಿಟ್ ಆಗುತ್ತಿದ್ದಂತೆ ನನಗೆ ತುಂಬಾ ಹೆಮ್ಮೆ ಎನಿಸಿತು ಮತ್ತು ಆ ಸಮಯದಲ್ಲಿ ನನ್ನ ಹೆಂಡತಿ ನನಗೆ ಬಿಗ್ ಬಾಸ್ ಶೋಗೆ ಹೋಗುವಂತೆ ಸೂಚಿಸಿದಳು. ಮೊದಲಿಗೆ ನನಗೆ ಇಷ್ಟವಾಗಲಿಲ್ಲ ಆದರೆ, ನಂತರ ನಾನು ಹೋದೆ. ಮೂರು ತಿಂಗಳು ಬಿಗ್​ಬಾಸ್​ ಮನೆಯಲ್ಲಿದ್ದಾಗ ನನ್ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದರು.

ಬಿಗ್​ಬಾಸ್​ ಕಾರ್ಯಕ್ರಮದ ಮೂಲಕ ನಾನು ಜನಪ್ರಿಯತೆ ಗಳಿಸಿದ್ದು ಮಾತ್ರವಲ್ಲದೆ ವ್ಯಕ್ತಿಯಾಗಿ ಸಾಕಷ್ಟು ಬದಲಾವಣೆ ಹೊಂದಿ ಸಾಮಾನ್ಯ ವ್ಯಕ್ತಿಯಾಗಿದ್ದೇನೆ. ಅದರ ನಂತರ ನಾನು ನನ್ನ ಕುಟುಂಬ ಮತ್ತು ನನ್ನ ಹೆಂಡತಿಯ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು. (ಏಜೆನ್ಸೀಸ್​)