ಓಟಿಟಿ ವೇದಿಕೆ ಎಲ್ಲರ ಗಮನ ಸೆಳೆಯುತ್ತಿದೆ. ಸ್ಟಾರ್ ಸಿನಿಮಾ ನಟರು ಸಿನಿಮಾದ ಜತೆಗೆ ವೆಬ್ಸಿರೀಸ್ಗಳ ಭಾಗವಾಗುತ್ತಿದೆ. ಇತ್ತೀಚೆಗಷ್ಟೇ ಅಭಿಷೇಕ್ ಬಚ್ಚನ್ ಬ್ರೀಥ್ ವೆಬ್ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಅದೇ ರೀತಿ ಇನ್ನೂ ಹಲವು ನಟರು ವೆಬ್ಸಿರೀಸ್ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಅದೇ ರೀತಿ ಇದೀಗ ಬಾಲಿವುಡ್ ನಟ ಶಾಹಿದ್ ಕಪೂರ್ ಸಹ ವೆಬ್ ಸರಣಿಯತ್ತ ದೃಷ್ಟಿ ನೆಟ್ಟಿದ್ದಾರೆ.
ಅಚ್ಚರಿ ವಿಚಾರ ಏನೆಂದರೆ, ಈ ವೆಬ್ ಸರಣಿಯನ್ನು ದಕ್ಷಿಣ ಭಾರತದ ಟಾಲಿವುಡ್ನ ಇಬ್ಬರು ನಿರ್ದೇಶಕರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ರಾಜ್ ನಿಡಿಮೊರು ಮತ್ತು ಕೃಷ್ಣ ಡಿಕೆ ಈಗಾಗಲೇ ಫ್ಯಾಮಿಲಿ ಮ್ಯಾನ್ ಮೂಲಕ ಸದ್ದು ಮಾಡಿದ್ದಾರೆ. ಸಮಂತಾ ಅವರನ್ನೂ ಎರಡನೇ ಸೀಸನ್ನಲ್ಲಿ ಪರಿಚಯಿಸುತ್ತಿದ್ದಾರೆ. ಇದೀಗ ಶಅಹಿದ್ ಕಪೂರ್ಗೂ ವೆಬ್ಸಿರೀಸ್ ಬಗ್ಗೆ ಅಪ್ರೊಚ್ ಮಾಡಿದ್ದಾರೆ. ಈ ನಿರ್ದೇಶಕ ಜೋಡಿ ಹಿಂದಿಯಲ್ಲಿಯೂ ಹಲವು ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಆರಡಿ ಅಂತರ ಕಾಪಾಡಿ ಅಂತಿದ್ದಾರೆ ಶಾರೂಖ್ …
ಅಷ್ಟೇ ಅಲ್ಲ ಆ ವೆಬ್ ಸಿರೀಸ್ನ ಕಥೆಯನ್ನೂ ಹೇಳಿದ್ದು, ಶಾಹಿದ್ ಸಹ ಕಥೆ ಕೇಳಿ ಮಾಡುವ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸರಣಿಯಲ್ಲಿ ಖ್ಯಾತ ನಾಮ ನಟರೂ ಇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಯಾವಾಗ ಶುರುವಾಗಲಿದೆ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಅಮೆಜಾನ್ ಪ್ರೈಂನಲ್ಲಿ ಈ ಸಿರೀಸ್ ಪ್ರಸಾರವಾಗಲಿದೆ. (ಏಜೆನ್ಸಿಸ್)