Tamannaah:ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ನಲ್ಲಿ ಮಿಂಚುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ತನ್ನ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಕೆಲವಷ್ಟು ಹೊಸ ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಆ ಚಿತ್ರಗಳು ಸೋಷಿಯಲ್ ಮೀಡಿಯಾದ ಸಖತ್ ಆಗಿ ವೈರಲ್ ಆಗುತ್ತಿದೆ.
ಹೌದು, ತಮನ್ನಾ ಭಾಟಿಯಾ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಚಿತ್ರಗಳಲ್ಲಿ ಎಲ್ಲರ ಗಮನ ಸೆಳೆದರು, ಆಕರ್ಷಕವಾದ ಬಿಳಿ ಗೌನ್ ತೊಟ್ಟಿಎರುವ ಅವರು ಮಾದಕ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ತಮನ್ನಾ ಅವರ ಈ ಡ್ರೆಸ್‌ನಲ್ಲಿ ವೈಟ್ ಸ್ಟೈಲ್ ನೆಕ್‌ಲೈನ್ ಮತ್ತು ಉದ್ದನೆಯ ತೋಳುಗಳಿವೆ. ಕಪ್ಪು ಹೂವುಗಳಿವೆ. ಈ ಡ್ರೆಸ್‌ನಲ್ಲಿ ತಮನ್ನಾ ಮುದ್ದಾಗಿ ಕಾಣುತ್ತಿದ್ದಾರೆ.
ಇದಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಲ್ಲದೆ, ತರೇಹವಾರಿ ಭರಪೂರ ಕಾಮೆಂಟ್ಗಳು ಹರಿದು ಬರುತ್ತಿವೆ. ಕೆಲವರು ಅಪ್ಸಾರೆ ಎಂದರೆ ಇನ್ನು ಕೆಲವರು ಮಿಲ್ಕಿ ಬ್ಯೂಟಿಗೆ ಅರ್ಥ ಕೊಟ್ಟಿದ್ದೀರಿ ಎಂದಿದ್ದಾರೆ.
ಸ್ಟೈಲಿಸ್ಟ್ ಅಮಿ ಪಟೇಲ್ ಮತ್ತು ಡಿಸೈನರ್ ಜೋಡಿ ಗೌರಿ, ಮತ್ತು ನೈನಿಕಾ ಅವರ ಸಹಯೋಗದೊಂದಿಗೆ ಈ ಗೌನ್ ವಿನ್ಯಾಸಗೊಳಿಸಲಾಗಿದೆ. ಇನ್ನು ತಮನ್ನಾ ಸಿನಿಮಾ ವಿಚಾರಕ್ಕೆ ಬರುವುದಾರೆ ಒಡೆಲಾ-2 ಟೀಸರ್ ಬಿಡುಗಡೆಗೊಂಡಿದ್ದು, ಭಾರೀ ರೆಸ್ಪಾನ್ಸ್ ಬರುತ್ತಿದೆ. ಈ ಸಿನಿಮಾ ಮೇಲೆ ಚಿತ್ರರತಂಡಕ್ಕೆ ಭಾರಿ ನಿರೀಕ್ಷೆ ಇದೆ.ಅಲ್ಲದೆ, ಒಡೆಲಾ-2 ಬಿಡುಗಡೆ ಬಗ್ಗೆ ಚಿತ್ರತಂಡ ಶ್ರೀಘ್ರದಲ್ಲಿಯೇ ದಿನಾಂಕ ಘೋಷಿಸಲಿದೆ.(ಏಜೆನ್ಸೀಸ್)