ಸುಶಾಂತ್ ಸಾವಿನ ಕುರಿತು ಸಾಕಷ್ಟು ಬೆಳವಣಿಗೆಗಳಾಗುತ್ತಿವೆ. ಈಗಾಗಲೇ ಮುಂಬೈನಲ್ಲಿ ಜಾರಿ ನಿರ್ದೇಶನಾಲಯ ರಿಯಾ ಚಕ್ರವರ್ತಿ ಅವರನ್ನು ಬರೋಬ್ಬರಿ 8 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಪ್ರಕರಣ ಸಿಬಿಐಗೆ ರವಾನೆಯಾಗುತ್ತಿದ್ದಂತೆ, ಸುಶಾಂತ್ ಮಾಜಿ ಮ್ಯಾನೇಜರ್ ಸೇರಿ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೀಗ ಈ ನಡುವೆ ಸುಶಾಂತ್ ತಂದೆ ಕೆಕೆ ಸಿಂಗ್ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಿದ್ದಾರೆ.
ಈ ನಡುವೆ ಹರಿಯಾಣದ ಫರಿದಾಬಾದ್ಗೆ ತೆರಳಿದ ಕೆಕೆ ಸಿಂಗ್, ಸಿಎಂ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಿ ಪ್ರಕರಣದ ಆಗುಹೋಗುಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅಂದಹಾಗೆ ಕೆಕೆ ಸಿಂಗ್ ಸಂಬಂಧಿ, ಒ.ಪಿ. ಸಿಂಗ್ ಫರಿದಾಬಾದ್ನ ಪೊಲೀಸ್ ಕಮಿಷನರ್ ಆಗೆ ಸೇವೆಯಲ್ಲಿದ್ದಾರೆ.
ಇದನ್ನೂ ಓದಿ: ಅಮೇರಿಕಾದಲ್ಲೂ ಜಸ್ಟೀಸ್ ಫಾರ್ ಸುಶಾಂತ್ ಅಭಿಯಾನ …
ಈವರೆಗೂ ಮುಂಬೈ ಪೊಲೀಸ್ ಪ್ರಕರಣದ ವಿಚಾರವಾಗಿ 56ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದ್ದಾರೆ. ಅದರಲ್ಲೂ ಕೆಕೆ ಸಿಂಗ್ ದೂರು ನೀಡಿದ ಬಳಿಕ ರಿಯಾ ಹೆಸರೇ ಹೆಚ್ಚು ಸುದ್ದಿಯಲ್ಲಿರುವುದರಿಂದ, ಸಿಬಿಐ ಸಹ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ವಿಚಾರಣೆಗೆ ಆಹ್ವಾನಿಸಿದೆ. (ಏಜೆನ್ಸಿಸ್)