ಸುಶಾಂತ್ ಸಿಂಗ್ ಆತ್ಮಹತ್ಯೆ ಬಗ್ಗೆ ಬಾಲಿವುಡ್ ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ 30ಕ್ಕೂ ಅಧಿಕ ಮಂದಿಯನ್ನು ಮುಂಬೈ ಪೊಲೀಸ್ ಮಾಹಿತಿ ಕಲೆಹಾಕುವಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೆಲ್ಲದರ ಜತಗೆ ಮಾನಸಿಕ ಖಿನ್ನತೆಯಿಂದ ಸುಶಾಂತ್ ಆತ್ಮಹತ್ಯೆಗೆ ಶರಣಾಗಿದ್ದರು ಎಂಬ ಸುದ್ದಿ ಹರಿದಾಡಿದ್ದೇ ತಡ, ಹಲವು ಮನೋವೈದ್ಯರನ್ನೂ ವಿಚಾರಣೆ ಮಾಡಲಾಗಿತ್ತು. ಇತ್ತೀಚೆಗಷ್ಟೇ ಆ ಮನೋವೈದ್ಯರು ಸುಶಾಂತ್ಗಿದ್ದ ಬೈಪೋಲಾರ್ ಕಾಯಿಲೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದರು. ಇದೀಗ ಸುಶಾಂತ್ ಬಗ್ಗೆ ನಿರ್ದೇಶಕ ರೂಮಿ ಜೆಫ್ರಿ ಒಂದಷ್ಟು ಮಾಹಿತಿ ನೀಡಿದ್ದಾರೆ.
ನಿರ್ದೇಶಕ ರೂಮಿ ಜೆಫ್ರಿ ಕಲೆದ ಹಲವು ವರ್ಷಗಳಿಂದ ಸುಶಾಂತ್ ಆಪ್ತರಲ್ಲಿ ಒಬ್ಬರು. ಅವರೊಂದಿಗೆ ಸಾಕಷ್ಟು ಒಡನಾಟವೂ ಅವರಿಗಿತ್ತು. ಇದೀಗ ಅದೇ ರೂಮಿ ಸುಶಾಂತ್ ಬಗ್ಗೆ ಈವರೆಗೂ ಎಲ್ಲಿಯೂ ಬಹಿರಂಗವಾಗದ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ.
‘2019ರ ನವೆಂಬರ್ನಲ್ಲಿಯೇ ಸುಶಾಂತ್ ಖನ್ನತೆಗೆ ಒಳಗಾಗಿದ್ದರು. ನಟಿ ರಿಯಾ ಸುಶಾಂತ್ ಖಿನ್ನತೆಯಲ್ಲಿದ್ದಾನೆ ಎಂದು ಮಾಹಿತಿ ನೀಡಿದ್ದರು. ಅದರಂತೆ ನಾನು ಸುಶಾಂತ್ನನ್ನು ಭೇಟಿಯಾಗಿದ್ದೆ. ಒಟ್ಟಿಗೆ ಕುಳಿತು ಮಾತನಾಡಿದ್ದೆ. ಅರೇ ಸುಶಾಂತ್ ನೀನು ನನಕ್ಕಿಂತ ಚಿಕ್ಕವನು. ಅದರಲ್ಲೂ ನೀನು ಒಬ್ಬ ಸ್ಟಾರ್ ನಟ. ಈ ಹೊತ್ತಲ್ಲಿ ನಿನಗ್ಯಾಕೆ ಖಿನ್ನತೆ ಎಂದಿದ್ದೆ. ಅದಾದ ಬಳಿಕ ಖಿನ್ನತೆ ನಿವಾರಣೆಗೆ ಹಲವು ಹಿಂದೂಜಾ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ರೂಮಿ ಮಾಹಿತಿ ನೀಡಿದ್ದಾರೆ.
ಇನ್ನು ಈ ಮೊದಲು ಮನೋವೈದ್ಯರೂ ಸುಶಾಂತ್ ಆರೊಗ್ಯದ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದರು. ಬೈಪೋಲಾರ್ ಕಾಯಿಲೆ ಇರುವ ಬಗ್ಗೆ ತಿಳಿಸಿದ್ದರು. ಈ ಕಾಯಿಲೆಗೆ ತುತ್ತಾದರೆ, ಖಿನ್ನತೆಯ ಪ್ರಮಾಣ ಮತ್ತು ಆರೋಗ್ಯದಲ್ಲಿ ತೀವ್ರ ಸ್ವರೂಪದ ಏರಿಳಿತ ಕಂಡುಬರುತ್ತದೆ. ಇದಕ್ಕೆ ಮ್ಯಾನಿಕ್ ಡಿಪ್ರೆಷನ್ ಎಂದೂ ಕರೆಯುತ್ತಾರೆ. ಈ ಕಾಯಿಲೆ ಬಗ್ಗೆ ಸುಶಾಂತ್ಗೆ ಗೊತ್ತಿದ್ದರೂ, ಕೇವಲ ಎರಡರಿಂದ ಮೂರು ಸಲ ಮಾತ್ರ ಚಿಕಿತ್ಸೆಗೆ ಬಂದಿದ್ದರು ಎಂದು ವೈದ್ಯರು ಸುಶಾಂತ್ ಹೆಲ್ತ್ ಕಂಡಿಷನ್ ಬಗ್ಗೆ ಮಾಹಿತಿ ನೀಡಿದ್ದರು.