ಸಿನಿವಾಣಿ

Video: ಸನ್ನಿ ಲಿಯೋನ್​ ಹೇಳಿಕೊಡ್ತಿದ್ದಾರೆ ನೇತಾಡೋ ವ್ಯಾಯಾಮ...

manjunathktgns

ನಟಿ ಸನ್ನಿ ಲಿಯೋನ್​ ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯರು. ಸದಾ ಒಂದಿಲ್ಲೊಂದು ವಿಚಾರವನ್ನು ತಮ್ಮ ಅಭಿಮಾನಿಗಳ ಜತೆ ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಸುತ್ತಾಟ, ಫ್ಯಾಶನ್​, ಇಷ್ಟದ ಖಾದ್ಯ, ಮಕ್ಕಳೊಂದಿಗಿನ ಫೋಟೋಗಳನ್ನು ಒಂದಾದ ನಂತರ ಒಂದರಂತೆ ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ಇದೀಗ ಹೊಸ ವ್ಯಾಯಾಮವೊಂದನ್ನು ಸನ್ನಿ ಲಿಯೋನ್​ ವಿಡಿಯೋ ಮೂಲಕ ಶೇರ್​ ಮಾಡಿದ್ದಾರೆ.

ಬಾಡಿ ಬ್ಯಾಲೆನ್ಸ್ ಮಾಡುವುದು ಹೇಗೆ ಎಂಬ ಬಗ್ಗೆ ಮಾಡಿರುವ ವಿಡಿಯೋದಲ್ಲಿ ಈ ವ್ಯಾಯಾಮ ಎಷ್ಟು ಕಷ್ಟ ಎಂಬುದನ್ನೂ ಬರೆದುಕೊಂಡಿದ್ದಾರೆ. ‘ಹೊಸ ಹೊಸ ವ್ಯಾಯಾಮ ತುಂಬ ಸುಲಭ ಎಂದು ಯಾರು ಹೇಳಿದ್ದು. ನೋಡಿ ನಾನು ಆ ವ್ಯಾಯಾಮ ಮಾಡುತ್ತಿದ್ದೇನೆ. ಸಾಕು ನಕ್ಕಿದ್ದು’ ಎಂದಿದ್ದಾರೆ.

ಸದ್ಯ ಅಮೆರಿಕದಲ್ಲಿ ಮೂವರು ಮಕ್ಕಳು ಮತ್ತು ಪತಿ ಡೇನಿಯಲ್​ ವೆಬರ್​ ಜತೆ ಕಾಲ ಕಳೆಯುತ್ತಿರುವ ಸನ್ನಿ ಲಿಯೋನ್​, ಬಿಡುವಿನ ಸಮಯದಲ್ಲಿ ಈ ರೀತಿಯ ವಿಡಿಯೋ ಮಾಡಿ ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದಾರೆ. ಅವರು ಹಂಚಿಕೊಂಡ ವಿಡಿಯೋ ಇಲ್ಲಿದೆ. ನೋಡಿ.