ಸಿನಿವಾಣಿ

ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾರ್ಯ ವ್ಯಾಪ್ತಿ ವಿಸ್ತರಿಸಿದ ಸಕ್ಸಸ್​ ಫಿಲ್ಮ್ಸ್​ ಮುಂಬಯಿ

ಸಕ್ಸಸ್​ ಫಿಲ್ಮ್ಸ್​ ಮುಂಬಯಿ ತನ್ನು ಕಾರ್ಯ ವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದೆ. ಯುಎಇ ಯ ದುಬೈನಲ್ಲಿ ಸಕ್ಸಸ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯನ್ನು ದುಬೈ ನ ಡೇರಾ ಪ್ರಾಂತ್ಯದಲ್ಲಿ ಆರಂಭಿಸಲಾಯಿತು.

ದುಬೈ ನ ಖ್ಯಾತ ರೇಡಿಯೋ ವೈಬ್ FM 105.4 ನ ಚಾನೆಲ್ ಹೆಡ್ ಸೈಯದ್ ಹರ್ಷದ್, ಅಂತಾರಾಷ್ಟ್ರೀಯ ಉರ್ದು ಪ್ರೆಸ್ ಕ್ಲಬ್​ನ ಕಾರ್ಯದರ್ಶಿ ತಾರೀಕ್ ಫೈಜೀ ಮತ್ತು ಪಾಕಿಸ್ತಾನ ಮೂಲದ ಟಿವಿ ಹಾಗೂ ಸಿನಿಮಾ ನಟ ಹುಸೇನ್, ದುಬೈನ ಖ್ಯಾತ ರಂಗ ಕರ್ಮಿ ಡಾII ಫರ್ಹದ್ ಚೌಧರಿ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.

ಪ್ರಪ್ರಥಮ ಬಾರಿಗೆ ಕನ್ನಡಿಗರೊಬ್ಬರು ದುಬೈನಲ್ಲಿ ಸಿನಿಮಾ ಸ್ಟುಡಿಯೋ ಮತ್ತು ಪ್ರೊಡಕ್ಷನ್ ಹೌಸ್ ಆರಂಭಿಸಿರುವುದು ಮುಖ್ಯ ವಿಷಯ. ಕನ್ನಡಿಗ ಸುಧೀರ್ ಅತ್ತಾವರ್ ಅತಿಥಿಗಳನ್ನು ಸ್ವಾಗತಿಸಿದರು. ಅದೇ ಸಮಯದಲ್ಲಿ www.success films international.com ನ್ನು ದುಬೈನ ಖ್ಯಾತ ರಂಗ ಕರ್ಮಿ ಡಾII ಫರ್ಹದ್ ಚೌಧರಿಯವರು ಸಕ್ಸಸ್ ಫಿಲ್ಮ್ಸ್​ನ ವಿದ್ಯಾಧರ್ ಶೆಟ್ಟಿಯವರೊಂದಿಗೆ ಲೋಕಾರ್ಪಣೆ ಮಾಡಿದರು.

ಸಕ್ಸಸ್ ಫಿಲ್ಮ್ಸ್​​ನ ದುಬೈ ಪಾಲುದಾರ ದೆಹಲಿ‌ ಮೂಲದ ಮಿನ್ಹಾಜ್ ಖಾನ್ ಧನ್ಯವಾದ ಅರ್ಪಿಸಿದರು. ದುಬೈನಲ್ಲಿ ಶೀಘ್ರವೇ ಒಂದು ಮಹತ್ವಾಕಾಂಕ್ಷೆಯ ಯೋಜನೆಯನ್ನು ಸುಧೀರ್ ಅತ್ತಾವರ್​ ಅವರು ಅರಬ್ ಪಾಲುದಾರಿಕೆಯಲ್ಲಿ ಆರಂಭಿಸುವ ಮಾಹಿತಿಯನ್ನು ಈ ಸಮಯದಲ್ಲಿ ನೀಡಿದರು.