More

    ಸರ್ಕಾರಿ ಕೆಲಸ ಕಳೆದುಕೊಂಡ ಪ್ರತ್ಯೇಕತಾವಾದಿ ಗಿಲಾನಿ ಮೊಮ್ಮಗ- ತನಿಖೆ ವೇಳೆ ಸಿಕ್ಕಿದೆ ಸ್ಫೋಟಕ ಮಾಹಿತಿ

    ಶ್ರೀನಗರ: ಪ್ರತ್ಯೇಕತಾವಾದಿ ನಾಯಕ ಸಯ್ಯದ್ ಅಲಿ ಗಿಲಾನಿ ಅವರು ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಅದರ ಬೆನ್ನಲ್ಲೇ ಇದೀಗ ಅವರ ಮೊಮ್ಮಗ ಅನೀಸ್ ಉಲ್‌ ಇಸ್ಲಾಂ ಅವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ. ಅದಕ್ಕೆ ಕಾರಣ, ತನಿಖೆಯ ವೇಳೆ ಇವರ ವಿರುದ್ಧ ಸಿಕ್ಕಿರುವು ಭಯಾನಕ ಮಾಹಿತಿಗಳು! ಅದೇನೆಂದರೆ ಸೇವೆಯಲ್ಲಿಯೇ ಇದ್ದುಕೊಂಡು  ಜಮ್ಮುವಿನಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು ನೀಡುತ್ತಿರುವ ಹಾಗೂ ಭಾರಿ ವಿಧ್ವಂಸಕ ಕೃತ್ಯಗಳಿಗೆ ಸ್ಕೆಚ್‌ ಹಾಕುತ್ತಿರುವ ಮಾಹಿತಿ ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ಆದ್ದರಿಂದ ದೇಶದ ಹಿತದೃಷ್ಟಿಯಿಂದ ಸೇವೆಯಿಂದ ಇವರನ್ನು ವಜಾ ಮಾಡಲಾಗಿದೆ. 

    ಕಾಶ್ಮೀರದ ಶೇರ್​ ಎ-ಕಾಶ್ಮೀರ್ ಇಂಟರ್​ನ್ಯಾಷನಲ್ ಕನ್ವೆನ್ಶನ್ ಸೆಂಟರ್​ನಲ್ಲಿ​ 2016ರಿಂದ ರಿಸರ್ಚ್​ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಅನೀಸ್‌ ವಿರುದ್ಧ ಕೆಲ ವರ್ಷಗಳ ಹಿಂದಿನಿಂದಲೂ ಭಾರಿ ಕಣ್ಣಿತ್ತು.ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿಯಮ ಬಾಹಿರವಾಗಿ ಸರ್ಕಾರಿ ಉದ್ಯೋಗ ನೀಡಿರುವುದು ತಡವಾಗಿ ಬೆಳಕಿಗೆ ಬಂದಿತ್ತು. ಉದ್ಯೋಗ ನೀಡಲು ನಿಯಮಗನ್ನೇ ಬದಲಿಸಲಾಗಿದೆ ಎಂದು ಮಾತುಗಳು ಕೇಳಿ ಬಂದಿದ್ದವು. ವಾರ್ಷಿಕ ರೂ. 12 ಲಕ್ಷ ವೇತನ ಪಡೆಯುತ್ತಿದ್ದ ಅನೀಸ್‌ಗೆ ಪಿಂಚಣಿ ಸೌಲಭ್ಯ ಕೂಡ ನೀಡುತ್ತಿರುವುದು ಭಾರಿ ವಿವಾದವನ್ನೂ ಸೃಷ್ಟಿಸಿತ್ತು.

    ಆದರೆ ಈ ಆರೋಪವನ್ನು ತಳ್ಳಿಹಾಕಿದ್ದ ಎಸ್’ಕೆಐಸಿಸಿ ವಕ್ತಾರ ಶಹನ್ವಾಜ್ ಷಾ, ಯಾರ ಪ್ರಭಾವ ಬಳಿಸಿ ಗಿಲಾನಿ ಮೊಮ್ಮಗನಿಗೆ ನಾವು ಉದ್ಯೋಗವನ್ನು ನೀಡಿಲ್ಲ. ಅವರ ಸಂಬಳ ಸರ್ಕಾರ ನೀಡುತ್ತಿಲ್ಲ. ಸಂಸ್ಥೆಯೊಂದು ನೀಡುತ್ತಿದೆ. ಪಿಂಚಣಿ ಹಣವನ್ನೂ ನೀಡುತ್ತಿಲ್ಲ. ಎಸ್’ಕೆಐಸಿಸಿ ಸ್ವಾಯತ್ತ ಪ್ರಚಾರ ಸಮಾಜಕ್ಕೆ ಸೇರಿದ್ದಾಗಿದ್ದು, ಸೂಕ್ತ ರೀತಿಯ ಜಾಹೀರಾತುಗಳಿಗಾಗಿ ಸಂಶೋಧನಾಧಿಕಾರಿಗಳ ಅಗತ್ಯವಿತ್ತು. ಖಾಲಿಯಿದ್ದ ಉದ್ಯೋಗಕ್ಕೆ 196 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 35 ಅಭ್ಯರ್ಥಿಗಳನ್ನು ಪಟ್ಟಿ ಮಾಡಲಾಗಿತ್ತು. ಅದರಲ್ಲಿ ಇವರೂ ಸೂಕ್ತ ವ್ಯಕ್ತಿಯೆಂದು ಉದ್ಯೋಗ ನೀಡಲಾಗಿದೆ ಎಂದಿದ್ದರು.

    ಆದರೆ ಇದೀಗ ಅನೀಸ್‌ ಉಗ್ರ ಸಂಘಟನೆಯೊಂದಿಗೆ ಭಾರಿ ನಂಟು ಹೊಂದಿರುವುದು ಕೆಲವು ತನಿಖೆಗಳಿಂದ ತಿಳಿದುಬಂದಿರುವ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಆಡಳಿತ ಅವರನ್ನು ವಜಾಗೊಳಿಸಿದೆ. ದೋಡಾದ ಶಿಕ್ಷಕ ಫಾರೂಖ್ ಅಹ್ಮದ್ ಭಟ್​ ಕೂಡ ಇದೇ ಸಮಯ ಕೆಲಸ ಕಳೆದುಕೊಂಡಿದ್ದಾರೆ. 

    ‘ಭಾರತೀಯ ಸಂವಿಧಾನದ 311ನೇ ವಿಧಿಯ ಪ್ರಕಾರ, ರಾಜ್ಯದ ಹಿತದೃಷ್ಟಿಯ ಕಾರಣದಿಂದ ತಕ್ಷಣದಿಂದಲೇ ಜಾರಿ ಬರುವಂತೆ ಲೆಫ್ಟಿನೆಂಟ್ ಗವರ್ನರ್ ಈ ಕ್ರಮ ತೆಗೆದುಕೊಂಡಿದ್ದಾರೆ. ಫಾರೂಖ್ ಅಹ್ಮದ್ ಭಟ್ ಈಗಲೂ ಭಯೋತ್ಪಾದನಾ ಕೃತ್ಯಗಳಲ್ಲಿ ಸಕ್ರಿಯನಾಗಿರುವ ಮೊಹಮದ್ ಅಮಿನ್ ಭಟ್​​ನ ಸಹೋದರ’ ಎಂದು ತಿಳಿಸಿದರು.

    ಕೈ, ಕಾಲು ಕತ್ತರಿಸಿ ದಲಿತ ರೈತನ ಹತ್ಯೆ ಮಾಡಿದ ಹಿಂದಿದೆ ಭಯಾನಕ ಕಥೆ! ಕುಟುಂಬಸ್ಥರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts