ಸಿನಿವಾಣಿ

ಕರೊನಾದಿಂದ ದೂರ ಇರಿ #StayHome ಜಾಗೃತಿಗೆ ನಟಿ ನೀತು ಹೊಸ ಹೆಜ್ಜೆ..

ಬೆಂಗಳೂರು: ಸದ್ಯ ಕರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ 144 ಸೆಕ್ಷನ್​ ಜಾರಿಯಲ್ಲಿದೆ. ಮನೆಯಿಂದ ಯಾರೂ ಹೊರಬರದಂತೆ ರಾಜ್ಯ ಸರ್ಕಾರ ಕಟ್ಟಪ್ಪಣೆ ಹೊರಡಿಸಿದೆ. ಆದರೂ ಅಲ್ಲೊಬ್ಬರು, ಇಲ್ಲೊಬ್ಬರು ಕಾಣಿಸಿಕೊಂಡು ಪೊಲೀಸರ ಕೆಂಗೆಣ್ಣಿಗೆ ಗುರಿಯಾಗುತ್ತಿದ್ದಾರೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಮಂದಿ ಒಂದಿಲ್ಲೊಂದು ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಇದೀಗ ಕೊಂಚ ವಿಭಿನ್ನತೆಯ ಮೊರೆ ಹೋಗಿರುವ 'ಗಾಳಿಪಟ' ಖ್ಯಾತಿಯ ನಟಿ ನೀತು, 'ದಯವಿಟ್ಟು ಮನೆಯಲ್ಲೇ ಇರಿ' ಎಂಬುದನ್ನು 10 ಭಾಷೆಗಳ ಲಿಪಿಯಲ್ಲಿ ಬರೆದುಕೊಂಡು ಮನವಿ ಮಾಡಿದ್ದಾರೆ. ಕನ್ನಡ, ಇಂಗ್ಲಿಷ್​, ಹಿಂದಿ, ತುಳು, ಕೊಂಕಣಿ, ತಮಿಳು, ತೆಲುಗು, ಮಲಯಾಳಂ, ಉರ್ದು ಭಾಷೆಗಳಲ್ಲಿ ಬರೆದುಕೊಂಡು ಜಾಗೃತಿಗೆ ಮುಂದಾಗಿದ್ದಾರೆ.