ಬೆಂಗಳೂರು: ನಮಗೆ ಇಷ್ಟವಾದವರ ಹೆಸರನ್ನು ನಕ್ಷತ್ರಗಳಿಗೆ ನಾಮಕರಣ ಮಾಡಬಹುದು ಎಂಬ ವಿಷಯ ಗೊತ್ತಾ? ಬಾಲಿವುಡ್ ನಟಿಯರಾದ ಕಂಗನಾ ರಣಾವತ್, ಸನ್ನಿ ಲಿಯೋನ್, ಕ್ರಿಕೆಟಿಗ ರೋಹಿತ್ ಶರ್ಮಾ ಸೇರಿದಂತೆ ಹಲವು ಸೆಲೆಬ್ರಿಟಿಗಳ ಹೆಸರಿನಲ್ಲಿ ನಕ್ಷತ್ರಗಳು ನೋಂದಣಿಯಾಗಿವೆ. ಈಗ ಪುನೀತ್ ಹೆಸರನ್ನು ಒಂದು ನಕ್ಷತ್ರಕ್ಕೆ ಇಡಲಾಗಿದೆ.
ಹೌದು, ಬಿಗ್ ಲಿಟಲ್ ಸಂಸ್ಥೆಯು ನಕ್ಷತ್ರವೊಂದಕ್ಕೆ ಪುನೀತ್ ಅವರ ಹೆಸರನ್ನು ಇಟ್ಟಿದ್ದಾರೆ. ಕಳೆದ ಅಕ್ಟೋಬರ್ನಲ್ಲೇ ಪುನೀತ್ ಅವರ ಹೆಸರನ್ನು ನಕ್ಷತ್ರವೊಂದಕ್ಕೆ ಇಡಲಾಗಿದೆ.
ಈ ಕುರಿತು ಮಾತನಾಡುವ ದಿ ಬಿಗ್ ಲಿಟಲ್ನ ಭರತ್ ಸುಧಾಮ, 'ನಮಗೆ ಅವರೇ ರೋಲ್ ಮಾಡೆಲ್. ನಮ್ಮಿಂದ ಲೌಕಿಕವಾಗಿ ದೂರವಾದವರು ನತ್ರವಾಗುತ್ತಾರೆ ಅಂತಾರೆ. ಹಾಗೇ ನತ್ರಕ್ಕೇ ಅಪ್ಪು ಸರ್ ಹೆಸರಿಟ್ಟರೆ ಹೇಗೆ ಎಂಬ ಆಲೋಚನೆ ಬಂತು. ಕಳೆದ ಅಕ್ಟೋಬರ್ನಲ್ಲೇ ನಕ್ಷತ್ರಕ್ಕೆ ಪುನೀತ್ ಅವರ ಹೆಸರನ್ನು ಇಡಲಾಗಿದೆ' ಎನ್ನುತ್ತಾರೆ ಅವರು.
ಇನ್ನು, ನಟ-ನಿರ್ದೇಶಕ ರವಿಚಂದ್ರನ್ ಅವರ ಮಗ ವಿಕ್ರಮ್ ರವಿಚಂದ್ರನ್, ಒಂದು ವಿಡಿಯೋ ಮೂಲಕ ಪುನೀತ್ಗೆ ಗೌರವ ಸಲ್ಲಿಸಿದ್ದಾರೆ. 'ನಾನು ಚಿಕ್ಕಂದಿನಿಂದಲೂ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಸಿನಿಮಾದ ಆಚೆಗಿನ ಅವರ ಜೀವನ ಜಗತ್ತಿಗೇ ಸ್ಪೂರ್ತಿ. ಅವರಿಗಾಗಿ ಮಾಡುತ್ತಿರುವ ಒಂದೊಳ್ಳೆಯ ಕೆಲಸದಲ್ಲಿ ಭಾಗಿಯಾಗಿರುವುದು ನನಗೆ ಖುಷಿ ಕೊಟ್ಟಿದೆ' ಎಂದು ಸಂತಸ ಹಂಚಿಕೊಂಡಿದ್ದಾರೆ.