ಸಿನಿವಾಣಿ

ಪವನ್ ಕಲ್ಯಾಣ್​ಗೆ ಪರೋಕ್ಷವಾಗಿ ಕ್ಷಮೆ ಕೇಳಿದ ನಟಿ ಶ್ರೀ ರೆಡ್ಡಿ!? ಪವರ್‌ಸ್ಟಾರ್ ಅಭಿಮಾನಿಗಳಲ್ಲಿ ಸಂತಸ...

ತೆಲುಗಿನ ವಿವಾದಾತ್ಮಕ ನಟಿ ಶ್ರೀ ರೆಡ್ಡಿ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದ್ದಾರೆ. ಹೌದು, ಕೆಲವು ದಿನಗಳ ಹಿಂದೆ ಮೀಟೂ ಪ್ರಕರಣದ ವೇಳೆ ನಟಿ ಶ್ರೀರೆಡ್ಡಿ ದಿನಕ್ಕೊಬ್ಬ ಸ್ಟಾರ್ ನಟರ ಮೇಲೆ ಆರೋಪ ಮಾಡುತ್ತಿದ್ದರು. ಹಾಗೆ, ಆ ಸಮಯದಲ್ಲಿ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ವಿರುದ್ಧ ಶ್ರೀರೆಡ್ಡಿ ತಿರುಗಿಬಿದ್ದು, ಬಹಳಷ್ಟು ಹೇಳಿಕೆಗಳನ್ನು ಕೊಟ್ಟಿದ್ದರು. ಆದರೆ, ಈ ಬಾರಿ ನಟ ಪವನ್ ಕಲ್ಯಾಣ್ ಅವರ ತಾಯಿ ಅಂಜನಾ ದೇವಿ ಕ್ಷಮೆಯಾಚಿಸಿ ಗಮನ ಸೆಳೆಯುವುದರ ಜೊತೆಗೆ ಹೆಚ್ಚು ಸದ್ದು ಮಾಡುತ್ತಿದ್ದಾರೆ ಎಂದೇ ಹೇಳಬೇಕು. ಅಂದಹಾಗೆ, ಮೀಟೂ ಅಭಿಯಾನದ ವೇಳೆ ಸುಮಾರು ಎರಡು ವರ್ಷಗಳ ಹಿಂದೆ ಶ್ರೀರೆಡ್ಡಿ ಅವರು ಅರೆಬೆತ್ತಲಾಗಿ ಬೀದಿಯಲ್ಲಿ ಕೂತು ಅವಾಂತರ ಸೃಷ್ಟಿಸಿದ್ದರು.
ತೆಲುಗು ಚಿತ್ರರಂಗದ ನಿರ್ಮಾಪಕ ಸುರೇಶ್ ಬಾಬು ಪುತ್ರ ಅಭಿರಾಮ್ ದಗ್ಗುಬಾಟಿ ಮೇಲೆ ತೀವ್ರ ಆರೋಪಗಳನ್ನು ಹೊರಿಸಿದರು. ಇದರ ಬಗ್ಗೆ ನಟ ಪವನ್ ಕಲ್ಯಾಣ್ ಅವರ ಪ್ರತಿಕ್ರಿಯನ್ನು ಮಾದ್ಯಮಗಳು ಕೇಳಿದಾಗ, ಅವರು ನಟಿ ಶ್ರೀರೆಡ್ಡಿಗೆ ಅವರಿಗೆ ಬೆಂಬಲ ನೀಡಿಲ್ಲ. ಇದೆ ವಿಚಾರಕ್ಕೆ ಕೋಪಗೊಂಡ ನಟಿ ಶ್ರೀರೆಡ್ಡಿ, ಪವನ್ ಕಲ್ಯಾಣ್ ಅವರಿಗೆ ಬಾಯಿಗೆ ಬಂದಂತೆ ಬೈದಿದ್ದರು. ಜೊತೆಗೆ, ಪವನ್ ಕಲ್ಯಾಣ್ ಅವರ ಮೇಲಿನ ಕೋಪವನ್ನು ಅವರ ತಾಯಿ ಅಂಜನಾ ದೇವಿ ಅವರನ್ನು ಬೈದಿದ್ದರು. ಹಾಗಾಗಿ, ಅಂದು ನಟಿ ಆಡಿದ ಹಗುರವಾದ ಮಾತುಗಳನ್ನು ನೆನಪಿಸಿಕೊಂಡು ಈಗ ಶ್ರೀರೆಡ್ಡಿ ಕ್ಷಮೆ ಕೇಳಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬಹಳಷ್ಟು ಕಾಮೆಂಟ್​ಗಳನ್ನು ಗಿಟ್ಟಿಸಿಕೊಳ್ಳುತ್ತಿದೆ. 
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡ ನಟಿ, " ಮೆಗಾ ಸ್ಟಾರ್ ನಟ ಚಿರಂಜೀವಿ ಟಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್. ನಾನು ಅವರ ತಾಯಿ ಅಂಜನಾ ದೇವಿ ಮೇಲೆ ಹಗುರವಾದ ಶಬ್ದಗಳನ್ನು ಬಳಸಬಾರದಿತ್ತು. ನಾನು ಅಂದು ಆಡಿದ ಮಾತಿಗೆ ಇಂದು ಅಂಜನಾ ದೇವಿಯವರಿಗೆ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ." ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಜತೆಗೆ, ಶ್ರೀರೆಡ್ಡಿ ತಮ್ಮ ವಿಡಿಯೋದಲ್ಲಿ ನಟ ಪವನ್ ಕಲ್ಯಾಣ್‌ರನ್ನು ಅವಮಾನ ಮಾಡಿದ್ದಕ್ಕೆ ಪರೋಕ್ಷವಾಗಿ ಕ್ಷಮೆ ಕೇಳಿದ್ದಾರೆ. ಆದರೆ, ಪವನ್ ಕಲ್ಯಾಣ್ ಹೆಸರನ್ನು ಬಳಸದೆ, ಕ್ಷಮೆ ಕೇಳಿರುವುದು ಗಮನ ಸೆಳೆದಿದೆ. ಇದು, ಪವರ್‌ಸ್ಟಾರ್ ಅಭಿಮಾನಿಗಳಲ್ಲಿ ಸಂತಸ ತಂದಿದೆ. ಈ ವಿಡಿಯೋ ಮೇಲೆ 22,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್ ಕೂಡ ಇವೆ.