ಇತ್ತೀಚೆಗೆ, ಕನ್ನಡದ ನಟಿಯರಿಗೆ ತೆಲುಗು ಭಾಷೆಯಲ್ಲಿ ಅಭಿಮಾನಿಗಳ ಸಂಖ್ಯೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಹೀಗಾಗಿ, ಟಾಲಿವುಡ್ನಲ್ಲಿ ನಮ್ಮ ಕನ್ನಡದ ಬೆಡಗಿಯರಿಗೆ ಸಿನಿಮಾಗಳ ಆಫರ್ಗಳ ಸಂಖ್ಯೆ ಕೂಡಾ ಹೆಚ್ಚಾಗುತ್ತಲೆ ಇದೆ. ಹೌದು, ಕನ್ನಡದಿಂದ ಮೊದಲು ತೆಲುಗು ಭಾಷೆಗೆ ಹೋಗಿ, ನಂತರ ತಮಿಳು ಅಂತ, ಬಳಿಕ ಬಾಲಿವುಡ್ಗೆ ಲಗ್ಗೆ ಇಟ್ಟು, ನಮ್ಮ ಕನ್ನಡದ ಸುಂದರಿಯರು ಮಾಡುತ್ತಿರುವ ಕಮಾಲ್ ಸಖತ್ ಎಂದೇ ಹೇಳಬೇಕು. ಇದೀಗ, ನಟಿ ಶ್ರೀಲೀಲಾ ಕೂಡಾ ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ.
ಕನ್ನಡದಲ್ಲಿ 'ಕಿಸ್ ಚಿತ್ರದ ಮೂಲಕ ನಟಿಯಾದ ಶ್ರೀಲೀಲಾಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಶ್ರೀಲೀಲಾ ಅಭಿನಯದ 'ಬೈ ಟು ಲವ್' ಸಿನಿಮಾ ಈಗ ರಿಲೀಸ್‌ಗೆ ರೆಡಿ ಆಗಿದೆ. ಆದರೆ, ಕನ್ನಡದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯೂಸಿಯಾಗಿರುವ ನಟಿಗೆ ತೆಲುಗು ಚಿತ್ರರಂಗದಲ್ಲಿ ಸಹ ಸಾಲು ಸಾಲು ಚಿತ್ರಗಳ ಆಫರ್ಗಳನ್ನು ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹೌದು, ನಟಿ ಶ್ರೀಲೀಲಾ ಅವರಿಗೆ ಕನ್ನಡ ಮತ್ತು ತೆಲುಗು, ಅಂದರೆ ಈ ಎರಡು ಭಾಷೆ ಸಿನಿಮಾರಂಗಗಳಲ್ಲಿ ಬೇಡಿಕೆ ಹೆಚ್ಚಾಗಿದೆ.
ಅದರಲ್ಲೂ, ಟಾಲಿವುಡ್ನ ಸೂಪರ್ ಸ್ಟಾರ್‌ಗಳ ಸಿನಿಮಾಗಳು ಕೂಡಾ ನಟಿ ಶ್ರೀಲೀಲಾ ಅವರನ್ನು ಅರಸಿ ಬರುತ್ತಿವೆ ಎನ್ನಲಾಗಿದೆ. ಸದ್ಯ, ಹಲವು ವರದಿಗಳ ಪ್ರಕಾರ ಕ್ನನಡದ ಬೆಡಗಿ ಶ್ರೀಲೀಲಾ ಟಾಲಿವುಡ್ನ ಪ್ರಿನ್ಸ್ ಆದ ನಟ ಮಹೇಶ್ ಬಾಬು ಜೊತೆಗೆ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ತೆಲುಗಿನಲ್ಲಿ ನಟಿ ಶ್ರೀಲೀಲಾ ಅಭಿನಯದ ಮೊದಲ ಸಿನಿಮಾ 'ಪೆಳ್ಳಿ ಸಂದಡಿ' ಚಿತ್ರ ಸಾಕಷ್ಟು ಯಶಸ್ಸು ಕಂಡಿದೆ. ಈಗ, ಶ್ರೀಲೀಲಾ ಅವರಿಗೆ ಮಹೇಶ್ ಬಾಬು ಅವರ #SSMB28 ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆಯಂತೆ.
ನಟನ ಈ 28ನೇ ಸಿನಿಮಾಗೆ ನಿರ್ದೇಶಕ ತ್ರಿವಿಕ್ರಮ ಶ್ರೀನಿವಾಸ್ ನಿರ್ದೇಶನ ಮಾಡಲಿದ್ದು, ಮಹೇಶ್ಗೆ ಇಬ್ಬರು ನಾಯಕಿಯರಂತೆ. ಅದರಲ್ಲಿ, ನಟಿ ಶ್ರೀಲೀಲಾ ಎರಡನೆ ನಾಯಕಿ ಆಗಿ ಅಭಿನಯಿಸಲಿದ್ದಾರಂತೆ. ಇನ್ನು, ಮೊದಲ ನಾಯಕಿ ನಟಿಯಾಗಿ ನಟಿ ಪೂಜಾ ಹೆಗ್ಡೆ ಈಗಾಗಲೇ ಆಯ್ಕೆಯಾಗಿದ್ದಾರೆ. ಇಲ್ಲಿ, ವಿಶೇಷ ಎಂದರೆ ಇಬ್ಬರೂ ನಟಿಯರು ಕರ್ನಾಟಕ ಮೂಲದವರು. ಇನ್ನು, ತೆಲುಗಿನ ಮಾಸ್ ಮಾಹಾರಾಜ ನಟ ರವಿತೇಜಾ ಜೊತೆಗಿನ 'ಧಮಾಕಾ' ದಂತಹ ಇನ್ನೂ ಹಲವು ತೆಲುಗು ಸಿನಿಮಾಗಳಿಗೆ ನಟಿ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.