ಮಗಳ ಹಿಂದೆ ಮಗುವಿನಂತೆ ಓಡಿದ ಅಲ್ಲು; ವಿಡಿಯೋ ವೈರಲ್!

Published on
ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ 'ಪುಷ್ಪ' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಪ್ಯಾನ್ ಇಂಡಿಯಾ ಸಿನಿಮಾ ಧೂಳೆಬ್ಬಿಸಿ, 350 ಕೋಟಿ ಗಳಿಸಿದ ನಂತರ ನಟ ಅಲ್ಲು ಅರ್ಜುನ್ ಈಗ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಹೌದು, ತಮ್ಮ ಕುಟುಂಬದೊಂದಿಗೆ ಸದ್ಯ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಅಂದಹಾಗೆ, ಇದೀಗ ಅರ್ಜುನ್ ಪತ್ನಿ ಒಂದು ವಿಡಿಯೋ ಶೇರ್ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಪುತ್ರಿ ಅರ್ಹ ಜೊತೆ ಆಟ-ಮಸ್ತಿ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ ಅರ್ಜುನ್. ಪುತ್ರಿ ಅರ್ಹ ಜೊತೆ ಅಲ್ಲು ಅರ್ಜುನ್ ಸಮಯ ಕಳೆಯುತ್ತಿರುವ ಈ ವಿಡಿಯೋವನ್ನು ಪತ್ನಿ ಸ್ನೇಹಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅಪ್ಪ-ಮಗಳ ಬಾಂಧವ್ಯಕ್ಕೆ ನೆಟ್ಟಿಗರು ಮತ್ತು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇಬ್ಬರಿಗೂ ಒಳ್ಳೆಯದಾಗಲಿ ಅಂತ ಹರಸುತ್ತಿದ್ದಾರೆ. ಈ ಹಿಂದೆಯೂ ಅಲ್ಲು ಮತ್ತು ಅವರ ಮಗಳ ಹಲವು ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿದ್ದವು. ಕೇವಲ 38 ಸೆಕೆಂಡ್​ಗಳ ಈ ವಿಡಿಯೋ ಮೇಲೆ 4 ಲಕ್ಷಕ್ಕೂ ಹೆಚ್ಚು ಲೈಕ್ಸ್ ಇವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net