ಸಿನಿವಾಣಿ

500, 1000 ಅಲ್ಲ... ಸ್ಪಿರಿಟ್​ ಬಾಕ್ಸ್​ಆಫೀಸ್​ ಟಾರ್ಗೆಟ್ ಇಷ್ಟು ಕೋಟಿನಾ? ಸಂದೀಪ್​ ಮಾತಿಗೆ ಟಾಲಿವುಡ್​ ಶಾಕ್! Sandeep Reddy Vanga

Sandeep Reddy Vanga : ಟಾಲಿವುಡ್​ ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ಕೆಲವೇ ಸಿನಿಮಾಗಳನ್ನು ಮಾಡಿದ್ದರು ಕೂಡ ದೇಶಾದ್ಯಂತ ಭಾರಿ ಕ್ರೇಜ್ ಗಳಿಸಿದ್ದಾರೆ. ಕೊನೆಯದಾಗಿ ರಿಲೀಸ್​ ಆದ ಅವರ ಸಿನಿಮಾ ಅನಿಮಲ್​ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿತು. ಸಂದೀಪ್​ ಸಿನಿಮಾಗಳು ಎಷ್ಟು ಸದ್ದು ಮಾಡುತ್ತವೆಯೋ ಅವರ ಸಂದರ್ಶನಗಳು ಕೂಡ ಅಷ್ಟೇ ಸದ್ದು ಮಾಡುತ್ತವೆ. ಪ್ರಸ್ತುತ 'ಸ್ಪಿರಿಟ್' ಚಿತ್ರದ ಕೆಲಸದಲ್ಲಿ ನಿರತರಾಗಿರುವ ಸಂದೀಪ್​, ಆ ಸಿನಿಮಾದ ಗುರಿಯ ಬಗ್ಗೆ ಕೆಲ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಅಂದಹಾಗೆ ಸ್ಪಿರಿಟ್​ ಸಿನಿಮಾದ ನಾಯಕ ಪ್ರಭಾಸ್​. ಸಂದೀಪ್ ರೆಡ್ಡಿ ವಂಗಾ ಅವರು ಕೆಲವು ವರ್ಷಗಳ ಹಿಂದೆಯೇ ಈ ಯೋಜನೆಯನ್ನು ಘೋಷಿಸಿದ್ದರು. ಆದರೆ, ಪ್ರಭಾಸ್​ ಅವರು ಬೇರೆ ಸಿನಿಮಾಗಳಲ್ಲಿ ಬಿಜಿಯಾಗಿದ್ದರಿಂದ ಸ್ಪಿರಿಟ್​ ಚಿತ್ರದ ಚಿತ್ರೀಕರಣ ವಿಳಂಬವಾಯಿತು. ಸರಿ, ಈ ವಿಷಯವನ್ನು ಬದಿಗಿಡಿ. ಸಂದೀಪ್ ಅವರು ಇತ್ತೀಚೆಗೆ ಬಾಲಿವುಡ್ ಮಾಧ್ಯಮಕ್ಕೆ ಸಂದರ್ಶನ ನೀಡಿದರು. ಈ ವೇಳೆ ಅವರು ಬಹಳಷ್ಟು ವಿಷಯಗಳನ್ನು ಹಂಚಿಕೊಂಡರು.

ಆದರೆ, ಸಂದೀಪ್ ನೀಡಿದ ಒಂದು ಉತ್ತರ ಮಾತ್ರ ತುಂಬಾ ಆಸಕ್ತಿದಾಯಕವಾಗಿತ್ತು. ಶಾಹಿದ್ ಮತ್ತು ರಣಬೀರ್ ಕಪೂರ್​ ಅವರ ವೃತ್ತಿಜೀವನದಲ್ಲಿ ದೊಡ್ಡ ಹಿಟ್‌ಗಳನ್ನು ಸಂದೀಪ್​ ನೀಡಿದ್ದಾರೆ. ಪ್ರಭಾಸ್ ಅವರ 'ಸ್ಪಿರಿಟ್' ಚಿತ್ರಕ್ಕಾಗಿ ನಿಮ್ಮ ಗುರಿ ಏನು?' ಎಂದು ಆ್ಯಂಕರ್​ ಪ್ರಶ್ನೆ ಮಾಡಿದಾಗ, 'ನನ್ನ ಚಿತ್ರ ಬಾಹುಬಲಿಯನ್ನು ಮೀರಿಸಲು ಬಯಸಿದ್ದೇನೆ ಮತ್ತು ಸುಮಾರು 2000 ಕೋಟಿ ರೂ.ಗಳನ್ನು ಸಂಗ್ರಹಿಸಬೇಕು. ಇದು ಬಹಳ ದೊಡ್ಡ ಗುರಿಯಾಗಿದೆ. ಸದ್ಯಕ್ಕೆ ನಾನೀಗ ಒಳ್ಳೆಯ ಚಿತ್ರ ಮಾಡುತ್ತೇನೆ. ಬಾಕ್ಸ್ ಆಫೀಸ್‌ನಲ್ಲಿ ಅದು ಎಷ್ಟು ಕಲೆಕ್ಷನ್ ಮಾಡುತ್ತದೆ ಎಂದು ನೋಡೋಣ ಎಂದು ಹೇಳಿದ್ದಾರೆ.

ಬಾಹುಬಲಿ ನಂತರ ಎರಡು ಚಿತ್ರಗಳಲ್ಲಿ ಪ್ರಭಾಸ್ ಸೋಲುಂಡರು. ಆದರೆ, ಸಲಾರ್ ಮತ್ತು ಕಲ್ಕಿ 2898 ಚಿತ್ರಗಳೊಂದಿಗೆ ಮತ್ತೆ ಕಂಬ್ಯಾಕ್​ ಮಾಡಿದರು. ವಿಶೇಷವಾಗಿ ಕಲ್ಕಿ ಚಿತ್ರವು 1000 ಕೋಟಿ ರೂ.ಗಳಿಗಿಂತ ಹೆಚ್ಚು ಕಲೆಕ್ಷನ್ ಮಾಡಿದೆ. ಮತ್ತೊಂದೆಡೆ, ಸಂದೀಪ್ ಅವರ ಕೊನೆಯ ಚಿತ್ರ ಅನಿಮಲ್ ಕೂಡ ಸಾವಿರ ಕೋಟಿ ಗಳಿಸಿದೆ. ಈ ವಿಷಯದಲ್ಲಿ, 'ಸ್ಪಿರಿಟ್' 1000 ಕೋಟಿ ರೂ. ಪಡೆಯುವುದು ದೊಡ್ಡ ವಿಷಯವಲ್ಲ. ಆದರೆ 2000 ರೂ. ಗಳಿಸಿದರೆ, ಎರಡೂ ದಾಖಲೆ ನಿರ್ಮಿಸುತ್ತವೆ. (ಏಜೆನ್ಸೀಸ್​)