ಹೈದರಾಬಾದ್: ಸೆಲೆಬ್ರಿಟಿಗಳ ಮೇಲೆ ನುಡಿಯುವ ಭವಿಷ್ಯದಿಂದಲೇ ಜ್ಯೋತಿಷಿ ವೇಣು ಸ್ವಾಮಿ ತೆಲುಗಿನಲ್ಲಿ ಖ್ಯಾತರಾಗಿದ್ದಾರೆ. ಇವರ ಭವಿಷ್ಯವನ್ನು ಆರಂಭದಲ್ಲಿ ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗ ಟಾಲಿವುಡ್ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರು ಬೇರೆಯಾದರೂ ಆಗ ವೇಣು ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಜ್ಯೋತಿಷಿಯಾಗಿದ್ದಾರೆ.
ಟಾಲಿವುಡ್ನಲ್ಲಿ ಕೆಲ ಸೆಲೆಬ್ರಿಟಿಗಳು ಯಾವುದೇ ಪೂಜಾ-ವಿಧಾನ ನೆರವೇರಿಸುವುದಾದರೂ ವೇಣು ಸ್ವಾಮಿ ಮೊರೆ ಹೋಗುತ್ತಾರೆ. ಹಿಂದೊಮ್ಮೆ ರಶ್ಮಿಕಾ ಮಂದಣ್ಣಾ ಕೂಡ ತಮ್ಮ ಹೈದರಾಬಾದ್ ನಿವಾಸಕ್ಕೆ ವೇಣು ಸ್ವಾಮಿ ಅವರಿಂದಲೇ ಪೂಜೆ ನೆರವೇರಿಸಿದ್ದರು. ಇದೀಗ ಟಾಲಿವುಡ್ ನಟಿ ಡಿಂಪಲ್ ಹಯಾತಿ ಮನೆಯಲ್ಲಿ ವೇಣು ಸ್ವಾಮಿ ಪೂಜೆ ಮಾಡಿರುವುದು ಮತ್ತೊಮ್ಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹಯಾತಿ ಮನೆಯಲ್ಲಿ ವೇಣುಸ್ವಾಮಿ ಯಾವ ಪೂಜೆ ಮಾಡಿದರು ಎಂಬ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣ ವೈರಲ್ ಆಗಿರುವ ವೈನ್ ಬಾಟಲ್ ಫೋಟೋ. ಪೂಜೆಯ ನಡುವೆ ವೈನ್ ಬಾಟಲ್ ಏಕೆ ಬಂತು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ, ಪೂಜೆಯ ನಡುವೆ ವೈನ್ ಬಾಟಲ್ ಇಟ್ಟಿದ್ದಕ್ಕೆ ಆಕ್ರೋಶ ಕೂಡ ವ್ಯಕ್ತವಾಗಿದೆ. ಅಂದಹಾಗೆ ಕಳೆದ ವರ್ಷ ಡಿಂಪಲ್ ಹಯಾತಿ ಮನೆಯಲ್ಲಿ ವೇಣು ಸ್ವಾಮಿ ವಿಶೇಷ ಪೂಜೆ ಸಲ್ಲಿಸಿದ್ದರು. ಆ ಪೂಜಾಗೆ ಸಂಬಂಧಿಸಿದ ಫೋಟೋ ಈಗ ಟ್ರೆಂಡಿಂಗ್ ಆಗಿದೆ.
ಪೂಜೆಯಲ್ಲಿ ವೈನ್ ಬಾಟಲಿಗಳು ಕಾಣಸಿಗುತ್ತವೆ. ಯಾರಾದರೂ ಹೀಗೆ ಪೂಜೆ ಮಾಡುತ್ತಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇದರ ನಡುವೆ ನಾನು ಮಾಡುವ ಯಾವುದೇ ಪೂಜೆಯಲ್ಲಿ ಮದ್ಯದ ಬಾಟಲಿ ಮತ್ತು ನಾನ್ ವೆಜ್ ಅನ್ನು ನೈವೇದ್ಯವಾಗಿ ಇಡುತ್ತೇನೆ. ನಾನು ತೀರ್ಥ ಕೊಡುವುದಿಲ್ಲ ಮದ್ಯವನ್ನೇ ತೀರ್ಥವಾಗಿ ಕೊಡುತ್ತೇನೆ. ಮದ್ಯ ಸೇವಿಸದವರಿಗೆ ಕೂಲ್ ಡ್ರಿಂಕ್ಸ್ ಕೊಡುತ್ತೇನೆ ಎಂದು ಈ ಹಿಂದೆ ವೇಣುಸ್ವಾಮಿ ಹೇಳಿದ್ದ ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದೆ. (ಏಜೆನ್ಸೀಸ್)