ಸಿನಿವಾಣಿ

ಶಂಭೋ ಶಿವ ಶಂಕರ: ಸೋನಾಲ್ ಮಾಂಟೆರೋ ಭರ್ಜರಿ ಎಂಟ್ರಿ

ಬೆಂಗಳೂರು: ಸಿನಿಮಾಗಳಲ್ಲಿ ಹೀರೋಗಳು ಭರ್ಜರಿ ಎಂಟ್ರಿ ಕೊಡುವುದು ಸಾಮಾನ್ಯ. ನಾಯಕಿಯರ ಎಂಟ್ರಿ ಮಾತ್ರ ಅಷ್ಟೇನೂ ಗ್ರ್ಯಾಂಡ್ ಆಗಿರುವುದಿಲ್ಲ. ಆದರೆ, ಇದಕ್ಕೆ ಅಪವಾದವಾಗಿ ‘ಶಂಭೋ ಶಿವ ಶಂಕರ’ ಚಿತ್ರದಲ್ಲಿ ನಾಯಕಿ ಸೋನಾಲ್ ಮಾಂಟೆರೊ ಭರ್ಜರಿ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಯೊಂದು ಚಿತ್ರತಂಡದಿಂದ ಕೇಳಿ ಬಂದಿದೆ. ‘ಶಂಭೋ ಶಿವ ಶಂಕರ’ ಚಿತ್ರದಲ್ಲಿ ಮೂವರು ನಾಯಕರು. ಸೋನಾಲ್ ಒಬ್ಬರೇ ನಾಯಕಿ. ಆ ನಾಯಕಿಯ ಎಂಟ್ರಿ ನೀರಸವಾಗಿರಬಾರದು ಎಂಬ ಕಾರಣಕ್ಕೆ ಹೋಲಿ ಸಂಭ್ರಮದ ನಡುವೆ ಸೋನಾಲ್ ಅವರನ್ನು ಚಿತ್ರದಲ್ಲಿ ಪರಿಚಯಿಸಲಾಗುತ್ತದಂತೆ.

ನಾಯಕರಾದ ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಬಣ್ಣ ಎರಚುವಾಗ ನಾಯಕಿ ಎಂಟ್ರಿ ಕೊಡುವ ದೃಶ್ಯವನ್ನು ಇತ್ತೀಚೆಗೆ ಚಿತ್ರೀಕರಣ ಮಾಡಲಾಗಿದೆ. ಲಾಕ್​ಡೌನ್ ನಂತರ ಪ್ರಾರಂಭವಾದ ಚಿತ್ರೀಕರಣ ಈಗಾಗಲೇ ಅರ್ಧ ಮುಗಿದಿದ್ದು, ಹಿರಿಯ ನಟ ಶಶಿಕುಮಾರ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆಯಲ್ಲಿ ಕೆಲವು ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.