More

    ‘ಕೋಡಿಹಳ್ಳಿ ಚಂದ್ರಶೇಖರ್​ 200 ಜನರಿಗೆ ಮೋಸ ಮಾಡಿದ್ದಾರೆ, ಅಕ್ರಮ ಆಸ್ತಿ ಸಂಪಾದಿಸಿದ್ದಾರೆ… ತನಿಖೆ ಮಾಡಿ’

    ಬೆಂಗಳೂರು: ಹೋರಾಟದ ಹೆಸರಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ರೈತರನ್ನು ವಂಚಿಸಿ, ಸರ್ಕಾರಗಳನ್ನು ಬ್ಲ್ಯಾಕ್​ಮೇಲ್ ಮಾಡುವ ಮೂಲಕ ಐಶಾರಾಮಿ ಕಾರುಗಳು, ಬಂಗಲೆ, ಆಸ್ತಿ ಸೇರಿದಂತೆ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ಹೆಸರಿನಲ್ಲಿ ಅಕ್ರಮ ಆಸ್ತಿ ಗಳಿಸಿದ್ದಾರೆ. ಈ ಕುರಿತು ಸರ್ಕಾರ ತನಿಖೆ ನಡೆಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಕೋಡಿಹಳ್ಳಿ ಚಂದ್ರಶೇಖರ್ ನಕಲಿ ರೈತ ಹೋರಾಟಗಾರ. ಹಸಿರು ಶಾಲು ಹಾಕಿಕೊಂಡು ರೈತರಿಗೆ ನ್ಯಾಯ ಕೊಡಿಸುತ್ತೇನೆ ಎಂದು ವಂಚಿಸುವ ದಲ್ಲಾಳಿ. ಇಂತಹ ನಕಲಿ ನಾಯಕನನ್ನು ನಂಬಬೇಡಿ ಎಂದು ರೈತರಲ್ಲಿ ಮನವಿ ಮಾಡಿದರು. ದನ್ನೂ ಓದಿರಿ ವಾಟ್ಸ್​ಆ್ಯಪ್​ ವಿಡಿಯೋ ಕಾಲ್​ನಲ್ಲಿ ಬೆತ್ತಲಾದ ಯುವತಿಯರು… ಕಣ್ತುಂಬಿಕೊಂಡವನಿಗೆ ಕಾದಿತ್ತು ಭಾರಿ ಸಂಕಷ್ಟ!

    ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೈಸೂರು, ಮಂಡ್ಯ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಆಗ ಈ ನಕಲಿ ನಾಯಕ ಕನಿಷ್ಠ ಸೌಜನ್ಯಕ್ಕೂ ಸಾಂತ್ವನ ಹೇಳಲಿಲ್ಲ. ಇವನೆಂತಹ ರೈತ ನಾಯಕ ಎಂದು ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಏಕವಚನದಲ್ಲೇ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

    'ಕೋಡಿಹಳ್ಳಿ ಚಂದ್ರಶೇಖರ್​ 200 ಜನರಿಗೆ ಮೋಸ ಮಾಡಿದ್ದಾರೆ, ಅಕ್ರಮ ಆಸ್ತಿ ಸಂಪಾದಿಸಿದ್ದಾರೆ... ತನಿಖೆ ಮಾಡಿ'ನಿನ್ನ ಹೆಸರಿನಲ್ಲಿ ಎರಡೂವರೆ ಎಕರೆ ಆಸ್ತಿ ಇದ್ದದ್ದು, ಇಂದು ಕೋಟ್ಯಂತರ ರೂ. ಆಸ್ತಿ ಇದೆ. ಅದು ಎಲ್ಲಿಂದ ಬಂತು? ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ನೀನು ಯಾವ ಸೀಮೆಯ ರೈತ ನಾಯಕ? ಎಂದು ಏಕವಚನದಲ್ಲಿ ಕೆಣಕಿದರು.

    ಈವರೆಗೆ ರೈತರಿಗೆ ದ್ರೋಹ ಮಾಡಿ ಈಗ ಸಾರಿಗೆ ನೌಕರರ ಸಂಘಟನೆಯ ಗೌರವ ಅಧ್ಯಕ್ಷರಾಗಿದ್ದಾರೆ. ನಾಲ್ಕು ದಿನ ಬಸ್ ಸಂಚಾರ ಸ್ಥಗಿತಗೊಳಿಸಿ ಜನರಿಗೆ ತೊಂದರೆ ಕೊಟ್ಟರು. ಆಗ ಆಗಿರುವ ನಷ್ಟಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ನೇರ ಕಾರಣ ಎಂದು ಹರಿಹಾಯ್ದರು.

    ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸಿಎಂ ಆಗಿರುವಾಗ ತುಟಿ ಬಿಚ್ಚದ ನೀನು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವಾಗ ಏಕಾಏಕಿ ರೈತರನ್ನು ಎತ್ತಿಕಟ್ಟುವ ನೀಚ ಕೆಲಸ ಮಾಡುತ್ತಿದ್ದೀಯಾ? ಎಂದು ವಾಗ್ಧಾಳಿ ನಡೆಸಿದರು. ದನ್ನೂ ಓದಿರಿ ನಾನು ಇಷ್ಟೊಂದು ಕೆಟ್ಟದ್ದಾಗಿ ಸೋಲ್ತೀನಿ ಅಂತ ಭಾವಿಸಿರಲಿಲ್ಲ… ಎನ್ನುತ್ತಲೇ ಭಾವುಕರಾದ ಸಿದ್ದು

    ಕೋಟಿ ಕೋಟಿ ವಂಚನೆ: ಮನೆ ನಿರ್ವಿುಸಿಕೊಡುವುದಾಗಿ ಹೇಳಿ 2012ರಲ್ಲಿ ಸುಮಾರು 200 ಜನರಿಗೆ ಕೋಡಿಹಳ್ಳಿ ಚಂದ್ರಶೇಖರ್ ಮೋಸ ಮಾಡಿದ್ದಾರೆ. ತಲಾ ಕುಟುಂಬದಿಂದ 3-6 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಆರ್​ಸಿಪಿ ಬಡಾವಣೆಯ ಜಿ. ಬೈರಯ್ಯ ಎಂಬುವರಿಂದ ಕೋಡಿಹಳ್ಳಿ ಚಂದ್ರಶೇಖರ್ 6 ಲಕ್ಷ ಹಣ ಪಡೆದಿದ್ದಾರೆ. ಈ ಹಣ ಕೇಳೋಕ್ಕೆ ಹೋದ ಬೈರಯ್ಯ ಮೇಲೆ ಗೂಂಡಾಗಿರಿ ಮಾಡಿದ್ದಾರೆ. ವಿಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಗ ಸಿದ್ದರಾಮಯ್ಯ ಸರ್ಕಾರ ಅವರನ್ನು ಬೆಂಬಲಿಸಿದೆ. 2013ರಲ್ಲಿ ಬೈರಯ್ಯಗೆ 1.50 ಲಕ್ಷ ಹಣ ಹಿಂದಿರುಗಿಸಿದ್ದಾರೆ. ಈ ರೀತಿ ಸುಮಾರು 200 ಜನರಿಗೆ ಮೋಸ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದರು.

    ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

    ನಾನು 110 ಕೆಜಿ ಇದ್ದೇನೆ, ಕಾಂಗ್ರೆಸ್​ಗೆ ನನ್ನನ್ನು ತುಳಿಯೋಕೆ ಆಗಲ್ಲ ಎನ್ನುತ್ತಲೇ ಜೆಡಿಎಸ್​ಗೆ ಇಬ್ರಾಹಿಂ ಎಂಟ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts