ಸಿನಿವಾಣಿ

ಅಪ್ಪ ಸತ್ತು ತಿಂಗಳಾಗಿಲ್ಲ; ರಣಬೀರ್​ ಹೀಗಾ ಮಾಡೋದು!?

ಬಾಲಿವುಡ್​ ನಟ ರಿಷಿ ಕಪೂರ್​ ಏಪ್ರಿಲ್​ 30ಕ್ಕೆ ಇಹಲೋಹ ತ್ಯಜಿಸಿದ್ದರು. ಅವರ ಸಾವಿಗೆ ಇಡೀ ಸಿನಿಮಾ ಇಂಡಸ್ಟ್ರಿ ಕಂಬನಿ ಮಿಡಿದಿತ್ತು. ಚಿತ್ರರಂಗದ ಗಣ್ಯರು, ಅಭಿಮಾನಿಗಳು ನೆಚ್ಚಿನ ನಟನನ್ನು ಕಳೆದುಕೊಂಡಿದ್ದಕ್ಕೆ ದುಃಖದಲ್ಲಿ ಮುಳುಗಿದ್ದರು. ಇಡೀ ದೇಶವೇ ರೊಮ್ಯಾಂಟಿಕ್​ ಹೀರೋನನ್ನು ನೆನೆಯುತ್ತಿದ್ದರೆ, ಇತ್ತ ರಿಷಿ ಕಪೂರ್ ಏಕೈಕ ಪುತ್ರ ರಣಬೀರ್​ ಕಪೂರ್​ ಮಾತ್ರ ಬೇರೆಯದೇ ಗುಂಗಿನಲ್ಲಿದ್ದಾರೆ. ಆ ಗುಂಗು ಏನೆಂಬುದು ಫೋಟೋ ಸಮೇತ ಹೊರಬಿದ್ದಿದೆ.

ಹೌದು, ಅಪ್ಪ ನಿಧನರಾಗಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ, ಹೀಗಿರುವಾಗಲೇ 3ಲಕ್ಷ ಮೌಲ್ಯದ ಶೂ ಧರಿಸಿ ಒಂದಷ್ಟು ಟೀಕೆಗೆ ಗುರಿಯಾಗಿದ್ದಾರೆ. ಆ ಶೂಗಳಿಂದ ನೆಟ್ಟಿಗರ ಕೆಂಗೆಣ್ಣಿಗೂ ಗುರಿಯಾಗಿದ್ದಾರೆ. ಬರೀ ಅದೊಂದೆ ಅಲ್ಲ, ನಟಿ ಆಲಿಯಾ ಭಟ್​ ವಿಚಾರವಾಗಿಯೂ ರಣಬೀರ್​ ಟ್ರೋಲ್​ ಆಗುತ್ತಿದ್ದಾರೆ. ಅಪ್ಪ ನಿಧನರಾದರೂ, ಅವರ ಬಗ್ಗೆ ಮರುಕ ವ್ಯಕ್ತಪಡಿಸದೇ ಆಲಿಯಾ ಹಿಂದೆಯೇ ಸುತ್ತುತ್ತಿದ್ದಾರೆ ಎಂದು ಜಾಲತಾಣಗಳಲ್ಲಿ ಟ್ರೋಲ್​ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಹೇರ್​ ಕಟ್​ ಮಾಡಿಕೊಂಡಿದ್ದ ಫೋಟೋವನ್ನು ಹಂಚಿಕೊಂಡಿದ್ದ ಆಲಿಯಾ, ಪ್ರೀತಿಪಾತ್ರರೊಬ್ಬರ ಸಲುವಾಗಿ ಕೂದಲಿಗೆ ಕತ್ತರಿ ಹಾಕಿದ್ದೇನೆ ಎಂದು ಬರೆದುಕೊಂಡಿದ್ದರು. ಆಗ ಸಹ ಕಮೆಂಟ್​ ಬಾಕ್ಸ್​ನಲ್ಲಿ ರಣಬೀರ್​ ಹೆಸರೇ ಪ್ರಸ್ತಾಪವಾಗಿತ್ತು. ಹೀಗೆ ಒಂದಿಲ್ಲ ಒಂದು ಕಾರಣಕ್ಕೆ ಈ ಜೋಡಿ ಸದ್ದು ಮಾಡುತ್ತಿದ್ದರೆ, ಈ ಜೋಡಿಯ ಈ ತರಲೆ ಆಟಗಳಿಗೆ ಪರ ವಿರೋಧ ಕಮೆಂಟ್​ಗಳೂ ಸಂದಾಯವಾಗುತ್ತಿವೆ. (ಏಜೆನ್ಸೀಸ್​)