ಸಿನಿವಾಣಿ

ರಾಜ್ಯೋತ್ಸವ ಪ್ರಯುಕ್ತ 'ಸೋಜುಗದ ಕಸ್ತೂರಿ ಕನ್ನಡದ' ಝೇಂಕಾರ...

ಬೆಂಗಳೂರು: ನವೆಂಬರ್​ ಶುರುವಾಗಿದೆ. ರಾಜ್ಯೋತ್ಸವದ ಆಚರಣೆಗಳೂ ಈ ತಿಂಗಳು ಪೂರ್ತಿ ನಡೆಯುತ್ತವೆ. ಕರೊನಾ ಹಿನ್ನೆಲೆಯಲ್ಲೂ ಕನ್ನಡ, ನಾಡು ನುಡಿಗೆ ಸಂಬಂಧಿಸಿದ ಒಂದಲ್ಲ ಒಂದು ಕಾರ್ಯಕ್ರಮಗಳು ವರ್ಚುವಲ್​ ಆಗಿ ನಡೆಯುತ್ತಲಿವೆ. ಇದೀಗ ರಾಜ್ಯೋತ್ಸವದ ಪ್ರಯುಕ್ತ ಝೇಂಕಾರ್ ಮ್ಯೂಸಿಕ್ ಕಡೆಯಿಂದ ವಿಶೇಷವಾದ ಹಾಡೊಂದು ಹೊರಬಂದಿದೆ.

ಸೋಜುಗದ ಕಸ್ತೂರಿ ಕನ್ನಡ.. ಸಾಹಿತ್ಯವುಳ್ಳ ಹಾಡನ್ನು ರಾಜ್ಯೋತ್ಸವದ ಪ್ರಯುಕ್ತ ಝೇಂಕಾರ್​ ಮ್ಯೂಸಿಕ್​ ಸಂಸ್ಥೆ ತನ್ನ ಯೂಟ್ಯೂಬ್​ ಚಾನೆಲ್​ನಲ್ಲಿ ಬಿಡುಗಡೆ ಮಾಡಿದೆ. ಗಾಯಕ ಅಜಯ್ ವಾರಿಯರ್‌ ನಟಿಸಿ‌‌, ಹಾಡಿರುವ ಈ‌ ಹಾಡಿಗೆ ಜಿಮ್ ಶಿವು ಸಾಹಿತ್ಯ ಬರೆದಿದ್ದಾರೆ. ಯುವರಾಜ್ ಸಂಗೀತ ನೀಡಿದ್ದು, ನಿರ್ದೇಶನ ಹಾಗೂ ಸಂಕಲನದ ಜವಾಬ್ದಾರಿ ಮೋಹನ್ ಕಾಮಾಕ್ಷಿ ಅವರದ್ದು.

ಶ್ರೀರಂಗಪಟ್ಟಣದ ಸುಂದರ ಪರಿಸರದಲ್ಲಿ ಚಿತ್ರೀಕರಣಗೊಂಡಿರುವ ಈ‌ ಹಾಡನ್ನು ಸುನೀತ್ ಹಲಗೇರಿ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈಗಾಗಲೇ ‌ಬಿಡುಗಡೆಯಾಗಿರುವ ಈ ಹಾಡಿಗೆ ಒಳ್ಳೆಯ ಪ್ರಶಂಸೆ ದೊರಕಿದೆ.