ಸಿನಿವಾಣಿ

ಸಂಭಾವನೆಯಲ್ಲಿ ರಾಜಮೌಳಿಯನ್ನೂ ಮೀರಿಸ್ತಿದ್ದಾರೆ ಕೊರಟಾಲ ಶಿವ

ಟಾಲಿವುಡ್​ನ ಹಿಟ್​ ಚಿತ್ರಗಳ ನಿರ್ದೇಶಕ ಕೊರಟಾಲ ಶಿವ ಇದೀಗ ಟಾಲಿವುಡ್​ನಲ್ಲಿ ಹೊಸ ದಾಖಲೆ ಬರೆಯುವುದಕ್ಕೆ ಹೊರಟಿದ್ದಾರೆ. ಇದುವರೆಗೂ ಟಾಲಿವುಡ್​ನಲ್ಲಿ ಎಸ್​.ಎಸ್​. ರಾಜಮೌಳಿ ಅವರೇ ಅತ್ಯಂತ ಹೆಚ್ಚು ಸಂಭೌವನೆ ಪಡೆಯುವ ನಿರ್ದೇಶಕ ಎಂದು ಹೇಳಲಾಗಿತ್ತು. ಈ ದಾಖಲೆಯನ್ನು ಇದೀಗ ಕೊರಟಾಲ ಶಿವ ಮುರಿಯುವುದಕ್ಕೆ ಹೊರಟಿದ್ದಾರೆ.

ರಾಜಮೌಳಿ ಸದ್ಯಕ್ಕೆ ಒಂದು ಚಿತ್ರಕ್ಕೆ 25 ಕೋಟಿಯವರೆಗೂ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ. ಇದೀಗ ಅದಕ್ಕಿಂತ ಹೆಚ್ಚು ಸಂಭಾವನೆ ಪಡೆಯುವ ಮೂಲಕ, ಕೊರಟಾಲ ಶಿವ ಅವರ ಟಾಲಿವುಡ್​ನ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಎಂಬ ಹೆಗ್ಗಳಿಕೆ ಪಾತ್ರರಾಗಲಿದ್ದಾರೆ.

ಸದ್ಯ ಚಿರಂಜೀವಿ ಅಭಿನಯದ 'ಆಚಾರ್ಯ' ಚಿತ್ರವನ್ನು ನಿರ್ದೇಶಿಸುತ್ತಿರುವ ಕೊರಟಾಲ ಶಿವ, ಅಲ್ಲು ಅರ್ಜುನ್​ ಅಭಿನಯದಲ್ಲಿ ಒಂದು ಚಿತ್ರ ಮಾಡುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದಾರೆ. ಈ ಚಿತ್ರ ಪ್ರಾರಂಭವಾಗುವುದೇನಿದ್ದರೂ, 'ಆಚಾರ್ಯ' ಮುಗಿದ ನಂತರವಷ್ಟೇ. ಇನ್ನು ಬಿಡುಗಡೆಯಂತೂ 2022ಕ್ಕೆ.

ಈ ಚಿತ್ರಕ್ಕೆ ಶಿವ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 30 ಕೋಟಿ ಎಂದು ಹೇಳಲಾಗುತ್ತಿದೆ. ಸಂಭಾವನೆ ಎಂದರೆ ಆ ಮೊತ್ತ ಒಂದೇ ಬಾರಿ ಅವರ ಅಕೌಂಟ್​ಗೆ ಬಂದು ಬೀಳುತ್ತದೆ ಎಂದಲ್ಲ. ಈ ಚಿತ್ರದಲ್ಲಿ ಅಲ್ಲು ಅರ್ಜುನ್​, ಶಿವ ಮತ್ತು ನಿರ್ಮಾಪಕರು ಒಂದು ಒಪ್ಪಂದಕ್ಕೆ ಬಂದಿದ್ದಾರಂತೆ.

ಅದರ ಪ್ರಕಾರ, ಈ ಚಿತ್ರದ ವಿಷಯ ಒಂದು ಒಪ್ಪಂದವಾಗಿದೆಯಂತೆ. ಅದರ ಪ್ರಕಾರ, ಈ ಚಿತ್ರದಲ್ಲಿ ಬರುವ ಲಾಭದಲ್ಲಿ ಅಲ್ಲು ಅರ್ಜುನ್​, ನಿರ್ದೇಶಕ ಶಿವ ಮತ್ತು ನಿರ್ಮಾಪಕ ಸುಧಾಕರ್​ ಮಿಕ್ಕಿಲನೇನಿ ... ಈ ಮೂವರೂ 33 ಪರ್ಸೆಂಟ್​ ಹಣವನ್ನು ಹಂಚಿಕೊಳ್ಳುತ್ತಾರಂತೆ. ಚಿತ್ರಕ್ಕೆ ಶಿವ ಎಂಟು ಕೋಟಿಯಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರಂತೆ. ಇನ್ನು ಬರುವ ಲಾಭವನ್ನು ಲೆಕ್ಕ ಹಾಕಿದರೆ, ಈ ಮೊತ್ತ 30 ಕೋಟಿಯವರೆಗೂ ಆಗುತ್ತದೆ ಎಂದು ಹೇಳಲಾಗುತ್ತಿದೆ.

ಹಾಗೆ ನೋಡಿದರೆ, ಅಲ್ಲು ಅರ್ಜುನ್​ಗೆ ತುಂಬಾ ದೊಡ್ಡ ಹಣ ಸಿಗುವುದಿಲ್ಲವಂತೆ. ಆದರೆ, ಹಣಕ್ಕಿಂತ ಒಂದು ದೊಡ್ಡ ಯಶಸ್ಸಿಗಾಗಿ ಎದುರು ನೋಡುತ್ತಿರುವ ಅಲ್ಲು ಅರ್ಜುನ್​, ಅಂಥದ್ದೊಂದು ಯಶಸ್ಸನ್ನು ಶಿವ ತುಂದುಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಅದೇ ಕಾರಣಕ್ಕೆ, ಸ್ವಲ್ಪ ದುಡ್ಡು ಕಡಿಮೆಯಾದರೂ ಪರವಾಗಿಲ್ಲ, ದೊಡ್ಡ ನಿರ್ದೇಶಕರೇ ತನ್ನ ಚಿತ್ರ ನಿರ್ದೇಶಿಸಬೇಕು ಎಂದು ಕಾದು, ಅವರಿಂದ ಚಿತ್ರ ಮಾಡಿಸುತ್ತಿದ್ದಾರೆ.