ದೇಹ ಮನೇಲಿದೆ; ಮನಸ್ಸು ಮಾತ್ರ ಆಸ್ಪತ್ರೆಯಲ್ಲಿದೆ ... 'ಬಿಗ್​​ ಬಿ' ಹೀಗೆ ಹೇಳಿದ್ದ್ಯಾಕೆ?

Amitabh Bachchan - Final
Published on

ಅಮಿತಾಭ್​ ಬಚ್ಚನ್​ ಅವರು ಭಾನುವಾರ ಮುಂಬೈನ ನಾನಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಬಂದಿದ್ದಾರೆ. ಸದ್ಯಕ್ಕೆ ಮನೆಯಲ್ಲಿ ಕ್ವಾರಂಟೈನ್​ನಲ್ಲಿ ಇರುವ ಅವರು, ತಾವು ಕ್ಷೇಮವಾಗಿದ್ದೇನೆ ಎಂದು ಸೋಷಿಯಲ್​ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಹೇಳಿದ್ದಾರೆ.

ಕಳೆದ ಜೂನ್​ 11ರಂದು ಅಮಿತಾಭ್​ ಬಚ್ಚನ್​ ಮತ್ತು ಅವರ ಮಗ ಅಭಿಷೇಕ್​ ಬಚ್ಚನ್​ ಅವರಿಗೆ ಕೋವಿಡ್​ ಪರೀಕ್ಷೆ ನಡೆಸಿದಾಗ, ವರದಿಯಲ್ಲಿ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಇಬ್ಬರೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೂಕ್ತ ಚಿಕಿತ್ಸೆಯ ನಂತರ ಮತ್ತೊಮ್ಮೆ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಅಭಿಷೇಕ್​ಗೆ ಪಾಸಿಟಿವ್​ ಬಂದರೆ, ಅಮಿತಾಭ್​ ಬಚ್ಚನ್​ ಅವರಿಗೆ ನೆಗೆಟಿವ್​ ಬಂದಿದೆ.

ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿ ಮನೆಗೆ ಕಳುಹಿಸಲಾಗಿದೆ. ಮನೆಗೆ ಬಂದರೂ, ತಮ್ಮ ಮನಸ್ಸು ಮಾತ್ರ ಆಸ್ಪತ್ರೆಯಲ್ಲೇ ಇದೆ ಎಂದು ಅಮಿತಾಭ್​ ಬಚ್ಚನ್​ ಹೇಳಿಕೊಂಡಿದ್ದಾರೆ. 'ಬಿಗ್​ ಬಿ' ಹೀಗೆ ಹೇಳಿದ್ದಿಕ್ಕೂ ಕಾರಣವಿದೆ. ಅವರು ಮನೆಗೆ ವಾಪಸ್ಸು ಬಂದರೂ, ಮಗ ಅಭಿಷೇಕ್​ ಇನ್ನೂ ಅಲ್ಲಿಯೇ ಇರುವುದರಿಂದ ಅವರಿಗೆ ಸಹಜವಾಗಿಯೇ ಬೇಸರ ತರಿಸಿದೆ. ಅದೇ ಕಾರಣಕ್ಕೆ, ದೇಹ ಮನೆಯಲ್ಲಿದ್ದರೂ, ಮನಸ್ಸು ಮಾತ್ರ ಆಸ್ಪತ್ರೆಯಲ್ಲಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಅಭಿಷೇಕ್​ ಇನ್ನೂ ಆಸ್ಪತ್ರೆಯಲ್ಲಿರುವ ಕುರಿತು ಅನಿಸಿಕೆ ಮಾತಾಡಿರುವ ಅವರು, 'ಅವನು ಇನ್ನೂ ಆಸ್ಪತ್ರೆಯಲ್ಲಿರುವುದು ಬೇಸರ ತರಿಸುತ್ತಿದೆ. ಅವನು ಆದಷ್ಟು ಬೇಗ ಮನೆಗೆ ಬರಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಅವರು ಹೇಳಿದ್ದಾರೆ.

ಅಮಿತಾಭ್​ 20ಕ್ಕೂ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು. ಈ ಸಮಯದಲ್ಲಿ ತಮಗೆ ಶುಶ್ರೂಷೆ ಮಾಡಿದ ಮತ್ತು ಕೋವಿಡ್​-19 ವಿರುದ್ಧ ಸಮರ ಸಾರಿರುವ ವೈದ್ಯರು ಮತ್ತು ನರ್ಸ್​ಗಳ ಕುರಿತು ಅವರು ಬರೆಯುತ್ತಲೇ ಇದ್ದಾರೆ. ಅಷ್ಟೇ ಅಲ್ಲ, ಅವರನ್ನು ಪ್ರಾಣ ಕಾಪಾಡುವ ದೇವತೆಗಳು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅವರಿಗೆ ಋಣಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net