ಬೆಂಗಳೂರು: ಕರೊನಾದಿಂದಾಗಿ ಇಡೀ ವಿಶ್ವವೇ ಈಗ ಸಮಸ್ಯೆಯಲ್ಲಿ ಸಿಲುಕಿದೆ. ಎಲ್ಲ ಕ್ಷೇತ್ರಗಳು ಕಾರ್ಯ ಚಟುವಟಿಕೆ ನಿಲ್ಲಿಸಿವೆ. ಲಾಕ್ಡೌನ್ ನೆಪದಲ್ಲಿ ಭಾರತೀಯರೆಲ್ಲರೂ ಮನೆಯಲ್ಲಿ ಕುಳಿತಿದ್ದಾರೆ. ಉಳ್ಳವರು ದೇಣಿಗೆ ನೀಡುತ್ತಿದ್ದಾರೆ. ಇಲ್ಲದವರ ನೆರವಿಗಾಗಿ ಧಾವಿಸುತ್ತಿದ್ದಾರೆ. ಆಹಾರ ಪೊಟ್ಟಣಗಳನ್ನು ಮಾಡಿಕೊಂಡು ಹಂಚಿಕೆ ಮಾಡುತ್ತಿದ್ದಾರೆ. ಅದೇ ರೀತಿ ಗಾಯಕ ವಿಜಯ್ ಪ್ರಕಾಶ್ ಸಹ ಇದೀಗ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂ. ನೀಡಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್, ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ 50 ಲಕ್ಷ ವೊತ್ತದ ಚೆಕ್ ವಿತರಿಸಿದ್ದರು.