ಸಿನಿವಾಣಿ

ಗಾಯಕಿ ಶಮಿತಾ ಮಲ್ನಾಡ್ ಪುತ್ರನ ಪ್ರಶ್ನೆಗೆ ವಿರಾಟ್ ಕೊಹ್ಲಿ ಕೊಟ್ರು ಉತ್ತರ

manjunathktgns

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಮಂದಿಯಿಂದ ಹಿಡಿದು ಕ್ರೀಡಾ ತಾರೆಯರೂ ಅಭಿಮಾನಿಗಳ ಜತೆ ಸೋಷಿಯಲ್ ಮೀಡಿಯಾ ಮೂಲಕ ಸಂಪರ್ಕದಲ್ಲಿರುತ್ತಾರೆ. ಒಂದಿಲ್ಲೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಚಂದನವನದ ಗಾಯಕಿ ಶಮಿತಾ ಮಲ್ನಾಡ್ ಅವರ ಪುತ್ರನ ಪ್ರಶ್ನೆಗೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಉತ್ತರ ನೀಡಿದ್ದಾರೆ.

ಹೌದು, ಇನ್​ಸ್ಟಾಗ್ರಾಂನಲ್ಲಿ ನಿಮ್ಮ ಏನೇ ಪ್ರಶ್ನೆಗಳಿದ್ದರೆ ಕೇಳಿ, ಅದಕ್ಕೆ ಉತ್ತರಿಸುವೆ ಎಂದು ಕೊಹ್ಲಿ ಪೋಸ್ಟ್​ ಹಾಕಿದ್ದರು. ಆ ಪೋಸ್ಟ್​ಗೆ ಗಾಯಕಿ ಶಮಿತಾ ಮಲ್ನಾಡ್ ಅವರ ಪುತ್ರ ಅದ್ವೈತ್​ ಹೆಗಡೆ ಆರ್​ಸಿಬಿ ಅಭಿಮಾನಿಯಾಗಿರುವುದರಿಂದ ಕನ್ನಡದ ಬಗ್ಗೆ ಪ್ರಶ್ನೆ ಕೇಳಿದ್ದರು. ನಿಮಗೆ ಕನ್ನಡ ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಬರುತ್ತದೆಯೇ ಎಂದಿದ್ದರು. ಆ ಪ್ರಶ್ನೆಗೆ ವಿರಾಟ್ ಪ್ರತಿಕ್ರಿಯೆ ನೀಡಿದ್ದಾರೆ.

‘ಸ್ವಲ್ಪ ಸ್ವಲ್ಪ ಸರ್.. ಹೆಚ್ಚು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ’ ಎಂದು ಅದ್ವೈತ್ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸದ್ಯ ಈ ವಿಚಾರವನ್ನು ಶಮಿತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಉತ್ತರದ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಮಗನ ಸಂಭ್ರಮವನ್ನೂ ಹೇಳಿಕೊಂಡಿದ್ದಾರೆ.