ಸಿನಿವಾಣಿ

ನೋ ಸ್ಮೋಕಿಂಗ್​ ಜಾಹೀರಾತು ಬಾಲಕಿ ಈಗ ಹೇಗಿದ್ದಾಳೆ ನೋಡಿ? ಬೋಲ್ಡ್​ ಅವತಾರಕ್ಕೆ ಫಿದಾ ಆಗೋದು ಗ್ಯಾರಂಟಿ

ನವದೆಹಲಿ: ನೀವು ಯಾವುದೇ ಚಿತ್ರಮಂದಿರಕ್ಕೆ ತೆರಳಿದರೆ ಸಿನಿಮಾ ಶುರುವಾಗುವ ಆರಂಭದಲ್ಲೇ ನೋ ಸ್ಮೋಕಿಂಗ್​ ಜಾಹೀರಾತು ಪ್ರದರ್ಶನ ಆಗುವುದನ್ನು ಸಾಮಾನ್ಯವಾಗಿ ಎಲ್ಲರು ನೋಡಿರುತ್ತಾರೆ. ಜಾಹೀರಾತಿನಲ್ಲಿ ತಂದೆ ಮತ್ತು ಮಗಳನ್ನು ಕೇಂದ್ರವಾಗಿಟ್ಟುಕೊಂಡು ನೋ ಸ್ಮೋಕಿಂಗ್​ ಜಾಹೀರಾತಿನ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಈ ಜಾಹೀರಾತಿನಲ್ಲಿರುವ ಪುಟ್ಟ ಹುಡುಗಿಯನ್ನು ನೀವೆಲ್ಲ ನೋಡಿರುತ್ತೀರಿ. ಈ ಪುಟ್ಟ ಬಾಲಕಿ ಈಗ ಬದಲಾಗಿರುವುದನ್ನು ನೋಡಿದರೆ ನಿಮಗೆಲ್ಲರಿಗೂ ಆಶ್ಚರ್ಯವಾಗದೇ ಇರದು.

ಜಾಹೀರಾತಿನಲ್ಲಿ ಏನಿದೆ? ಮಗಳು ಧೂಮಪಾನ ಮಾಡುವ ತಂದೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾಳೆ ಮತ್ತು ಧೂಮಪಾನ ಮಾಡುತ್ತಾ ಕೆಮ್ಮುವ ತಂದೆಯನ್ನೇ ದಿಟ್ಟಿಸಿ ನೋಡುತ್ತಾಳೆ. ಈ ವೇಳೆ ಮಗಳನ್ನು ನೋಡುವ ತಂದೆ ಸ್ಮೋಕಿಂಗ್​ಗೆ ಗುಡ್​ಬೈ ಹೇಳುತ್ತಾನೆ. ಧೂಮಪಾನದಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕುತ್ತದೆ ಎಂಬುದು ಜಾಹೀರಾತಿನ ಸಾರಾಂಶ. ಆದರೆ ಈ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲನಟಿ ಸಿಮ್ರಾನ್ ನಾಟೇಕರ್​ಗೆ ಆಗ 6 ವರ್ಷ ವಯಸ್ಸು. ಆಕೆ ಈಗ ಎಷ್ಟು ಬದಲಾಗಿದ್ದಾಳೆ ಅಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಸೌಂದರ್ಯವತಿಯಾಗಿರುವ ಸಿಮ್ರಾನ್ ನಾಟೇಕರ್ ಟಿವಿ ಮತ್ತು ಸಿನಿಮಾ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ನಾಟೇಕರ್​ ಬೋಲ್ಡ್​ ಅವತಾರಗಳು ಸಹ ನೋಡುಗರನ್ನು ಹುಬ್ಬೇರುವಂತೆ ಮಾಡುತ್ತದೆ.

ಸಿಮ್ರಾನ್​ ಅವರು 1997, ಡಿಸೆಂಬರ್ 12 ರಂದು ಮುಂಬೈನಲ್ಲಿ ಜನಿಸಿದರು. 6ನೇ ವಯಸ್ಸಿನಲ್ಲೇ ಚಿಕ್ಕ ಹುಡುಗಿಯಾಗಿ ನೋ ಸ್ಮೋಕಿಂಗ್​ ಜಾಹೀರಾತು ಜಾಗೃತಿ ಅಭಿಯಾನದಲ್ಲಿ ನಟಿಸಲು ಪ್ರಾರಂಭಿಸಿದರು. ಇದು ಅನೇಕ ದೇಶಗಳಲ್ಲಿ ಸಿಮ್ರಾನ್​ ಅವರನ್ನು ಜನಪ್ರಿಯಗೊಳಿಸಿತು. ನಂತರ ದೂರದರ್ಶನ ಜಾಹೀರಾತುಗಳಲ್ಲಿ ಅಭಿನಯಿಸಿದೆ. 2018ರಲ್ಲಿ ಯೂಟ್ಯೂಬ್‌ನಲ್ಲಿ ಗಿರಿಲಿಯಪ್ಪಾ ಗರ್ಲ್ಸ್​ ಹಾಸ್ಟೆಲ್​ ಸರಣಿಯಲ್ಲಿ ಮಿಲ್ಲಿ ಪಾತ್ರವನ್ನು ಸಿಮ್ರಾನ್​ ನಿರ್ವಹಿಸಿದರು. ಸಿಮ್ರಾನ್​ ಅವರ ಫೋಟೋ ಕಾಂಪ್ಲಾನ್ ಬಾಕ್ಸ್‌ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೆ, ಮುಂಬೈ ಮೆಟ್ರೋ ನಿರ್ಮಾಣಕ್ಕಾಗಿ ಸಾರ್ವಜನಿಕ ಜಾಗೃತಿ ಪೋಸ್ಟರ್‌ಗಳಲ್ಲಿಯೂ ರಾರಾಜಿಸಿದ್ದಾರೆ.

ಸಿಮ್ರಾನ್ 150 ಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿದ್ದಾರೆ. 'ಬಂಧನ್ ಸಾಥ್ ಜನ್ಮೋಂಕಾ' ಸಿಮ್ರಾನ್​ ಅವರ ಮೊದಲ ಧಾರಾವಾಹಿ ಮತ್ತು 'ದಾವತ್-ಎ-ಇಷ್ಕ್' ಆಕೆಯ ಮೊದಲ ಬಾಲಿವುಡ್ ಚಿತ್ರ. 2015ರಲ್ಲಿ ಪ್ರಸಾರವಾದ 'ಬಾಲಿಕಾ ವಧು' ಚಿತ್ರದಲ್ಲಿ ಸಿಮ್ರಾನ್ ನಾಟೇಕರ್ ಪೂಜಾ ಪಾತ್ರವನ್ನು ನಿರ್ವಹಿಸಿದರು.

ಸಿಮ್ರಾನ್ ಈ ಹಿಂದೆ ತಮ್ಮ ಜಾಹೀರಾತು ಫೋಟೋವನ್ನು Instagram ನಲ್ಲಿ ಹಂಚಿಕೊಂಡಿದ್ದರು. ಧೂಮಪಾನ ನಿಷೇಧದ ನನ್ನ ಮೊದಲ ಜಾಹೀರಾತು ಎಂದು ಬರೆದುಕೊಂಡಿದ್ದರು. ಫೋಟೋ ನೋಡಿದವರು ಆ ಹುಡುಗಿ ಈಗ ಇಷ್ಟು ಸುಂದರವಾಗಿದ್ದಾಳಾ? ಎಂದು ನೆಟಿಜನ್‌ಗಳು ಪ್ರಶ್ನಿಸಿದ್ದಾರೆ. ಸದ್ಯ ಸಿಮ್ರಾನ್​ ಅವರ ಫೋಟೋಗಳು ಸಖತ್​ ವೈಲ್​ ಆಗುತ್ತಿವೆ. (ಏಜೆನ್ಸೀಸ್​)