ಹೈದರಾಬಾದ್: ತೆಲುಗು ನಟ ಸಿಧು ಜೊನ್ನಲಗದ್ದ ನಟನೆಯ "ಕೃಷ್ಣ ಆ್ಯಂಡ್ ಹಿಸ್ ಲೀಲಾ" ಚಿತ್ರವನ್ನು ರವಿಕಾಂತ್ ಪೆರೆಪು ಅವರು ನಿರ್ದೇಶಿಸಿದ್ದಾರೆ. ಜೂನ್ 1ರಂದು ಚಿತ್ರವನ್ನು ಬೆಳ್ಳಿತೆರೆಯ ಮೇಲೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಮಹಾಮಾರಿ ಕರೊನಾ ವೈರಸ್ ಲಾಕ್ಡೌನ್ನಿಂದಾಗಿ ಚಿತ್ರತಂಡ ಜೂನ್ 25ರಂದು ಓಟಿಟಿ ಪ್ಲ್ಯಾಟ್ಫಾರ್ಮ್ ನೆಟ್ಫ್ಲಿಕ್ಸ್ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದೆ.
ಕನ್ನಡತಿ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ಅಭಿನಯಿಸಿರುವ ತೆಲುಗು ರೊಮ್ಯಾಂಟಿಕ್ ಡ್ರಾಮಾದಲ್ಲಿ ಸೀರತ್ ಕಪೂರ್ ಮತ್ತು ಶಾಲಿನಿ ವಾದ್ನಿಕಟ್ಟಿ ಸಹ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿರುವ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಇದೇ ಖುಷಿಯಲ್ಲಿ ಚಿತ್ರ ನಿರ್ದೇಶಕ ರವಿಕಾಂತ್ ಪೆರೆಪು ಹಾಗೂ ನಟ ಸಿಧು ಜೊನ್ನಲಗದ್ದ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.
ಚಿತ್ರದಲ್ಲಿ ಸಹ ಬರಹಗಾರರಾಗಿರುವ ಸಿಧು 2017ರಿಂದಲೂ ನಿರ್ದೇಶಕರೊಂದಿಗೆ ಸ್ಕ್ರಿಪ್ಟ್ ಬರಹದಲ್ಲಿ ತೊಡಗಿಸಿಕೊಂಡಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಚಿತ್ರ ಬಿಡುಗಡೆ ಮಾಡಿದ ಬೆನ್ನಲ್ಲೇ ಇಬ್ಬರು ಪರಸ್ಪರ ಲಿಪ್ ಕಿಸ್ ಮಾಡುತ್ತಿರುವ ಚಿತ್ರವನ್ನು ಸಿಧು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು, ಕೃಷ್ಣ ಆ್ಯಂಡ್ ಹಿಸ್ ಲೀಲಾ. ಆಲ್ ಯುವರ್ಸ್ ಮೈಕ್ ಡ್ರಾಪ್ (ನಿಮ್ಮೆಲ್ಲರ, ಮೈಕ್ ಕೆಳಗಿಡಿ) ಎಂದು ಬರೆದುಕೊಂಡಿದ್ದಾರೆ.
ನಿರ್ದೇಶಕ ಮತ್ತು ನಟ ಚುಂಬಿಸುತ್ತಿರುವ ಫೋಟೋ ಅಪ್ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದ್ದು, ಇದೀಗ ಇನ್ಸ್ಟಾಗ್ರಾಂನಲ್ಲಿ ನಟ ಫಾಲೋವರ್ಸ್ಗಳು ಪ್ರಶ್ನೆಗಳ ಮಳೆಗೈದಿದ್ದಾರೆ. ಇಬ್ಬರ ಲೈಂಗಿಕ ದೃಷ್ಟಿಕೋನದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ, ಇದಕ್ಕೆ ಈ ಪ್ರಶ್ನೆಗೆ ಈವರೆಗೆ ನಟನಿಂದ ಪ್ರತಿಕ್ರಿಯೆ ಬಂದಿಲ್ಲ. ಅಭಿಮಾನಿಗಳು ಉತ್ತರಕ್ಕಾಗಿ ಎದುರು ನೋಡುತ್ತಿದ್ದಾರೆ.
ಕೃಷ್ಣ ಆ್ಯಂಡ್ ಹಿಸ್ ಲೀಲಾ ಚಿತ್ರವನ್ನು ಬಾಹುಬಲಿ ಖ್ಯಾತಿಕ ರಾಣಾ ದಗ್ಗುಬಾಟಿ ಅವರ ಸುರೇಶ್ ಪ್ರೊಡಕ್ಷನ್, ವೆಯಾಕೋಮ್ 18 ಮತ್ತು ಸಂಜಯ್ ರೆಡ್ಡಿ ಸಹಯೋಗದಲ್ಲಿ ನಿರ್ಮಿಸಿದೆ. ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. (ಏಜೆನ್ಸೀಸ್)