ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಗೊಂಬೆಗಳ ಲವ್’, ‘ದಾದಾ ಈಸ್ ಬ್ಯಾಕ್’ ಚಿತ್ರಗಳ ನಾಯಕ ಅರುಣ್ ಕುಮಾರ್ ಚೊಚ್ಚಲ ಬಾರಿಗೆ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ನೆಲ್ಸನ್’. ವಿನೋದ್ ಪ್ರಭಾಕರ್ ಈ ಚಿತ್ರದ ನಾಯಕನಾಗಿದ್ದು, ಕೆಲ ದಿನಗಳ ಹಿಂದಷ್ಟೆ ಟೈಟಲ್ ಮತ್ತು ಅವರ ಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿತ್ತು. ಇದೀಗ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ.
ಕನ್ನಡದ ‘ಖಾಸಗಿ ಪುಟಗಳು’, ಹಿಂದಿಯ ‘ದಿ ವೈ’ ಚಿತ್ರಗಳಲ್ಲಿ ನಟಿಸಿರುವ ಕರಾವಳಿ ಹುಡುಗಿ ಶ್ವೇತಾ, ಸದ್ಯ ‘ಹೆಜ್ಜಾರು’ ಚಿತ್ರದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಅದರ ನಡುವೆ ಇದೀಗ ‘ನೆಲ್ಸನ್’ಗೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಲಂಗ-ದಾವಣಿಯುಟ್ಟು ಹಳ್ಳಿ ಹುಡುಗಿ ಲಕ್‌ನಲ್ಲಿ ಶ್ವೇತಾ ಕಾಣಿಸಿಕೊಳ್ಳಲಿದ್ದಾರೆ.
ಇದು 1960ರಿಂದ 90ರ ದಶಕದವರೆಗೆ ಚಾಮರಾಜನಗರದಲ್ಲಿ ನಡೆಯುವ ನೈಜ ಘಟನೆಯಾಧಾರಿತ ಚಿತ್ರವಾಗಿದ್ದು, ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿದೆ. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ರಕ್ತದಲ್ಲಿ ನೆಂದ ದೇವರಕಾಡು’ ಎಂಬ ಅಡಿಬರಹವಿದೆ. ಚಿತ್ರಕ್ಕೆ ಪ್ರಜ್ವಲ್ ಗೌಡ ಛಾಯಾಗ್ರಹಣ, ಭರತ್ ಬಿ.ಜಿ. ಸಂಗೀತ, ವಿಜಯ್ ರಾಜ್ ಸಂಕಲನ ಹಾಗೂ ಹರಿ ಸಂಭಾಷಣೆ ಇರಲಿದೆ.