ಸಿನಿವಾಣಿ

ನಟಿ ಶ್ರುತಿ ಹಾಸನ್​​ಗೆ ಬಂದಿರೋ ಈ ಕಾಯಿಲೆಯೇ ವಿಚಿತ್ರ!!

manjunathktgns

ಕಾಲಿವುಡ್​ ನಟಿ ಶ್ರುತಿ ಹಾಸನ್​ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಜತೆಗೆ ಸುದ್ದಿ ಮಾಡುತ್ತಿರುತ್ತಾರೆ. ಸೋಷಿಯಲ್​ ಮೀಡಿಯಾದಲ್ಲೂ ಶ್ರುತಿ ಸಕ್ರಿಯರು. ಆಗಾಗ ತಮ್ಮ ವಯಕ್ತಿಕ ಮತ್ತು ಸಿನಿಮಾ ಸಂಬಂಧಿ ವಿಚಾರಗಳನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳುತ್ತಿರುತ್ತಾರೆ. ಏನೇ ವಿಚಾರ ಇದ್ದರೂ ಅದನ್ನು ನೇರಾನೇರವಾಗಿ ಹೇಳಿಕೊಳ್ಳುವುದು ಶ್ರುತಿ ಅವರ ಗುಣ. ಇದೀಗ ತಮಗಿರುವ ವಿಚಿತ್ರ ಕಾಯಿಲೆ ಬಗ್ಗೆ ಅವರೇ ಮೌನ ಮುರಿದಿದ್ದಾರೆ!

ಹೌದು, ಶ್ರುತಿ ಇತ್ತೀಚೆಗೆಷ್ಟೇ ಬರ್ತ್​ ಮಾರ್ಕ್​ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಶ್ರುತಿ ಹೇಳಿಕೊಂಡಿದ್ದರು. ಕಣ್ಣಿನಲ್ಲಿನ ಕಪ್ಪು ಮಾರ್ಕ್​ ಬಗ್ಗೆ ಹೇಳಿದ್ದರು. ಈವರೆಗೂ ಈ ವಿಚಾರ ಕುಟುಂಬದವರಿಗೆ ಮತ್ತು ಆಪ್ತರಿಗಷ್ಟೇ ಗೊತ್ತಿತ್ತು. ಇದೀಗ ಒಫಿಡಿಯೋ ಫೋಬಿಯಾ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದಾರೆ.

ಏನಿದು ಒಫಿಡಿಯೋ ಫೋಬಿಯಾ? ಸರಿಸೃಪಗಳನ್ನು ಕಂಡರೆ ಎದುರಾಗುವ ಭೀತಿಯನ್ನು ಒಫಿಡಿಯೋ ಫೋಬಿಯಾ ಎನ್ನುತ್ತಾರೆ. ಶ್ರುತಿ ಹಾಸನ್​ಗೂ ಸಹ ಈ ಕಾಯಿಲೆ ಇದೆ. ಹಾವನ್ನು ಕಂಡರೆ ತುಂಬ ಭಯಭೀತಗೊಳ್ಳುತ್ತಾರವರು. ಈ ಫೋಬಿಯಾ ಬಗ್ಗೆ ತಜ್ಞರನ್ನು ಸಂಪರ್ಕಿಸಿದರೂ ಅದರಿಂದ ಅವರು ಆಚೆ ಬರುತ್ತಿಲ್ಲ.

ಇದರ ಜತೆಗೆ ನಿದ್ರಾಹೀನತೆಯೂ ಶ್ರುತಿ ಅವರನ್ನು ಆವರಿಸಿದೆ. ಮಲಗಿದ ತಕ್ಷಣ ನಿದ್ದೆ ಬಾರದೆ, ತಡವಾಗಿ ನಿದ್ದೆಗೆ ಜಾರುತ್ತಾರಂತೆ. ಅದೇ ಒಂದು ದೊಡ್ಡ ಸಮಸ್ಯೆಯಂತೆ ಅವರನ್ನು ಬಾಧಿಸಿದೆ ಎಂದು ಅಭಿಮಾನಿಗಳ ಜತೆ ಒಂದಷ್ಟು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕರೊನಾ ಹಾವಳಿ ಮುಗಿದ ಬಳಿಕ ಜಪಾನ್​ಗೆ ತೆರಳುವ ಬಗ್ಗೆಯೂ ಶ್ರುತಿ ಹೇಳಿಕೊಂಡಿದ್ದಾರೆ. ಜತೆಗೆ ಲೈವ್​ ಕ್ರಿಕೆಟ್​ ಮ್ಯಾಚ್​ ನೋಡುವ ಬಗ್ಗೆಯೂ ಶ್ರುತಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)