ಸಿನಿವಾಣಿ

ಆರ್​ಆರ್​ಆರ್​ನತ್ತ ಶ್ರೀಯಾ ಗಮನ

lakshmihegde

ಬಹುಭಾಷಾ ನಟಿ ಶ್ರೀಯಾ ಸರಣ್ ಸದ್ಯ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್​ಆರ್​ಆರ್’ ಚಿತ್ರತಂಡಕ್ಕೆ ಆಯ್ಕೆಯಾಗಿದ್ದು ಒಂದೆಡೆಯಾದರೆ, ‘ಗಮನಂ’ ಚಿತ್ರದ ಮೂಲಕ ಹೊಸ ಸಾಹಸಕ್ಕೂ ಶ್ರೀಯಾ ಇಳಿದಿದ್ದಾರೆ. ಈ ಎರಡರ ಪೈಕಿ ರಾಜಮೌಳಿ ‘ಆರ್​ಆರ್​ಆರ್’ ಚಿತ್ರದಲ್ಲಿ ಅಜಯ್ ದೇವಗನ್ ಪತ್ನಿಯಾಗಿ ಶ್ರೀಯಾ ಕಾಣಿಸಿಕೊಳ್ಳಲಿದ್ದಾರೆ.

2005ರಲ್ಲಿ ರಾಜಮೌಳಿ ನಿರ್ದೇಶನದ ತೆಲುಗಿನ ‘ಛತ್ರಪತಿ’ ಚಿತ್ರದಲ್ಲಿ ಶ್ರೀಯಾ ನಟಿಸಿದ್ದರು. ಇದೀಗ ಸುದೀರ್ಘ 15 ವರ್ಷಗಳ ಬಳಿಕ ಮತ್ತೆ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಸೆ.11ರಂದು ಶ್ರೀಯಾ ಹುಟ್ಟುಹಬ್ಬ. ಆ ಪ್ರಯುಕ್ತ ಅವರ ಬಹುಭಾಷಾ ಸಿನಿಮಾ ‘ಗಮನಂ’ ಫಸ್ಟ್ ಲುಕ್ ಸಹ ಬಿಡುಗಡೆಯಾಗಿತ್ತು. ನಾಯಕಿ ಪ್ರಧಾನವಾದ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿದ್ಧವಾಗಲಿದೆ. ಡಿ ಗ್ಲಾಮ್ ಅವತಾರದಲ್ಲಿ ಶ್ರೀಯಾ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ನವ ನಿರ್ದೇಶಕಿ ಸುಜನಾ ರಾವ್ ಆಕ್ಷನ್ ಕಟ್ ಹೇಳಲಿದ್ದಾರೆ. ಕನ್ನಡದಲ್ಲಿ ಈ ಹಿಂದೆ ನೆನಪಿರಲಿ ಪ್ರೇಮ್ ನಾಯಕತ್ವದ ‘ಚಂದ್ರ’ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಸ್ಯಾಂಡಲ್​ವುಡ್​ಗೆ ಶ್ರೀಯಾ ಎಂಟ್ರಿಕೊಟ್ಟಿದ್ದರು.