ಸಿನಿವಾಣಿ

ರಜನಿಕಾಂತ್​, ವಿಕ್ರಮ್​, ವಿಜಯ್​ಗೆ ನಾಯಕಿಯಾಗಿದ್ದ ಈ ಹುಡುಗಿ ಯಾರು ಗೊತ್ತಾ?

ಚೆನ್ನೈ: ಸೋಷಿಯಲ್​ ಮೀಡಿಯಾದಲ್ಲಿ ಅಭಿನಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಸಿನಿಮಾ ನಟ-ನಟಿಯರು ಆಗಾಗ ತಮ್ಮ ಕಪಾಟಿನಲ್ಲಿರುವ ಭದ್ರವಾಗಿಟ್ಟಿರುವ ಹಳೆಯ ಫೋಟೋಗಳನ್ನು ಆಗಾಗ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ, ಬಾಲಿವುಡ್​ ನಟಿ ರವೀನಾ ಟಂಡನ್​ ತಮ್ಮ ಒಂದು ಹಳೆಯ ಫೋಟೋವೊಂದನ್ನು ಹಂಚಿಕೊಂಡಿದ್ದರು. ರಿಷಿ ಕಪೂರ್​ ಅವರ ಮದುವೆಯಲ್ಲಿ ತೆಗೆದು ಈ ಫೋಟೋ ಭಾರೀ ವೈರಲ್​ ಆಗಿತ್ತು.

ಇದೀಗ ಮತ್ತೊಬ್ಬ ನಟಿಯ ಬಾಲ್ಯದ ಫೋಟೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಬಹಳ ವೈರಲ್​ ಆಗಿದೆ. ಆ ನಟಿ ರಜನಿಕಾಂತ್​, ವಿಕ್ರಮ್​, ವಿಜಯ್​ ಸೇರಿದಂತೆ ಕಾಲಿವುಡ್​ನ ಹಲವು ಜನಪ್ರಿಯ ಹೀರೋಗಳ ಜತೆಗೆ ನಾಯಕಿಯಾಗಿ ನಟಿಸಿದ್ದಾರೆ. ಈ ನಟಿ ಬೇರ್ಯಾರೂ ಅಲ್ಲ, ಶ್ರೇಯಾ ಶರಣ್​.

ಶ್ರೇಯಾ ಶರಣ್​ ಒಂದು ಕಾಲದಲ್ಲಿ ಕಾಲಿವುಡ್​ನ ಜನಪ್ರಿಯ ಮತ್ತು ಬೇಡಿಕೆಯ ನಟಿಯಾಗಿದ್ದರು. ತಮಿಳಿನ ಜನಪ್ರಿಯ ಹೀರೋಗಳ ಜತೆಗೆ ಅವರು ತೆರೆ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ, ಕನ್ನಡದಲ್ಲೂ 'ಚಂದ್ರ' ಚಿತ್ರದಲ್ಲಿ ಅವರು ನಟಿಸಿದ್ದರು. ಈಗ ಅವರ ಬಾಲ್ಯದ ಫೋಟೋವಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಶ್ರೇಯಾ ಶರಣ್​ ಮೂರು ವರ್ಷಗಳ ಹಿಂದೆ ತಮ್ಮ ಬಾಯ್​ಫ್ರೆಂಡ್​, ರಷ್ಯಾ ಮೂಲದ ಆಂಡ್ರೇ ಕೋಶ್ಚೀವ್​ ಅವರನ್ನು ಮದುವೆಯಾಗಿ ಮುಂಬೈನಲ್ಲಿ ನೆಲೆಸಿದ್ದಾರೆ.