ಸಿನಿವಾಣಿ

ನಿರ್ಭಯ 2 ಚಿತ್ರದಲ್ಲಿ ಶ್ರಾವ್ಯ ; ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ ಡಾ. ವಿ. ನಾಗೇಂದ್ರ ಪ್ರಸಾದ್​

ಬೆಂಗಳೂರು:

ನಟಿ ಶ್ರಾವ್ಯ ರಾವ್​ ನಾಯಕಿಯಾಗಿರುವ, ರಾಜು ಕುಣಿಗಲ್​ ನಿರ್ದೇಶಿಸುತ್ತಿರುವ ಚಿತ್ರ "ನಿರ್ಭಯ 2'. ಚಿತ್ರಕ್ಕೆ ನಿರ್ದೇಶಕ ರಾಜು ಅವರೇ ಕಥೆ, ಚಿತ್ರಕಥೆ ಬರೆದಿದ್ದು, "ಹೆಣ್ಣಿನ ಮೇಲಿನ ಶೋಷಣೆಗಳನ್ನು ತಡೆಯುವ ಸುತ್ತ ಚಿತ್ರದ ಕಥೆ ಸುತ್ತುತ್ತದೆ' ಎಂದು ಮಾಹಿತಿ ನೀಡುತ್ತಾರೆ.

ಇತ್ತೀಚೆಗಷ್ಟೆ ಚಿತ್ರ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್​ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿ "ಅತ್ಯಾಚಾರ ಸೇರಿದಂತೆ ಸಮಾಜದಲ್ಲಿ ಹೆಣ್ಣಿನ ಮೇಲಿನ ನಡೆಯುತ್ತಿರುವ ದೌರ್ಜನ್ಯ, ಶೋಷಣೆಗಳು ಅಂತ್ಯವಾಗಲಿ' ಎಂದು ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಶ್ರಾವ್ಯ ರಾವ್​ ಜತೆ ಅರ್ಜುನ್​ ಕೃಷ್ಣ, ಕುಸುಮ, ಹರೀಶ್​ ಜಲೀಲ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಬೆಂಗಳೂರು, ತುಮಕೂರು, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಆಕಾಶ್​ ಪರ್ವ ಸಂಗೀತ ನಿರ್ದೇಶನವಿದ್ದು, ಅಕ್ಟೋಬರ್​ನಲ್ಲಿ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ.