ಸಿನಿವಾಣಿ

ಅಪ್ಪನ ಜನ್ಮದಿನಕ್ಕೆ ಶಿವಣ್ಣನಿಂದ ಬಂತು ಶುಭಾಶಯ; ತಂದೆಯನ್ನಷ್ಟೇ ಅಲ್ಲ, ತಂದೆಯ ಹೆಸರನ್ನು ಎತ್ತಿ ಹಿಡಿದಿದ್ದಾರೆ ಹ್ಯಾಟ್ರಿಕ್​ ಹೀರೋ

ಬೆಂಗಳೂರು: ನಟಸಾರ್ವಭೌಮ ಡಾ. ರಾಜ್​ಕುಮಾರ್​ ಅವರ ಜನ್ಮದಿನವಿಂದು. ಇಡೀ ಕರುನಾಡು ಕರೊನಾ ಹಿನ್ನೆಲೆಯಲ್ಲೂ ರಾಜ್​ ಅವರನ್ನು ನೆನೆಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋ ಹಂಚಿಕೊಂಡು ಅಣ್ಣಾವ್ರು ಅಜರಾಮರ ಎನ್ನುತ್ತಿದ್ದಾರೆ. ಅದೇ ರೀತಿ ಡಾ. ರಾಜ್​ ಅವರ ಹಿರಿ ಮಗ ಡಾ. ಶಿವರಾಜ್​ಕುಮಾರ್​ ಸಹ ಅಪ್ಪನ ಜನ್ಮದಿನಕ್ಕೆ ಶುಭಾಶಯ ಕೋರಿದ್ದಾರೆ. ‘ತಂದೆಯನ್ನಷ್ಟೇ ಅಲ್ಲ ತಂದೆಯ ಹೆಸರನ್ನೂ ಎತ್ತಿಹಿಡಿಯುವ ಜವಾಬ್ದಾರಿ ನನ್ನದು. ನನ್ನ ಹೆಸರನ ಪಕ್ಕ ನಿಮ್ಮ ಹೆಸರು ಸೇರಿಸಿದಾಗ ಜನ ನಮಗೆ ಕೊಡುತ್ತಿರುವ ಗೌರವ, ಪ್ರೀತಿ ಎಲ್ಲವೂ ನೀವು ಕೊಟ್ಟ ಆಸ್ತಿ. ಹುಟ್ಟು ಹಬ್ಬದ ಶುಭಾಶಯಗಳು ಅಪ್ಪಾಜಿ’ ಎಂದಿದ್ದಾರೆ.