ಸಿನಿವಾಣಿ

ಸಿಡಿಪಿ ಬಿಡುಗಡೆ ಮಾಡಿದ ಶಿವಣ್ಣ; ಥ್ಯಾಂಕ್ಸ್​ ಹೇಳಿದ ಕಿಚ್ಚ ...

ಬುದ್ಧವಾರ 'ಕಿಚ್ಚ' ಸುದೀಪ್​ ಅವರ ಹುಟ್ಟುಹಬ್ಬ. ಕರೊನಾ ಹಾವಳಿ ಹೆಚ್ಚಿರುವುದರಿಂದ ಈ ಬಾರಿ ಸುದೀಪ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಆದರೆ, ಅಭಿಮಾನಿಗಳು ಸುದೀಪ್​ ಅವರ ಹುಟ್ಟುಹಬ್ಬವನ್ನು ಸೋಷಿಯಲ್​ ಮೀಡಿಯಾ ಮೂಲಕ ಗ್ರಾಂಡ್​ ಆಗಿ ಆಚರಿಸುತ್ತಿದ್ದಾರೆ.

ಅದಕ್ಕೆ ಕಾರಣವೂ ಇದೆ. ಪ್ರಮುಖವಾಗಿ, ಸುದೀಪ್​ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇದು 25ನೇ ವರ್ಷ. ಈ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವನ್ನು ಸೋಷಿಯಲ್ ಮೀಡಿಯಾದಲ್ಲೇ ದೊಡ್ಡ ರೀತಿಯಲ್ಲಿ ಆಚರಿಸುವುದಕ್ಕೆ ತೀರ್ಮಾನಿಸುತ್ತಿದ್ದು, ಇದರ ಮೊದಲ ಹಂತವಾಗಿ, ಸುದೀಪ್​ ಅವರ ಹುಟ್ಟುಹಬ್ಬದ ಕಾಮನ್​ ಡಿಸ್​ಪ್ಲೇ ಪಿಕ್ಚರ್​ ಬಿಡುಗಡೆ ಮಾಡಲಾಗಿದೆ.

ಈ ಸಿಡಿಪಿಯನ್ನು ಭಾನುವಾರ ಸಂಜೆ ಶಿವರಾಜಕುಮಾರ್​ ಬಿಡುಗಡೆ ಮಾಡಿದ್ದು, ಸುದೀಪ್​ ಅವರಿಗೆ ಶುಭ ಕೋರಿದ್ದಾರೆ. ಇನ್ನು ರಾಮ್​ಚರಣ್​ ತೇಜ ಸೇರಿದಂತೆ ಹಲವು ನಟ-ನಟಿಯರು, ತಂತ್ರಜ್ಱರು ಈ ಸಿಡಿಪಿಯನ್ನು ಶೇರ್​ ಮಾಡಿ ಸುದೀಪ್​ ಅವರಿಗೆ ಶುಭ ಹಾರೈಸಿದ್ದಾರೆ.

ತಮ್ಮ ಹುಟ್ಟುಹಬ್ಬಕ್ಕೆ ಸಿಡಿಪಿ ಮಾಡಿ ಬಿಡುಗಡೆ ಮಾಡುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿರುವ ಸುದೀಪ್​, ಸಿಡಿಪಿ ಬಿಡುಗಡೆ ಮಾಡಿದ ಶಿವರಾಜಕುಮಾರ್​ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹಾಗೆಯೇ ಅದನ್ನು ಶೇರ್​ ಮಾಡಿರುವ ಕಲಾವಿದರು ಹಾಗೂ ತಂತ್ರಜ್ಱರಿಗೆ ಥ್ಯಾಂಕ್ಸ್​ ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಎಲ್ಲರಿಗೂ ಧನ್ಯವಾದಗಳು. ನೀವೆಲ್ಲಾ ನನ್ನ ಜತೆ ನಿಂತಿರುವುದು ನೋಡಿ, ಖುಷಿಯಾಗುತ್ತದೆ. ನೀವೆಲ್ಲಾ ಇಲ್ಲದಿದ್ದರೆ, ನನ್ನ ಜರ್ನಿ ನಿಜಕ್ಕೂ ಅಪೂರ್ಣ' ಎಂದು ಸುದೀಪ್​ ಹೇಳಿಕೊಂಡಿದ್ದಾರೆ.