More

    100ಕ್ಕೂ ಹೆಚ್ಚು ತಾಸುಗಳು ಕಳೆದುಹೋದವು..’: ಕಂಗನಾಗೆ ಬಿಜೆಪಿ ಮುಖಂಡನ ಬೆಂಬಲ

    ಮುಂಬೈ: ಬಾಲಿವುಡ್​​ನಲ್ಲಿರುವ ಹುಳುಕನ್ನು ಒಂದೊಂದಾಗಿ ಬಿಚ್ಚಿಡುತ್ತಿರುವ ನಟಿ ಕಂಗನಾ ರಣಾವತ್​​ಗೆ ಸೂಕ್ತ ರಕ್ಷಣೆ ಕೊಡುವಂತೆ ಬಿಜೆಪಿ, ಮಹಾರಾಷ್ಟ್ರ ಮುಖ್ಯಮಂತ್ರಿಗೆ ಒತ್ತಾಯಿಸಿದೆ.

    ಸುಶಾಂತ್​ ಸಿಂಗ್​ ಸಾವಿನ ಬಳಿಕ ಕಂಗನಾ ರಣಾವತ್ ಬಾಲಿವುಡ್​​ಗೆ ಸಂಬಂಧಪಟ್ಟ ಹಲವು ರಹಸ್ಯಗಳನ್ನು ಹೇಳುತ್ತಲೇ ಇದ್ದಾರೆ. ಬಾಲಿವುಡ್​​ನಲ್ಲಿ ಡ್ರಗ್​ ಮಾಫಿಯಾ ಇರುವ ಬಗ್ಗೆಯೂ ಅವರೇ ಟ್ವೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ನನ್ನ ಸಹನಟನೋರ್ವ ಶೂಟಿಂಗ್​ ಸೆಟ್​​ನಲ್ಲೇ ಮಾದಕ ವಸ್ತುಗಳ ಸೇವನೆ ಮಾಡುವುದನ್ನು ಕಣ್ಣಾರೆ ನೋಡಿದ್ದೇನೆ..ಆತ ವಿದೇಶಿ ಗೆಳತಿಯರೊಂದಿಗೆ ಸೇರಿ ಪ್ರತಿದಿನ ಮಜಾ ಮಾಡುತ್ತಿದ್ದ ಎಂದೂ ಹೇಳಿದ್ದಾರೆ.

    ಹೀಗೆ ಹಲವು ಗುಟ್ಟುಗಳನ್ನು ಬಹಿರಂಗ ಪಡಿಸುತ್ತಿರುವ ಕಂಗನಾ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದ್ದರೂ, ಇನ್ನೂ ಯಾಕೆ ಅವರಿಗೆ ಭದ್ರತೆ ನೀಡಲಿಲ್ಲ ಎಂದು ಬಿಜೆಪಿ ಮುಖಂಡ ರಾಮ್​ ಕದಮ್​ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸುರೇಶ್ ರೈನಾ ಜಾಗಕ್ಕೆ ಮೂವರ ನಡುವೆ ನಡೆದಿದೆ ತಲಾಶ್…!

    ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ರಾಮ್​ ಕದಮ್​ ಪತ್ರ ಬರೆದಿದ್ದು, ನನಗೆ ರಕ್ಷಣೆ ಕೊಡುವುದಾದರೆ ನಾನು ಬಾಲಿವುಡ್​​ನಲ್ಲಿ ಇರುವ ಡ್ರಗ್ಸ್​ ಮಾಫಿಯಾ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡುತ್ತೇನೆ ಎಂದು ಕಂಗನಾ ರಣಾವತ್​ ಹೇಳಿ 100ಕ್ಕೂ ಹೆಚ್ಚು ತಾಸುಗಳು ಕಳೆದು ಹೋದವು. ಆದರೆ ಇದುವರೆಗೂ ಮಹಾರಾಷ್ಟ್ರ ಸರ್ಕಾರ ಕಂಗನಾಗೆ ಭದ್ರತೆ ನೀಡಲಿಲ್ಲ, ಯಾಕೆ ಎಂದು ಪ್ರಶ್ನಿಸಿದ್ದಾರೆ.
    ಮಹಾರಾಷ್ಟ್ರ ಸರ್ಕಾರಕ್ಕೂ ಕಂಗನಾ ಬಗ್ಗೆ ಭಯನಾ? ಅಥವಾ ಕಂಗನಾ ರಣಾವತ್​ ಬಹಿರಂಗ ಪಡಿಸುವ ಸತ್ಯದಲ್ಲಿ ರಾಜಕೀಯ ಸಂಪರ್ಕವೂ ಇದೆಯಾ? ಇದನ್ನೆಲ್ಲ ಸ್ಪಷ್ಟಪಡಿಸಬೇಕು ಎಂದು ರಾಮ್​ ಕದಮ್​ ಒತ್ತಾಯಿಸಿದ್ದಾರೆ.

    ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರಿಯಾ ಚಕ್ರವರ್ತಿಗೆ ಮಹಾ ಸರ್ಕಾರ ಭದ್ರತೆ ನೀಡುತ್ತಿದೆ. ಆದರೆ ಸತ್ಯವನ್ನೇ ಹೇಳುತ್ತಿರುವ ಕಂಗನಾ ರಣಾವತ್​ಗೆ ಮಾತ್ರ ರಕ್ಷಣೆ ಕೊಡುತ್ತಿಲ್ಲ ಎಂದೂ ಅವರು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಆಂಧ್ರದಲ್ಲಿ ಬೈಕ್​ಗೆ ಗುದ್ದಿ, ಟ್ರಕ್​​ಗೆ ಡಿಕ್ಕಿ ಹೊಡೆದ ಕಾರು; ಬೆಂಗಳೂರಿನ ಮೂವರು ಸೇರಿ 4 ಮಂದಿ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts