ಸಿನಿವಾಣಿ

ಒಟಿಟಿಗೆ ಶಾರೂಖ್: ಡಿಸ್ನಿ ಹಾಟ್​ಸ್ಟಾರ್​ನ ಹೊಸ ವೆಬ್​ಸರಣಿಯೊಂದರಲ್ಲಿ ನಟನೆ

Webdesk - Ravikanth

‘ಪಠಾಣ್’, ಅಟ್ಲಿ ಮತ್ತು ರಾಜಕುಮಾರ್ ಹಿರಾನಿ ನಿರ್ದೇಶನದ ಹೊಸ ಚಿತ್ರಗಳನ್ನು ಒಪ್ಪಿಕೊಂಡಿರುವ ಶಾರೂಖ್, ಡಿಸ್ನಿ ಹಾಟ್​ಸ್ಟಾರ್​ನ ಹೊಸ ವೆಬ್​ಸರಣಿಯೊಂದರಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ. ಈ ಕುರಿತು ಪ್ರೋಮೋ ಶೇರ್ ಮಾಡಿದ್ದಾರೆ. ‘ಡಿಸ್ನಿ ಹಾಟ್​ಸ್ಟಾರ್​ನಲ್ಲಿ ನಾನ್​ಸ್ಟಾಪ್ ಕ್ರಿಕೆಟ್, ದೊಡ್ಡದೊಡ್ಡ ಸ್ಟಾರ್​ಗಳು, ಬ್ಲಾಕ್​ಬಸ್ಟರ್ ಚಿತ್ರಗಳು, ಎಕ್ಸ್​ಕ್ಲೂಸಿವ್ ವೆಬ್​ಸರಣಿಗಳು ... ಎಲ್ಲವೂ ಇದೆ, ಶಾರೂಖ್ ಖಾನ್ ಒಬ್ಬರನ್ನು ಬಿಟ್ಟು ...’ ಎಂದು ಆ ಪ್ರೋಮೋ ಅಂತ್ಯವಾಗುತ್ತದೆ.

ಆ ಪ್ರೋಮೋ ಹಂಚಿಕೊಂಡಿರುವ ಶಾರೂಖ್, ‘ಪಿಕ್ಚರ್ ಅಭಿ ಬಾಕಿ ಹೇ ದೋಸ್ತೋನ್...’ ಎಂದು ಸೂಚ್ಯವಾಗಿ ಹೇಳಿದ್ದಾರೆ. ಮೂಲಗಳ ಪ್ರಕಾರ, ಸದ್ಯದಲ್ಲೇ ಇನ್ನೊಂದು ಪ್ರೋಮೋ ಹೊರಬರಲಿದ್ದು, ಅದರಲ್ಲಿ ಶಾರೂಖ್ ಒಟಿಟಿಗೆ ಎಂಟ್ರಿ ಕೊಡುವ ಕುರಿತು ಅಧಿಕೃತವಾಗಿ ಘೋಷಿಸಲಾಗುತ್ತದಂತೆ.