ಮುಂಬೈ: ಬಾಲಿವುಡ್ನ ಹಲವು ನಟ-ನಟಿಯರು ಕರೊನಾ ಸಂತ್ರಸ್ತರಿಗೆ ಸಹಾಯವಾಗುವ ನಿಟ್ಟಿನಲ್ಲಿ ತಮ್ಮದೇ ರೀತಿಯಲ್ಲಿ ಸಹಾಯ ಮಾಡುವುದಕ್ಕೆ ಮುಂದಾಗಿದ್ದಾರೆ. ಬಾಲಿವುಡ್ನ ಜನಪ್ರಿಯ ನಟಿ ಶರ್ಮಿಳಾ ಠ್ಯಾಗೋರ್ ಮತ್ತು ಅವರ ಮಗಳು ಸೋಹಾ ಅಲಿ ಖಾನ್ ಸಹ ತಮ್ಮ ಖಾಸಗೀ ವಸ್ತುಗಳನ್ನು ಹರಾಜು ಹಾಕಿ ಅದರಿಂದ ಬಂದ ಹಣವನ್ನು ಒಂದಿಷ್ಟು ಒಳ್ಳೆಯ ಕೆಲಸಗಳಲ್ಲಿ ತೊಡಗಿಸುವುದಕ್ಕೆ ಮುಂದಾಗಿದ್ದಾರೆ.
ಹಾಗಂತ, ಶರ್ಮಿಳಾ ಠ್ಯಾಗೋರ್ ಮತ್ತು ಸೋಹಾ ಅಲಿ ಖಾನ್ ಸಹ ಹರಾಜಿನಿಂದ ಬಂದ ಹಣವನ್ನು ಕೋವಿಡ್ ಸಂತ್ರಸ್ತರ ನಿಧಿಗೆ ಕೊಡುತ್ತಿದ್ದಾರೆ ಎಂದುಕೊಂಡರೆ ಅದು ತಪ್ಪು. ಪರಿಸರ ರಕ್ಷಣೆ ಮತ್ತು ಪ್ರಾಣಿಗಳ ಹಿತರಕ್ಷಣೆಗೆ ಅವರು ಧನಸಹಾಯ ಮಾಡಲಿದ್ದಾರೆ. ಹಾಗಂತ ಖುದ್ದು ಸೋಹಾ ಅಲಿ ಖಾನ್ ಹೇಳಿಕೊಂಡಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋಹಾ, ಕಳೆದೊಂದು ವರ್ಷದಲ್ಲಿ ಜೀವನದಲ್ಲಿ ಏನು ಮುಖ್ಯ ಎಂಬುದು ನನಗೆ ಬಹಳ ಚೆನ್ನಾಗಿ ಅರ್ಥವಾಗಿದೆ. ಮುಖ್ಯವಾಗಿ ಪರಿಸರ ರಕ್ಷಣೆ ಮಾಡುವುದರ ಜತೆಗೆ ಪ್ರಾಣಿಗಳ ರಕ್ಷಣೆ ಸಹ ಬಹಳ ಮುಖ್ಯ. ಈ ನಿಟ್ಟಿನಲ್ಲಿ, ನಮ್ಮ ಖಾಸಗೀ ವಸ್ತುಗಳನ್ನು ಹರಾಜು ಹಾಕುವುದಕ್ಕೆ ತೀರ್ಮಾನಿಸಿದ್ದೇವೆ. ಎಷ್ಟೋ ದಿನಗಳಿಂದ ಬಳಸದೆ ಇರುವ ಹಲವು ವಸ್ತುಗಳು ಕಪಾಟಿನಲ್ಲಿರುತ್ತವೆ. ಅದನ್ನು ಹರಾಜು ಹಾಕಿ, ಅದರಿಂದ ಬಂದ ಹಣವನ್ನು ಒಂದಿಷ್ಟು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಳ್ಳುವುದು ನಮ್ಮ ಐಡಿಯಾ ಎಂದು ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸುಟ್ಟು ಕರಕಲಾಯಿತು ಜೋಧಾ ಅಕ್ಬರ್ ಚಿತ್ರದ ಸೆಟ್ಗಳು …
ಹರಾಜಿನಿಂದ ಬಂದ ಹಣವನ್ನು ಅವರು ಪಟೌಡಿ ಟ್ರಸ್ಟ್ ಮತ್ತು ವರ್ಲ್ಡ್ ಫಾರ್ ಆಲ್ ಎಂಬ ಎನ್ಜಿಓಗೆ ಕೊಡಲಿದ್ದಾರೆ.