ಬೆಂಗಳೂರು: ‘ಅವತಾರ ಪುರುಷ’ ಚಿತ್ರದ ಎರಡು ಭಾಗ ಮುಗಿಸಿರುವ ನಟ ಶರಣ್, ಸದ್ಯ ‘ಗುರು ಶಿಷ್ಯರು’ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಹಾಗಾದರೆ, ಈ ಸಿನಿಮಾ ಮುಗಿದ ಬಳಿಕ ಶರಣ್ ಮುಂದಿನ ಸಿನಿಮಾ ಯಾವುದು? ಇಲ್ಲಿಯವರೆಗೂ ಆ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಅದೂ ಸಹ ಬಹಿರಂಗವಾಗಿದೆ. ಈ ಸಲ ಕಾಮಿಡಿ ಜತೆಗೆ ಹೆದರಿಸಲು ಶರಣ್ ತಯಾರಿ ನಡೆಸಿದ್ದಾರೆ. ಇನ್ನೇನು ಶೀಘ್ರದಲ್ಲಿ ಚಿತ್ರದ ಶೀರ್ಷಿಕೆ ಸಹ ಅನಾವರಣವಾಗಲಿದೆ.
ಈಗಾಗಲೇ ‘ಕರ್ವ’ ಮತ್ತು ‘ಬಕಾಸುರ’ ಸಿನಿಮಾ ನಿರ್ದೇಶನ ಮಾಡಿರುವ ನವನೀತ್, ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಹಾರರ್ ಶೈಲಿಯಲ್ಲಿ ಸಿದ್ಧವಾಗಲಿರುವ ಚಿತ್ರಕ್ಕೆ ತರುಣ್ ಶಿವಪ್ಪ ನಿರ್ವಪಕರು. ಚಿತ್ರದ ಬಹುತೇಕ ಶೂಟಿಂಗ್ ಉತ್ತರಖಂಡದ ಹಿಮದಲ್ಲಿಯೇ ನಡೆಯಲಿದ್ದು, ನವೆಂಬರ್ನಲ್ಲಿ ಶೂಟಿಂಗ್ ಆರಂಭವಾಗಲಿದೆ. ಅನೂಪ್ ಕಟ್ಟುಕರಣ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ.