ಮುಂಬೈ : ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಪತ್ನಿ ಮೀರಾ ರಜಪೂತ್ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಸಂದರ್ಭಕ್ಕೆ ಪರಸ್ಪರ ತಬ್ಬಿ ನಿಂತಿರುವ ರೋಮ್ಯಾಂಟಿಕ್ ಚಿತ್ರವೊಂದನ್ನು ಮೀರಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
"ನಾನು ಶಬ್ದಗಳು ಸಾಕಾಗದಷ್ಟು ನಿಮ್ಮನ್ನು ಪ್ರೀತಿಸುತ್ತೇನೆ. ಹ್ಯಾಪಿ 6, ಮೈ ಲವ್, ಮೈ ಲೈಫ್" ಎಂದು ತಮ್ಮ ಪೋಸ್ಟ್ನೊಂದಿಗೆ ಭಾವುಕ ಸಂದೇಶವನ್ನೂ ಮೀರಾ ಹಾಕಿದ್ದಾರೆ. ಇದಕ್ಕೆ ಸಾವಿರಾರು ಅಭಿಮಾನಿಗಳು ಶುಭಾಶಯಗಳನ್ನು ಕೋರಿ ಪ್ರತಿಕ್ರಿಯಿಸಿದ್ದಾರೆ. ಶಾಹಿದ್ರ ಒಬ್ಬ ಮಹಿಳಾ ಅಭಿಮಾನಿ, "ನಿಮ್ಮನ್ನು ನೋಡಿದರೆ ಈರ್ಷೆ ಉಂಟಾಗುತ್ತೆ, ಆದರೆ ಸಂತೋಷ ಕೂಡ ಆಗುತ್ತೆ" ಎಂದು ಬರೆದಿದ್ದಾರೆ!
ಶಾಹಿದ್ ಮೀರಾರ ಕೈಹಿಡಿದಿದ್ದು 2015ರಲ್ಲಿ. ದಂಪತಿಗೆ ಇಬ್ಬರು ಮಕ್ಕಳು - 2016 ರಲ್ಲಿ ಹುಟ್ಟಿದ ಮೀಶಾ ಮತ್ತು 2018 ರಲ್ಲಿ ಹುಟ್ಟಿದ ಜಾಯಿನ್. ದೆಹಲಿ ಯೂನಿವರ್ಸಿಟಿ ಪದವೀಧರೆಯಾದ ಮೀರಾಗಿಂತ ಶಾಹಿದ್ 13 ವರ್ಷ ದೊಡ್ಡವರು. (ಏಜೆನ್ಸೀಸ್)