ಸಿನಿವಾಣಿ

ಮೆಕ್ಕಾ ಆಯ್ತು; ಈಗ ವೈಷ್ಣೋದೇವಿ ದರ್ಶನ ಪಡೆದ ಶಾರುಖ್​​ ಖಾನ್​

chetannadiger

ಜಮ್ಮು: ಬಾಲಿವುಡ್ ನಟ ಶಾರುಖ್ ಖಾನ್ ಇತ್ತೀಚೆಗಷ್ಟೇ ಮೆಕ್ಕಾಗೆ ಭೇಟಿ ನೀಡಿದ ವಿಷಯ ಗೊತ್ತಿರಬಹುದು. ಈಗ ಅವರು ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ಸದ್ದಿಲ್ಲದೆ ಭೇಟಿ ನೀಡಿದ್ದಾರೆ.

ಬಾಲಿವುಡ್​ ನಟ ಶಾರುಖ್​ ಖಾನ್​ ಅಭಿನಯದ 'ಪಠಾನ್​' ಚಿತ್ರವು ಮುಂದಿನ ತಿಂಗಳು ಜಗತ್ತಿನಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಶಾರೂಖ್​ ಅಭಿನಯದ ಯಾವೊಂದು ಚಿತ್ರ ಬಿಡುಗಡೆಯಾಗಿಲ್ಲ. ಅದಕ್ಕೂ ಮುನ್ನ ಶಾರೂಖ್​ ಅಭಿನಯದ ಚಿತ್ರಗಳು ಸೋತಿವೆ. ಒಂದಿಷ್ಟು ಗ್ಯಾಪ್​ ಪಡೆದಿದ್ದ ಕಿಂಗ್​ ಖಾನ್​, 'ಪಠಾಣ್​' ಚಿತ್ರದಲ್ಲಿ ನಟಿಸಿರುವುದಷ್ಟೇ ಅಲ್ಲ, ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ತಮ್ಮ ಕೆಲಸವನ್ನು ಮುಗಿಸಿರುವ ಶಾರೂಖ್​ ಈಗ ದೈವದ ಮೊರೆ ಹೋಗಿದ್ದಾರೆ. ಹೊಸ ಚಿತ್ರಕ್ಕೆ ಮತ್ತು ತಮ್ಮ ಗೆಲುವಿಗೆ ಟೆಂಪಲ್​ ರನ್​ ಶುರು ಮಾಡಿದ್ದಾರೆ.

ಇದರ ಮೊದಲ ಹಂತವಾಗಿ, ಶಾರುಖ್ ಖಾನ್ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಭದ್ರತಾ ಸಿಬ್ಬಂದಿಯಿಂದ ಸುತ್ತುವರಿದ ಶಾರೂಖ್​, ದೇವಸ್ಥಾನದ ಕಡೆಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಕಪ್ಪು ಜಾಕೆಟ್ ಧರಿಸಿರುವುದರಿಂದ ಅವರ ಮುಖ ಸ್ಪಷ್ಟವಾಗಿ ಕಾಣುತ್ತಿಲ್ಲ. ಆದರೂ ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟವರು ಅವರೇ ಎಂದು ಹೇಳಲಾಗುತ್ತಿದೆ.

ಕೆಲವು ದಿನಗಳ ಹಿಂದೆ ಸೌದಿ ಅರೇಬಿಯಾದಲ್ಲಿ 'ಡಂಕಿ' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಶಾರೂಖ್​ ಬಿಡುವು ಮಾಡಿಕೊಂಡು ಪವಿತ್ರ ನಗರವಾದ ಮೆಕ್ಕಾಗೆ ಭೇಟಿ ನೀಡಿದ್ದರು.