ಗೋವಾ: ಹೈಪ್ರೊಫೈಲ್ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿರುವ ಪೊಲೀಸರು ಕಿರುತೆರೆ ನಟಿ ಸೇರಿ ಮೂವರು ಮಹಿಳೆಯರು ಹಾಗೂ ಮತ್ತೊಬ್ಬ ಪುರುಷನನ್ನು ಬಂಧಿಸಿದ್ದಾರೆ. ಮಹಿಳೆಯರ ಪೈಕಿ ಒಬ್ಬಳು ತೆಲಂಗಾಣ, ಇನ್ನೊಬ್ಬಳು ಜಾರ್ಖಂಡ್ ಹಾಗೂ ಮತ್ತೊಬ್ಬಳು ಮಹಾರಾಷ್ಟ್ರ ಮೂಲದವಳು.
ಹಫೀಜ್ ಸೈಯದ್ ಬಿಲಾಲ್ ಎಂಬಾತ ಪಣಜಿ ಪರಿಸರದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಪೊಲೀಸರು ಇವರನ್ನು ಬಂಧಿಸಿದ್ದಾರೆ.
ಬಲೆ ಬೀಸಿದ ಪೊಲೀಸರು ಸಂಗೊಲ್ಡಾ ಎಂಬಲ್ಲಿನ ಪ್ರತಿಷ್ಠಿತ ಹೋಟೆಲ್ಗೆ ಆತ ಯುವತಿಯರನ್ನು ಕಳಿಸಿಕೊಡುವಾಗ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ತಾನು ಹೈಪ್ರೊಫೈಲ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದು, ಪಣಜಿಯ ಪ್ರತಿಷ್ಠಿತ ಹೋಟೆಲ್ಗಳಿಗೆ ಯುವತಿಯರನ್ನು ಪೂರೈಸುತ್ತಿದ್ದ ಕುರಿತು ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.