ಸಿನಿವಾಣಿ

ಸೂರ್ಯ-ನಜ್ರಿಯಾ ನಟನೆಯ 'ಸೀನ್' ಡಿಸೆಂಬರ್​ನಲ್ಲಿ OTTಗೆ​​​ ಎಂಟ್ರಿ; ಯಾವ ಪ್ಲಾಟ್​ಫಾರ್ಮ್​ ಅಲ್ಲಿ ನೋಡಲು ಲಭ್ಯ?

  • ಡಿಸೆಂಬರ್​​ನಲ್ಲಿ 'ಸೀನ್'​ ಸಿನಿಮಾ ಒಟಿಟಿಯಲ್ಲಿ ನೋಡಲು ಅವಕಾಶ.

  • ಸೂರ್ಯ, ನಜ್ರಿಯಾ ಮತ್ತು ನೆಸ್ಲೆನ್​ ನಟನೆಯ ಸೀನ್​ ಸಿನಿಮಾ.

  • ನೆಟ್​ಫ್ಲಿಕ್ಸ್​ನಲ್ಲಿ ಸೂರ್ಯ ನಟನೆಯ ಸೀನ್​ ಸಿನಿಮಾ ನೋಡಲು ಲಭ್ಯ.

Scene OTT release and platform details: ಸೂರ್ಯ, ನಜ್ರಿಯಾ ಮತ್ತು ನಸ್ಲೆನ್ ನಟನೆಯ 'ಸೀನ್' ಸಿನಿಮಾ ಸದ್ಯ ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಾಮಾಯಣ ಭಾಗ 1 ರಿಲೀಸ್ ನಡುವೆಯೂ ತನ್ನದೇ ಆದ ಪ್ರಾಬಲ್ಯ ಉಳಿಸಿಕೊಂಡು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಸೂರ್ಯ-ನಜ್ರಿಯಾಗೆ ಒಳ್ಳೆಯ ಕಂಬ್ಯಾಕ್ ಎನಿಸಿಕೊಂಡಿದೆ. ಇದೀಗ ಸೂರ್ಯ ಫ್ಯಾನ್ಸ್‌ಗೆ ಮತ್ತೊಂದು ಗುಡ್‌ನ್ಯೂಸ್ ಸಿಕ್ಕಿದ್ದು, 'ಸೀನ್' ಸಿನಿಮಾ ಡಿಸೆಂಬರ್‌ನಲ್ಲಿ OTTಗೆ ಎಂಟ್ರಿ ಕೊಡಲು ಸಜ್ಜಾಗಿದೆ.

ಹೌದು, 'ರೋಮಾಂಚಂ' ಹಾಗೂ 'ಆವೇಶಂ' ನಿರ್ದೇಶಕ ಆಕ್ಷನ್​ ಕಟ್ ಹೇಳಿರುವ ಸೀನ್ ಸಿನಿಮಾವು ಡಿಸೆಂಬರ್ 2026 ರ ಮೊದಲ ವಾರಾಂತ್ಯದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ನೆಟ್​ಫ್ಲಿಕ್ಸ್​​ ಈ ಸಿನಿಮಾದ ಡಿಜಿಟಲ್​ ಸ್ಟ್ರೀಮಿಂಗ್​ ಹಕ್ಕನ್ನು ಪಡೆದುಕೊಂಡಿದ್ದು, 88 ಕೋಟಿ ರೂ.ಗಳನ್ನು ಪಾವತಿಸಿದೆ ಎನ್ನುವ ಮಾಹಿತಿ ಇದೆ.

ಎಂದು, ಎಲ್ಲಿ ಸೀನ್ ನೋಡಲು ಲಭ್ಯ?

ಸೀನ್​ ನವೆಂಬರ್ 6 ರಂದು ಚಿತ್ರಮಂದಿರದಲ್ಲಿ ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆಯಾದ ನಂತರ ಈ ಒಪ್ಪಂದವು ನಾಲ್ಕು ವಾರಗಳ ಅಂತರವನ್ನು ಹೊಂದಿರುತ್ತದೆ, ಹೀಗಾಗಿ ಸೀನ್ ಸಿನಿಮಾ ಮೊದಲ ವಾರಾಂತ್ಯವಾದ ಡಿಸೆಂಬರ್ 4ರಂದು ರಿಲೀಸ್ ಆಗುವ ಸಾಧ್ಯತೆ ಇದೆ. ನೆಟ್​ಫ್ಲಿಕ್ಸ್​ನಲ್ಲಿ ಸಿನಿಮಾ ನೋಡಬಹುದಾಗಿದೆ.

ಸೀನ್​ ಸಿನಿಮಾ ಬಗ್ಗೆ

ಸೀನ್​ ಸಿನಿಮಾವು ಒಂದು ಕಾಮಿಡಿ, ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದೆ. ಇನ್ಬರಾಜ್​ ಕ್ರೈಂ ಬ್ರಾಂಚ್​ ಆಫೀಸರ್​. ಕಣ್ಣು ಕಾಣದ ಅಧಿಕಾರಿ ತನ್ನ ಅಸಿಸ್ಟೆಂಟ್​ ಮಾಯಾ ಅವರನ್ನು ಕೆಲಸಕ್ಕೆ ನೇಮಿಸಿಕೊಂಡು ಅಪರಾಧಿಯನ್ನು ಹುಡುಕುವ ಸುತ್ತ ಕತೆ ಕಟ್ಟಲಾಗಿದೆ. ಬುದ್ಧಿವಂತ ಕಾಂಟ್ರ್ಯಾಕ್ಟ್​​ ಕಿಲ್ಲರ್​ ಹೇಗೆ ತನ್ನನ್ನು ತಾನು ಉಳಿಸಿಕೊಳ್ಳಲು, ಹಣ ಸಂಪಾದಿಸಲು ಜನರನ್ನು ಬಳಕೆ ಮಾಡುತ್ತಾನೆ ಎನ್ನುವ ಸುತ್ತಾ ಕಾಮಿಡಿ ಜೊತೆಗೆ ಸಿನಿಮಾ ಸಾಗುತ್ತದೆ.

ಯಾರೆಲ್ಲ ಸಿನಿಮಾದಲ್ಲಿದ್ದಾರೆ?

ವಿಶ್ವನಾಥ್​ ಆಂಡ್​ ಸನ್ಸ್, ಕರುಪ್ಪು ನಂತರ ನಟ ಸೂರ್ಯ ಅವರಿಗೆ ಇದೊಂದು ಒಳ್ಳೆಯ ಕಂಬ್ಯಾಕ್ ಸಿನಿಮಾವಾಗಿದೆ. ಅಲ್ಲದೇ, ಮಾಲಿವುಡ್​ ನಟ ನಸ್ಲೆನ್​​ ಮೊದಲ ಬಾರಿಗೆ ತಮಿಳು ಸಿನಿಮಾ ರಂಗದಲ್ಲಿ ನಟಿಸಿದ್ದು, ಇದೊಂದು ಆರಂಭಿಕ ಯಶಸ್ಸಿನ ಸಿನಿಮಾವಾಗಿದೆ. ರಾಜಾ ರಾಣಿ ಸಿನಿಮಾ ಬಳಿಕ ನಜ್ರಿಯಾ ಕಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದು, ಇಂದು ಒಳ್ಳೆಯ ಕಂಬ್ಯಾಕ್ ಸಿನಿಮಾವಾಗಿದೆ. ಇನ್ನು ಸಿನಿಮಾದಲ್ಲಿ ಥೊವಿನೋ ಥಾಮಸ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರವರ್ಗದಲ್ಲಿ ಲಾಲ್, ಆನಂದರಾಜ್, ಜಾನ್ ವಿಜಯ್ ಮತ್ತು ರಾಜಪ್ರಿಯನ್ ಇದ್ದಾರೆ. ಸೂರ್ಯ ಮತ್ತು ಜ್ಯೋತಿಕಾ 2D ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ ಝಾಗರಾಮ್ ಸ್ಟುಡಿಯೋಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.

ಸೀನ್ ಸಿನಿಮಾ ಗಳಿಕೆ

ಸೀನ್ ಚಿತ್ರವು ನವೆಂಬರ್ 10 ರಂದು ಬಿಡುಗಡೆಯಾದ ಐದನೇ ದಿನದಂದು ಭಾರತದಲ್ಲಿ 12.85 ಕೋಟಿ ಗಳಿಸಿದೆ. ಭಾರತದ ಒಟ್ಟು ಗಳಿಕೆ 97.40 ಕೋಟಿ ರೂ. ಆಗಿದ್ದು, ವಿಶ್ವಾದ್ಯಂತ 174.40 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗುತ್ತಿದೆ, (ಏಜೆನ್ಸೀಸ್).