ಬೆಂಗಳೂರು: ಲಾಕ್ಡೌನ್ನಿಂದ ಸಾಕಷ್ಟು ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ, ಶಿವರಾಜಕುಮಾರ್, ಸುದೀಪ್, ಉಪೇಂದ್ರ, ರಾಗಿಣಿ, ಹರ್ಷಿಕಾ ಪೂಣಾಚ್ಛ, ಸಂಜನಾ, ಭುವನ್ ಪೊನ್ನಣ್ಣ ಸೇರಿದಂತೆ ಹಲವು ಸೆಲೆಬ್ರಿಟಿಗಳು ಹಸಿದವರಿಗೆ ರೇಷನ್ ಕಿಟ್ ವಿತರಿಸುವುದರ ಜತೆಗೆ, ಆಹಾರವನ್ನೂ ವಿತರಿಸುತ್ತಿದ್ದಾರೆ.
ಇದನ್ನೂ ಓದಿ: ಟ್ವಿಟರ್ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್ವುಡ್ನಲ್ಲಿ ಗರಿಷ್ಠ ಫಾಲೋವರ್ಸ್ ಹೊಂದಿರುವ 2ನೇ ನಟ..
ಇದೀಗ ಸತೀಶ್ ನೀನಾಸಂ ಸಹ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಸತೀಶ್ ತಮ್ಮ ಗೆಳೆಯರಾದ ನಿತಿನ್ ಹಾಗೂ ಪ್ರಮೋದ್ ಅವರ ಜತೆಗೆ ಸೇರಿಕೊಂಡು ಕಾರ್ಮಿಕರು ಹಾಗೂ ಸಂಕಷ್ಟದಲ್ಲಿರುವವರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: ‘ಅಮೃತಮತಿ’ ಚಿತ್ರಕ್ಕೆ ಮತ್ತೆರೆಡು ಪ್ರಶಸ್ತಿಗಳು
ಮಂಗಳವಾರ ಗಾಂಧಿ ಬಜಾರ್ನಲ್ಲಿ ಖುದ್ದು ಸತೀಶ್ ಜನರಿಗೆ ಊಟ ವಿತರಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಜನರಿಗೆ ಊಟ ಹಂಚಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಪ್ರದೇಶಗಳಲ್ಲಿರುವ ಕಾರ್ಮಿಕರಿಗೂ ಸಹ ಆಹಾರ ಕೊಡುವ ಕೆಲಸವನ್ನು ಸತೀಶ್ ನೀನಾಸಂ ಮಾಡಲಿದ್ದಾರಂತೆ.