ಸಂಜಯ್ ದತ್ ಜನ್ಮದಿನದ ಪ್ರಯುಕ್ತ, ಕೆಜಿಎಫ್ ಚಿತ್ರತಂಡದಿಂದ ಅವರ ಫಸ್ಟ್ ಲುಕ್ ಉಡುಗೊರೆ ರೂಪದಲ್ಲಿ ಸಿಕ್ಕಿದೆ. ಈ ಮೊದಲೇ ಕ್ರೌರ್ಯತೆಯ ಕರಾಳ ಮುಖವನ್ನು ಬಿಡುಗಡೆ ಮಾಡಿಕೊಳ್ಳುವುದಾಗಿ ಚಿತ್ರತಂಡ ಹೇಳಿತ್ತು. ಅದರಂತೆ ಇದೀಗ ಚಿತ್ರದಲ್ಲಿನ ಸಂಜಯ್ ದತ್ ಅವರ ಲುಕ್ ಬಹಿರಂಗವಾಗಿದೆ. ವಿಲನ್ ಅವತಾರದಲ್ಲಿ ಹಿಂದೆಂದೂ ನೋಡದ ಸಂಜಯ್ ಇದೀಗ ಕೆಜಿಎಫ್ನಲ್ಲಿ ಎದುರಾಗಿದ್ದಾರೆ. ಇದೆಲ್ಲದರ ಜತೆಗೆ ಅವರ ಲುಕ್ ಬಗ್ಗೆಯೂ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಅಧೀರ ಲುಕ್ ಕ್ರೂರತನದ ಪ್ರತೀಕ. ಆತನದ್ದು ಕ್ರೌರ್ಯ ತುಂಬಿದ ಮನಸ್ಸು ಎಂದು ಚಿತ್ರತಂಡ ಓ ಮೊದಲು ಹೇಳಿಕೊಂಡಿತ್ತು. ಅದಕ್ಕೆ ತಕ್ಕಂತೆ ಖಳನ ಖಡಕ್ ಮುಖವನ್ನೇ ಕೆಜಿಎಫ್ ತಂಡ ಬಿಡುಗಡೆ ಮಾಡಿದೆ. ಜತೆಗೆ ಈ ಲುಕ್ನ ಸೃಷ್ಟಿಗೆ ಸ್ಫೂರ್ತಿ ಯಾರೆಂದೂ ಹೇಳಿಕೊಂಡಿದ್ದಾರೆ ನಿರ್ದೇಶಕರು.
2013ರಲ್ಲಿ ವಿಕಿಂಗ್ಸ್ ಸರಣಿ ತೆರೆಕಂಡಿತ್ತು. ಒಟ್ಟು ಆರು ಸೀಸನ್ಗಳಲ್ಲಿ ಕಂತುಗಳ ರೂಪದಲ್ಲಿ ಬಿಡುಗಡೆಯಾಗಿತ್ತು. ಆ್ಯಕ್ಷನ್ ಶೈಲಿಯ ಈ ಸರಣಿಯಲ್ಲಿ ಪಾತ್ರಧಾರಿಗಳ ಅವತಾರವೇ ವಿಶೇಷ. ಇದೀಗ ಆ ಶೈಲಿಯನ್ನೇ ಕೆಜಿಎಫ್ ಚಿತ್ರದಲ್ಲಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಖಳನಾಯಕನ ಕೂದಲು, ಕತ್ತಿ, ಧರಿಸಿರುವ ಉಡುಪು ಎಲ್ಲವೂ ವಿಚಿತ್ರ ಮತ್ತು ವಿಶೇಷ.
ಇದನ್ನೂ ಓದಿ: ರಿಯಾ ಕಂಟ್ರೋಲ್ನಲ್ಲಿ ಸುಶಾಂತ್, 15 ಕೋಟಿ ರೂ. ರಹಸ್ಯ ಜತೆಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಫ್ಯಾಮಿಲಿ ಲಾಯರ್!
ಇನ್ನು ‘ಕೆಜಿಎಫ್ – ಚಾಪ್ಟರ್ 2’ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡು, ಚಿತ್ರೀಕರಣೋತ್ತರ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಕರೊನಾ ಹಾವಳಿ ತಗ್ಗುತ್ತಿದ್ದಂತೆ ಬಾಕಿ ಉಳಿದ ಚಿತ್ರೀಕರಣ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ನಲ್ಲಿ ವಿಜಯಕುಮಾರ್ ಕಿರಗಂದೂರು ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ.